ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M xvi ಆದುದರಿಂದ ಇಷ್ಟುಮಾತ್ರದಿಂದಲೇ ವಿದ್ಯೆಯನ್ನು ಅಭ್ಯಾಸಮಾಡಿದವನಲ್ಲ ವೆಂದು ಹೇಳಲಾಗದು. ಈ ಕವಿಯ ಜೀವಿತಕಾಲವು ಆವುದೆಂಬುದನ್ನು ಸರಿಯಾಗಿ ನಿಲ್ಲ ಯಿಸಲು ಈ ಕವಿಯ ಗ್ರಂಥದಿಂದ ಏನೂ ಸಾಧಕ ದೊರೆಯುವುದಿಲ್ಲ. ಆದರೆ ಕೆಲವರು ಕವಿಚರಿತ್ರವಿಮರ್ಶಕರು 1508-1530 ರವರೆಗೂ ಗಣನೆಗೆ ಬರುವ ಕೆಸ್ತವಾಬ್ದಗಳಲ್ಲಿ ಇದ್ದ ವಿಜಯನಗರದ ಕೃಷ್ಣರಾ ಯರ ಕಾಲದಲ್ಲಿ ಈ ಕವಿಯು ಈಗ್ರಂಥವನ್ನು ರಚಿಸಿರಬಹುದೆಂದು ಹೇಳುವರು, ಅಲ್ಲದೆ ಈ ಕವಿಯನ್ನು 1590ನೆಯ ಕೈವಾಬ್ಬದ ಬಿದ್ದ ಕುಮಾರವಾಲ್ಮೀಕಿಯು ತೊರವೆ ರಾಮಾಯಣದ ಕೊನೆಯಲ್ಲಿ ಸರಸವರ್ಣಕಕವಿಗಳೊಳು ಭಾ ಸುರಕುಮಾರವ್ಯಾಸನೊಬ್ಬನು ಪರಕಿಸುವೊಡಾನೊಬ್ಬ ಮಗುಡೆರಡನೆಯ ವರ್ಣಕಕೆ | ವರಕುಮಾರವ್ಯಾಸನೊಬ್ಬನು ಎರಡನೆಯುಲಾನೊಬ್ಬ ಮಿಕ್ಕಿನ ಬರಡು ಕವಿಗಳ ಲೆಕ್ಕಿಸುವನೇ ಕುಮಾರವಾಲ್ಮೀಕಿ || ಎಂದು ಹೊಗಳಿರುವುದರಿಂದ ಆತನಿಗಿಂತಲೂ ಪ್ರಾಚೀನನೆಂದು ಹೇಳ ಬೇಕು. ಈ ಭಾರತದ ದಶಪರ್ವಗಳು ಬೆಂಗಳೂರು ಮತ್ತು ಮಂಗ ಆರು ಸ್ಥಳಗಳಲ್ಲಿ ಮುದ್ರಿತವಾಗಿ ಪ್ರಚುರವಾಗಿರುವಾಗ ಹೊಸದಾಗಿ ಮುದ್ರಿಸಲು ಯತ್ನಿ ಸುವುದಕ್ಕೆ ಕಾರಣಗಳನ್ನು ಹೇಳಬೇಕಾಗಿದೆ. ಮೇಲೆಕಂಡ ಸ್ಥಳಗಳಲ್ಲಿ ಮುದ್ರಿತವಾದ ಪ್ರತಿಗಳನ್ನು ನನಗೆ ದೊರೆತಿರುವ ಭಾರತದ ಲಿಖಿತಪ್ರತಿಗಳೊಡನೆ ಹೋಲಿಸಿ ನೋಡುವಾಗ ಮುದ್ರಿತಪುಸ್ತಕಗಳಲ್ಲಿ ಕವಿರಚಿತಗ್ರಂಥವು ಸಂಪೂರ್ಣವಾಗಿ ಪ್ರಕಟವಾ ಗಿರುವುದಿಲ್ಲವೆಂದು ನಾವು ಇದರಡಿಯಲ್ಲಿ ತೋರಿಸುವ ರೀತಿಯಿಂದ ವ್ಯಕ್ತವಾಗುವುದು,