ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ಗೆ] ಸಂಭವಪರ್ವ 171 ೧೧ ಆಕೆಯನು ಸೇರಿಸಿದನಾತಗೆ ನಾಕಿಯೊಗ್ಯವಸಿಷ್ಠಶಿಷ್ಟ್ಯನು ಲೋಕಲೋಚನ ತಂದು ಕೊಟ್ಟನು ತನ್ನ ನಂದನೆಯ | ೧೧ ಅರಸ ಕೇಳ್ಳ ಸೂರ್ಯಪುತ್ರಿಕೆ ಗರಸನಾದನು ಬಳಿಕ ತಾ ಸಂ ವರಣನವನಿಂ ಕುರುಕುಲವು ತಾನಾಯ್ತು ಕುರುವಂಶ | ವರಪರಂಪರೆಯಾ ಪ್ರತೀಪನು ಧರಣಿಪತಿಯಾತನಲಿ ಶಂತನು ಧರೆಗಧೀಶ್ವರನಾಗಿ ಜನಿಸಿದನರಸ ಕೇಳೆಂದ | ಸರಸಿಜಾಸನ ಕೊಟ್ಟ ಶಾಪದ ಅರಸಿಯಾದಳು ಗಂಗೆ ಬಿಟಿಕಿ ಬರಲಿ ಮಕ್ಕಳು ವಸುಗಳಂಟು ವಸಿಷ್ಟ ಶಾಪದಲಿ || ನಿರಪರಾಧಿಗಳುಜನ್ಮಾಂ ತರಕೆ ಮರಣವ ಕಂಡರೊಬ್ಬ೦ ಗಿರಲು ಭೂಲೋಕದಲಿ ದೇವವ್ರತನು ತಾನೊಬ್ಬ || ೧೩ ನಾಮದಲಿ ಜನಿಯಿಸಿದನೆನಲಿಕೆ ಭೂಮಿಪತಿ ಕೇಳಿದನು ಶಾಪವ | ದೇನದಾರಿಂದಾಯ್ತದೆಂದರೆ ಮುನಿಪನಿಂತೆಂದ | ಅಷ್ಟವಸುಗಳಿಗೆ ಶಾಪ ಕಾರಣ. ಭೂಮಿಪತಿ ಕೇಳ್ಳಾ ವಸುಗಳ ಸ್ತೋಮದಲಿ ಹಿಗ್ಗಿ ಖಿಯನಂಗನೆ | ಭೂಮಿಯೊಳು ತಾನೊಬ್ಬ ನೃಪತಿಯ ವಧುವನೊಡಗೂಡಿ | ೧೪ ಆಡುತಿರಲೊಂದಿನದೊಳಂದಳು ನೋಡು ನಿನಗಾನಮೃತವೇಣಿವೆನು ರೂಢಿಯಲಿ ನಾನಿನ್ನನಮರೆಯ ಮಾಡಿ ಬದುಕಿಸುವೆ |