ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧] ಪೀಠಿಕಾಸಂಧಿ, ಚರಣ ಚಾರುಚರಿತ್ರ ನಿರುಪಮ ಫಾಲಶಿಖಿನೇತ್ರ | ಕರಣನಿರ್ಮಳಭಜಕರಘಸಂ ಹರಣ ದಂತಿಚಮೂರುಚರ್ಮಾಂ ಬರನೆ ಸಲಹುಗೆ ಭಕ್ತಜನವನು ಪಾರ್ವತೀರಮಣ | ೬ ಗಜಮುಖನ ವರಮಾತೆ ಗೌರಿಯೆ ತ್ರಿಜಗದರ್ಚಿತ 1 ಚಾರುಚರಣಾಂ ಬುಜೆಯೆ ಪಾವನಮೂರ್ತಿ ಪದ್ಮಜಮುಖ್ಯಸುರಪೂಜೆ | ಭಜಕರಘಸಂಹರಣೆ ಸುಜನ ವೈಜಸುಸೇವಿತೆ ಮಹಿಷಮರ್ದಿನಿ ಭುಜಗಭೂಷಣನರಸಿ ಕೊಡು ಕಾರುಣ್ಯದಲಿ ಮತಿಯ | v ವರಮಣಿಗಳಿಂದೆಸೆವ ಮುಳಿಯ ಸರಸಿಜಾರಿಯ ಕಿರಣ ಧೂಳಿಯ ವಿರಚಿಸುವ ಸಿಂಧೂರಭಾಳದಿ ಕುಣಿವ ಕುಂತಳದ | ಕರಿನಿಭಾಕ್ಷತಿಯೆನಿಪ ವದನದ ಕರದ ಪಾಶದ ಮೋದಕದ ವಿ ಸ್ವರದ ಗಣಪತಿ ಮಾಡೆಮಗೆ ನಿರ್ವಿಘ್ನ ದಾನವನು 2 | ದುರಿತಕುಲಗಿರಿವಜ್ರದಂಡನು ಧರೆಯ ಜಂಗಮಮೂರ್ತಿ ಕವಿವಾ ರಿರುಹದಿನಮಣಿ ನಿಖಿಳಯತಿಪತಿದಿವಿಜವಂದಿತನು | ತರಳನನು ತನ್ನವನೆನಿಸಿ ಪತಿ ಕರಿಸಿ ಮಗನೆಂದೊಲಿದು ಕರುಣದಿ ವರವನಿತ್ತನು ದೇವ ವೇದವ್ಯಾಸಮುನಿರಾಯ | ೧೦ 1 ತ್ರಿಜಗವಂದಿತೆ, * 2 ದಾಯಕವ, ಕ, ಖ, ಗ, ಮುದ್ರಿತ ಪುಸ್ತಕದಲ್ಲಿರುವ ಗಣಪತಿ ಪ್ರಾರ್ಥನೆಯ ಮತ್ತೊಂದು ಪದ್ಯ ಬಹುಕೋಠಗಳಲ್ಲಿಲ್ಲವಾಗಿ ಬಿಟ್ಟಿದೆ. ೯