ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಿಂಧಿ] : ಸಂಭವವವ 118 ಈಪರಿಯುಲಾ ಶುಕ್ರಭಟ್ಟರು ತಾ ಪರೀಕ್ಷಿಸಿ ಯವರ ಶಿಪ್ಪಗೆ ವ್ಯಾಪಿಸಿದ ವರತತ್ವಬೋಧೆಯ ಸಾರದುನ್ನ ತಿಯು | ಆಪರಿಯೆ ತನಗಿಹಪರಂಗಳ ತಾಪವನು ಕಡಿಯುವುದದೆಂದೇ ಯಾಪವಿತೋತ್ತಮನು ನುಡಿದನದೆಂದರಾದಿ ಜರು | ೩೪ ಹರಿಯನ್ನು ನೆನೆಯಬೇಡವೆಂದು ತಂದೆಯ ಅಪ್ಪಣೆ ಅದನು ರಾಕ್ಷಸ ಕೇಳಿ ಮಗನನು | ಸದನದೊಳ ಸಲೆ ಕರೆದು ಕಪಿಸಿ ಮುದದಿ ನೆನೆವರೆ ಹರಿಯ ಯೆನ್ನಯ ಹಗೆಯ ನೀನಿಂದು || ಹರಿಯೇ ಸಂರಕ್ಷಕನೆಂದು ಮಗನ ಉತ್ತರ. ಕದನ ತಮಗಿಂದಾತನೊಳಗೆಯು ಮುದದಿ ನೀನೇ ಭಜಿಸೆ ತಮ್ಮಯ ವಿದಿತಕರ್ಮವನೆಂದರಾತನು ಜನಕಗಿಂತೆಂದ || મ ಕರ್ಮಫಲದಾಯಕನು ಹರಿ ತಾ ಬೊಮ್ಮರಸನು ಸರ್ವಲೋಕದ ಕರ್ಮವನು ನಿರ್ಮಿಸಿದನಾಪರಿ ದೈತ್ಯವನದಹನ | ತಮ್ಮ ಕಾವನು ನಿಗಮರಾಶಿಯ ಕರ್ಮದುದ್ಧಾರಕನು ನಾಕಜ ಬೊಮ್ಮಮುಖ್ಯರಿಗಧಿಕನಾಹರಿ ಯೆಂದು ನೆನೆದಿಹುದು | ೩೬ ಮಗನ ಮಾತಿಗೆ ಬೆಗಡುಗೊಂಡನು ಸೊಗಸ ಬೇಡೆಲೆ ತಂದೆ ಹರಿಯನು ಜಗಗಳಂತರ್ಯಾಮಿ ಯಾತನು ಯಿಲ್ಲದೊಂದಿಲ್ಲ | ಜಗದ ಜೀವರ ದೇವನಾಹರಿ 15