ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿ 65 xviii ಮೇಲೆ ತೋರಿಸಿರುವ ಪ್ರತಿಗಳಲ್ಲಿ ಮೂರು-ಅಂದರೆ ಚ, ಛ, ಟ, ಗುರ್ತುಗಳ -ಪುಸ್ತಕಗಳು ಮಾತ್ರ ಬೆಂಗಳೂರು ಮೊದಲಾದ ಸ್ಥಳಗ ಳಲ್ಲಿ ಮುದ್ರಿಸಲ್ಪಟ್ಟಿರುವ ಪುಸ್ತಕಗಳ ಪಾಠಕ್ಕೆ ಸರಿಹೋಗುವುವು ಉಳಿದ 7 ಪ್ರತಿಗಳ ಈಗ ಪ್ರಚುರಪಡಿಸುತ್ತಿರುವ ಪಾಠಕ್ಕೆ ಆಧಾರ ಗಳಾಗಿವೆ. ಈ ಪುಸ್ತಕಗಳಲ್ಲಿ ಅಲ್ಲಲ್ಲಿ ಸ್ವಲ್ಪ ಸ್ವಲ್ಪವಾಗಿ ಪಾಠಭೇದಗಳು ಕಂಡುಬರುವುವು, ಕೆಲವೆಡೆಯಲ್ಲಿ ಬೇರೆಬೇರೆ ಪದಗಳು ಮಾತ್ರವಿದ್ದು ಅರ್ಥಭೇದವಾಗದಂತಿರುವುದು, ಕೆಲವೆಡೆಗಳಲ್ಲಿ ಕೆಲವು ಪದ್ಯಗಳ ಹೆಚ್ಚಾ ಗಿರುವುವು. ಹಾಗೆ ಹೆಚ್ಚಾಗಿರುವ ಪಕ್ಷಗಳು ಹೇಳಿದ ವಿಷಯಗಳನ್ನೆ ಹೇಳುವುವು, ಅವುಗಳಲ್ಲಿ ಅನೇಕ ಪುಸ್ತಕಗಳಲ್ಲಿ ಕಂಡು ಅತ್ಯಂತ ಸಂಗತವಾಗಿ ಇರುವುದನ್ನು ಪುಸ್ತಕಮಧ್ಯದಲ್ಲಿ ಸೇರಿಸಿ ಉಳಿದ ಏನೋ ಒಂದುರೀತಿಯಿಂದ ಹೊಂದಿಸಿಕೊಳ್ಳಬಹುದಾದ ಪುಸ್ತು ಕಾಂತರಪಾಠಗ ಳನ್ನು ಆಗಾಪುಟಗಳ ಕೆಳಭಾಗದಲ್ಲಿ ಪುಸ್ತಕದ ಚಿನ್ನದೊಡನೆ ತೊರಿ ನಿದೆ. ಹೇಗೂ ಹೊಂದದೇ ಇರುವ ಪಾಠಭೇದಗಳನ್ನು ಬಿಟ್ಟಿದೆ. ಮತ್ತು ಅಲ್ಲಲ್ಲಿ ಸಂಧಿಇಲ್ಲದೆಯ ಅಪಸಂಧಿಯಾಗಿಯ ಪಾಠಗಳು ಇರುವುವು, ಅಂತಹ ಸ್ಥಳಗಳಲ್ಲಿ ಯಾವುದಾದರೊಂದು ಪುಸ್ತಕದಲ್ಲಿ ಕಂಡು ಬಂದ ಯುಕ್ತಘಾಠವು ಅನುಸರಿಸಲ್ಪಟ್ಟಿದೆ, ಮತ್ತು ಪೂರ್ವೊ ಇರಾನುಗುಣದಿಂದ ಆಲೋಚಿಸಲಾಗಿ ಯಾವಪುಸ್ತಕಪಾಠವೂ ಹೊಂ ದದೇ ಇರುವ ಸ್ಥಳಗಳಲ್ಲಿ ಸಂಧರ್ಭವನ್ನು ಅನುಸರಿಸಿ ಬಹುಸ್ಸಿ ವಾಗಿ ಸ್ವತಂತ್ರಶೋಧನೆಯ ಮಾಡಲ್ಪಟ್ಟಿದೆ. ಅಂತು ನಿರ್ಮೂಲ ವಾಗಿಯೂ ಅನಾವಶ್ಯಕವಾಗಿಯ ಅಸಂಗತವಾಗಿಯೂ ಯಾವಶೋಧ ನೆಯ ಮಾಡಲ್ಪಟ್ಟಿರುವುದಿಲ್ಲ, ಪ್ರಾಮಾದಿಕದೋಷಗಳೇನಾದರೂ ಇದ್ದರೆ ಗುಣಜ್ಜರು ಕ್ಷಮಿಸಲರ್ಹವಾಗಿವೆ. ಈಗ ಮುದ್ರಿಸಿರುವ ಪಾಠಕ್ರಮದಲ್ಲಿ ಸೇರಿದ ಮತ್ಸಾದೃವತಾರ ಚರಿತ್ರಭಾಗವು ಮತ್ತು ಐರಾವತದ ಕಥೆಯು ಸಂಸ್ಕೃತಮೂಲಭಾರತದಲ್ಲಿ ಇಲ್ಲವಾದುದರಿಂದ ಈ ಭಾಗದ ಗ್ರಂಥಗಳು ಕುಮಾರವ್ಯಾಸಕೃತಿಯಲ್ಲಿ ಸೇರಲರ್ಹವೇ ಅಲ್ಲವೆ ? ಎಂಬುದು ವಿಚಾರಕ್ಕೆ ತಕ್ಕ ವಿಷಯ