ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ 8 | ಮಹಾಭಾರತ ಘೋದರಿಯ ಮಾತುಳನ ಮಾವನ ನತುಳಭುಜಬಲದಿ | ಕಾದಿ ಗೆಲಿದನನಣ್ಣನವೆಯ ನಾದಿನಿಯ ಜಠರದಲಿ ಜನಿಸಿದ ನಾದಿಮೂರುತಿ ಸಲಹೊ ಗದುಗಿನ ವೀರನಾರಯಣ | ಶರಧಿಸುತೆ ಸನಕಾದಿವಂದಿತೆ ಸುರನರೋರಗಮಾತೆ ಸುಜನರ ಪೊಖೆವ ದಾತೆ ಸುರಾಗ್ರಗಣ್ಯಸುಮುನಿವರಸ್ತುತೇ | ಪರಮಕರುಣಾಸಿಂಧು ಪಾವನ ಚರಿತೆ ಪದ್ಮಜಮುಖ್ಯಸಕಲಾ ಮರಸುಪೂಜಿತೆ ಲಕ್ಷ್ಮೀ ಕೊಡುಗೆಮಗಧಿಕಸಂಪದವ | ವರಚತುರ್ಮುಖ ಕಮಲಸಂಭವ ಕರಕಮಂಡಲು ವಿಶ್ವಯೋನಿಜ | ಸುರನರೋರಗವಂಜನ ಪರಮೇಪಿ ಲೋಕೇಶ | ಸರಸಿರುಹಭವಪೀಠ ನಾರದ ವರಪಿತಾವಹ ಹಂಸವಾಹನ ಹರಿಹರಪ್ರಿಯ ರಕ್ಷಿಸೆನ್ನನು ಭಾರತೀರಮಣ || ವಾರಿಜಾಸನೆ ಸಕಲಶಾಸ್ತ್ರ ವಿ ಚಾರದುದ್ಯವೆ ವಚನರಚನೋ ದಾರೆ ಶ್ರುತಿಪರಾಣಿಕಾಗಮಸಿದಿ ದಾಯಕೆಯೆ | ಸರಿಸುರಪತಿಸಕಲಮುನಿಜನ? ಭೂರಿಗಣಗಣಪದದ 1 ಯುಕ್ತಿಯೆ ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ನೆಯಲಿ || ಶರಣಸಂಗವ್ಯಸನ ಭುಜಗಾ ಭರಣನವರಕಿರೀಟವಂಡಿತ 1 ಸೂರಿಗಳಿಗನುಪಮದ, ಚ. d