ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒ ಸಂಧಿ ] | ಸಂಭವಪರ್ವ 231 ಒಬ್ಬನವರಲಿ ದೀರ್ಘಜಂಘನು ಒಬ್ಬಿನವರಲಿ ಕುಬುಜನೆಂಬವ ನೊಬ್ಬನವರಲಿ ಶೂನ್ಯಹೃದಯನು ನೇಕಬಾಹುಕನು | ಒಬ್ಬನೇ ತಾನೇಕನಯನನ ದೊಬ್ಬನೇ ತಾನೇಕನಾಸಿಕ ನೊಬ್ಬನೇ ತಾ ತ್ರಿತಯಹಸ್ತನು ಚತುರ್ಥಕರ್ಣದಲಿ | ೬೭ ಒಬ್ಬನೇ ತಾ ಬರ್ಬರನು ತಾ | ನಿರ್ಬುದ್ದಿ ಲೋಕದಲಿ ಕುರುಕುಲ ಗರ್ಭಕನು ತಾನೊಬ್ಬನೆಂಬವ ಕರ್ಮನಾಶಕನು | ಸರ್ಬನಾಶಕನೆಂಬನೊಬ್ಬ ನು ದುಬ್ಲಿಯಲಿ ಜನಿಸಿದನು ಕೌರವ ನುರ್ಬಿಪತಿ ಧೃತರಾಷ್ಟ್ರ ರಾಯಗೆ ಸುತರು ತಾವಾಗಿ | ೬v ಇಂತು ಜನಿಸಿದ ನೂಡುಜನಗಳ ಸಂತವಿಸಿ ಧೃತರಾತ್ಮ ಭೂಪತಿ ಸಂತತಿಯ ಗುಣವರಿದು ಮಾಡಿದ ನಾಮಕರಣವನು | ಅಂತು ಮಾಡಿದ ನೂಲುಮಾನುಪ್ಪ ಜಂತುಗಳು ಪಾಂಡವರ ವೈರಿಗ ೪ಂತು ? ಶರು ಕೇಳ೦ದ | ಜನಪತಿಗೆ ತಾನೊಬ್ಬ ವೈಶಾಲಿ ಗನೆಗೆ ಸುತನು ಯುಯುತ್ಸು ನೂಯೋಂ ದೆನಿಸಿದರು ಸುಕುಮಾರಕರು ಧೃತರಾ ನಂದನರು | ಗಾಂಧಾರಿಗೆ ದುಕ್ಕಳ ಜನನ ಜನಿಸಿದೀ ನೂಯೋಂದು ದೈತ್ವರಿ | ಗನುಜೆ ದುಕ್ಕಳಯಾದಳವನಿಪ ತನುಜೆ ಸೈಂಧವಗರಸಿ ಯಾದಳು ಭೂಪ ಕೇಳೆಂದ | * ನೂರು ಹೆಸರುಗಳು ಪೂರ್ಣವಾಗಿರುವುದಿಲ್ಲ, ಮತ್ತು ಅನೇಕವಾದ ಹೆಸ ರುಗಳು ಸಂಸ್ಕೃತ ಭಾರತಾನುಸಾರಿಯಲ್ಲ. ೭೦