ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xix ವಾಗಿದೆ. ಇದರ ನಿರ್ಧಾರಣಕ್ಕಾಗಿ ಸಂಸ್ಕೃತಭಾರತಸ್ಥಿತಿಯನ್ನು ಸ್ವಲ್ಪ ವಾಗಿ ಹೇಳಬೇಕಾಗಿದೆ. ಮತ್ತಾಯಭಾಷ್ಯಕಾರರಲ್ಲಿ ದೈತಭಾಷ್ಯ ಕಾರರೊಬ್ದ ರೆ ಭಾರತದ ವಿಷಯವನ್ನು ವಿಚಾರ ಮಾಡಿದವರು, ಅವರು ಸ್ವತಂತ್ರವಾಗಿ ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯವೆಂಬ ಗ್ರಂಥ ವನ್ನು ರಚಿಸಿರುವರು, ಭಾರತಕ್ಕೆ ಪಧಾರ್ಥಕಥನಪೂರಕ ವ್ಯಾಖ್ಯಾನ ವನ್ನು ಮಾಡದೆ ತಾತ್ಪರ್ಯನಿರ್ಣಯವನ್ನು ಮಾಡುವುದಕ್ಕೆ ಕಾರಣ ವನ್ನು ಹೇಳುವಾಗ क्वचिद्रथान् प्रक्षिपंति क्वचिदंतरितानपि । कुर्युः क्वचिच्च व्यत्यासं प्रमादात्क्वाचिदन्यथा ॥ अनुत्सन्ना अपि ग्रंथा व्याकुला इति सर्वशः । उत्सन्नाः प्रायशस्सर्वे कोट्यंशोपि न वर्तते ॥ ಶa As: .. .. .. .. देशे देशे तथा ग्रंथान् दृष्ट्वा चैव पृथग्विधान् ॥ ಎಂಬ ಭಾಗದಿಂದ ಅವರ ಕಾಲದಲ್ಲಿ ಭಾರತಪುಸ್ತಕಗಳು ಹೇಗೆ ಇದ್ದು ವು ಎಂಬ ವಿಷಯವನ್ನು ಹೇಳಿರುವರು, ಇದರಿಂದ ಅವರ ಕಾಲದಲ್ಲಿಯೇ ಅಂದರೆ ಸುಮಾರು ಈಗ್ಗೆ 800 ವರ್ಷಗಳಿಗೆ ಹಿಂದೆ ಭಾರತಗ್ರಂಥದಲ್ಲಿ ಅನೇಕ ಅಧಿಕಭಾಗಗಳು ಸೇರಿದ್ದು ಎಂದೂ ಇದ್ದ ಭಾಗಗಳು ಅಧಿಕ ವಾಗಿ ಹೋಗಿದ್ದುವೆಂದೂ ಒಂದೊಂದುಮನೆಯಲ್ಲಿರುವ ಪುಸ್ತಕಗಳ ಪಾಠವೂ ಒಂದೇ ರೀತಿಯಾಗಿರಲಿಲ್ಲವೆಂದೂ ವ್ಯಕ್ತವಾಗುತ್ತದೆ, ಅಲ್ಲದೆ ಈಗ ಮದ್ರಾಸು ಬೊಂಬಾಯಿ ಮೊದಲಾದ ಸ್ಥಳಗಳಲ್ಲಿ ಪ್ರಕಟಿಸಲ್ಪಟ್ಟ ರುವ ಭಾರತಗ್ರಂಥಗಳಲ್ಲಿಯ ಪಾಠಭೇದವು ಹೆಚ್ಚಾಗಿ ಕಂಡು ಬರು ತದೆ. ಭಾರತಗ್ರಂಥದ ಸಂಖ್ಯೆಯು ಸಮಾದಲfವೆಂದು ಪ್ರಸಿದ್ದಿ ಇರುವುದು, ಇಷ್ಟು ಪರಿಮಾಣವುಳ್ಳ ಭಾರತದಲ್ಲಿ ಮತ್ಸಾದೃವತಾರ ಚರಿತ್ರಗಳನ್ನು ನಿರೂಪಿಸಲಿಲ್ಲವೆಂದು ಹೇಳುವುದು ಯುಕ್ತವಾಗಿ ತೋರು ವುದಿಲ್ಲ, ಮತ್ತು ಮೇಲೆ ತೋರಿಸಿದ ಮಹಾಭಾರತತಾತ್ಪರ್ಯನಿರ್ಣ