ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨೦] ಸಂಭವಪರ್ವ ಭರದಿ ಬಂದುದು ಸಕಲಮುನಿಜನ ಪರಶುರಾಮ ವಸಿಷ ಗೌತಮ ವರಭರದ್ವಾಜಾತ್ರಿ ವಿಶ್ವಾಮಿತ್ರ ಮೊದಲಾದ | ಪರಮಮುನಿಜನಿದೆ ಬಂದರು ಹರುಷದಿಂದಿದಿರಾಗಿ ಬಂದರು ಸುರನದೀಸುತವಿದುರಕ್ಷಪದೊಣಾದಿಗಳುಸಹಿತ | vo ಬಂದ ಮುನಿಜನಕೆಲ್ಲ ಪೀಠವ ನಂದದಿಂ ತಂದಿರಿಸಿ ಭಕ್ತಿಯ ಅಂದು ಪಾದವ ತೊಳೆದು ಕೊಂಡರು ಚರಣತೀರ್ಥಗಳು | ಗಂಧದಕ್ಷತೆಪಡುರಸಾಯನ ದಿಂದ ತುಪ್ಪಿಯ ಮಾಡಿ ಮಿಗೆ ಮುನಿ ವೃಂದವನು ಮನ್ನಿಸಿದ ಭೀಷ್ಮನು ರಾಯ ಕೇಳೆಂದ || V ೧ ಬಾಣಮಯಮಾರ್ಗ ನಿರ್ಮಾಣ ನೆರೆದು ಬಂದುದು ಸಕಲಜನವಿಂ ನಿರಲು ಬಾರದೆನು ಫಲುಗುಣ ಶರಧನುವ ನರ್ಚಿಸಿದ ನಾನಾಪ್ರತಿವಿಧಾನಗಲಿ | ಕರವ ನೊಸಲಿಗೆ ಚಾಚಿ ದಿಗುಪಾ. ಲರಿಗೆ ವಂದನು ದಿವಶರವನು | ತಿರುವಿನಲಿ ಹೂಡಿದನು ಬರಸೆಳದೆಚ್ಚ ನಕ್ಷಯವ || V೦ ಹಿಡಿದನವನೊಂದಂಬ ತಿರುವಿಗೆ ತೊಡಿಸಿದರೆ ಹತ್ತಾಯ್ತು ಧನುವಿಂ ಬಿಡಲು ನೂಯಿಸಹಸ್ರ ಲಕ್ಷವು ಕೆಟಸಂಖ್ಯೆಯಲಿ | ಕಡೆಗೆ ಹೆಚ್ಚಿದ ಬಾಣದಳತೆಯ ಮೃಡನು ತಾನೇ ಬಲ್ಲ ಶರದಿಂ ಜಡಿದುದಂಬರವೇನನುಸುರುವೆ ಭೂಪ ಕೇಳಂದ || V೩