ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅವತರಣಿಕೆ. ಈ ಪುಸ್ತಕವು ಕರ್ಣಾಟಕಮಹಾಭಾರತದ ಮೊದಲನೆಯ ಸಂಚಿ ಕೆಯಾಗಿರುವುದು, ಈಮಹಾಭಾರತಗ್ರಂಥವು ತಿಳಿಗನ್ನಡದಲ್ಲಿ ಕುಮಾ ರವ್ಯಾಸ' ನೆಂದು ಪ್ರಸಿದ್ಧನಾದ ಕವಿಯಿಂದ ಭಾಮಿನೀಪಟ್ಟದಿಯಲ್ಲಿ. ರಚಿಸಲ್ಪಟ್ಟಿದೆ. ಈ ಕವಿಯ ಭಾಷೆಯ ವಿಷಯದಲ್ಲಿಯೂ ಶೈಲಿಯ ವಿಷಯದಲ್ಲಿಯೂ ಹೇಳಬೇಕಾದ ವಿಷಯವೆಲ್ಲಾ (ಕನ್ನಡ ಸೆಕರ್ಪ ನಂಬರು ಮೂರನೆಯದಾದ) ಉಪೋದ್ಘಾತಸಂಚಿಕೆಯ ಅವತರಣಿಕೆಯಲ್ಲಿ ಹೇಳಿರುವುದಕ್ಕಿಂತಲೂ ಹೆಚ್ಚಿಲ್ಲವಾದುದರಿಂದ ಅವುಗಳಲ್ಲಿಯೂ ಹೇಳ ಲಾವಶ್ಯಕವಿಲ್ಲ. ಪ್ರಕೃತ ಈ ಕವಿಯ ವಿಷಯದಲ್ಲಿ ಮಾತ್ರ ವಿಚಾರವು ಆವಶ್ಯಕವಾಗಿದೆ. ಈ ಕರ್ಣಾಟಕಮಹಾಭಾರತಕ್ಕೆ ಕರ್ತನಾದ ಕವಿಗೆ (ಕುಮಾರ ವಾಸ' ನೆಂಮ ಪ್ರಸಿದ್ದಿಯಿರುವುದು, ಇದು ವಾಸ್ತವವಾಗಿ ಬಿರುದಾಗಿರಬ ಹುದೇ ಹೊರತು ರೂಢನಾಮವಲ್ಲ. ಈತನ ಸಂಕೇತನಾಮವು 'ಗದು ಗಿನ ನಾರಣಪ್ಪ ' ಎಂದು ಕೆಲವರು ಹೇಳುವರು, ಮತ್ತು ಕೆಲವರು ಈತ ನಹೆಸರು ಗೊತ್ತಿಲ್ಲವೆಂದೆನ್ನು ವರು, ಈತನ ವಿಷಯವನ್ನು ವಿಚಾರಿ ಸಲಾಗಿ ಗದುಗಿನ ಸವಿಾಪದ ಜನರಹೇಳಿಕೆಯಿಂದ ಈತನ ಪರ್ವಿಕರು ಕುಲಕ್ರಮವಾಗಿ ಶಾನಭೋಗರೆಂತಲೂ ವೈವಬ್ರಾಹ್ಮಣರೆಂತಲೂ ತಿಳಿದು ಬರುತ್ತದೆ. ಆದರೆ ಮತ್ತೆ ಕೆಲವರು ಬೇರೆ ವಿಧವಾಗಿ ಹೇಳು ವರು, ಅದೆಂತೆಂದರೆ : ಸಂಧಿಗಳ ಕೊನೆಯಲ್ಲಿ ವೀರನಾರಾಯಣ ನಾಮಾಂಕನಮಾತ್ರದಿಂದಲೇ ಈತನು ವೈಪ ವನೆಂದು ಹೇಳಲಾಗದು. ಅಲ್ಲದೆ ಆದಿಪರ್ವದ ಹದಿನಾಲ್ಕನೆಯ ಸಂಧಿಯ 37ನೆಯ ಪದ್ಯದಲ್ಲಿ |