ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಪರ್ವ 240 ಮಹಾಭಾರತ ಉರಗನಾಕಾರವನೆ ಧರಿಸಿಯ ತರಳರಿಹ ತೊಟ್ಟಿಲಿನ ಮೇಲಿಂ ದುರವಣಿಸಿ ಸಹದೇವನಾಕ್ಷಣ ಬಳುವಾಗಿರಲು | ಹರಿಯದಕೆ ನಸುನಕ್ಕು ಯಮಳರ ಪರಿಯನಲಿದನು ನೀವು ಧರಣಿಯ ನರರು ಬೆಸಗೊಂಡಲ್ಲದೇನುವನುಸಿರಬೇಡೆಂದ || ೧೦೧ ನೀವು ಪರಮಜ್ಞಾನಸಿದ್ದರು ನೀವು ತ್ರಿಜಗಜೀವರಾಶಿಯ ತಾವು ಕೇಳುವ ಶ್ರವಣದಧಿದೇವತೆಗಳಂದೆನುತ | ನಾವು ನಿಮ್ಮಯ ಜೀವಸಖರೆ . ನಾವು ನಿಮ್ಮಯ ಪಾರ್ಥದೇವಗೆ ನಾವು ಸಾರಥಿ ನಿಮ್ಮಭೀಷ್ಮವ ಬಯಸುತಿಹೆವೆಂದ | ೧೦೨ ಎಂದು ಬಕಲ್ಲಿಂದ ತಿರುಗಿದ ನಂದನರ ಬೀಸ್ಕೊಂಡನಾದಿನ ದಂದಿಗಾಯಿತು ಮಾಸ ಮಂದಿ ದಿನದ ಗಣನೆಗಳು | ಅಂದುಮೊದಲಾಗವರು ಜ್ಞಾನಕೆ ಸಂದುಗಾಣರು ಕುಂತಿಪುತ್ರರು ತಂದೆ ಕೇಳೊ ಮಾದೆಯಾ ವರಸುತರಿಗಸುರಾರಿ | ೧೦೩ ಬಂದು ಕರುಣಿಸಿ ಹೊದಬಕರ ವಿಂದಲೋಚನೆ ಮೊಲೆಗುಡಲಿಕಾ ನಂದನರ ಹೊರೆಗಾಗಿ ಬರಲಿಕೆ ಮುನ್ನಿ ನಂದದಲಿ || ಅಂದು ಮಲಗಿರೆ ಯಾದವೇಂದ್ರನು ಬಂದ ಹದನನು ತಿಳಿದು ಮಕ್ರಜೆ ಯಿಂದುಮುಖಿ ಸಂತೋಷ್ಠಬಟ್ಟಳು ಹರುಪದೇಪ್ಪ ಯಲಿ | ೧೦೪