ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

iy “ ಹರಹರ ಮಹಾದೇವೆನುತ ತೆಗೆದಪ್ಪಿದನು ಬಾಲಕನ” ಎಂದೂ ಇನ್ನೂ ಇದೇರೀತಿಯಲ್ಲಿ ಅನೇಕ ಸ್ಥಳಗಳಲ್ಲಿ * ಶಿವ ಶಿವ ” ಎಂದು ಹೇಳಿರುವುದರಿಂದಲೂ, ಅರಣ್ಯಪರ್ವದ'4-5-6ನೆಯ ಸಂಧಿಗಳಲ್ಲಿ ಶಿವಭಕ್ತಿಯನ್ನು ಚೆನ್ನಾಗಿ ತೋರ್ಪಡಿಸಿ ಇರುವುದರಿಂದಲೂ, ಈತನು ಅದೈತಿಯೆಂದು ನಿರ್ಧರಿಸಬಹುದೆಂದು ಹೇಳುವರು. ಈ ಉಭಯಪಕ್ಷಗಳಿಗೂ ಇರುವ ಬಲಾಬಲಗಳನ್ನು ಸ್ವಲ್ಪವಾಗಿ ತೋರಿಸುವುದು ಯುಕ್ತವಾಗಿದೆ. ಸಾಧಾರಣವಾಗಿ ಕವಿಗಳು ಮತ್ತು ಇತರ ಗ್ರಂಥಕರ್ತರು ತಾವು ರಚಿಸುವ ಗ್ರಂಥದ ಆದಿಮಧ್ಯಾಂತಭಾಗ ಗಳಲ್ಲಿ ತಾವು ಉಪಾಸಿಸುವ ಇಪ್ಪದೇವತೆಯನ್ನು ಪ್ರಾರ್ಥಿಸುವುದು ಅಂತ ಹ ದೇವತೆಯ ನಾಮಾಂಕನವನ್ನು ಮಾಡುವುದು ಸುಪ್ರಸಿದ್ದ ವಲ್ಲವೆ ? ಈ ಕವಿಯು ಗ್ರಂಥಾದಿಯಲ್ಲಿ ವೀರನಾರಾಯಣನನ್ನೇ ಭಜಿಸಿರುವನು. ಮತ್ತು ಸಂಧ್ಯಂತಗಳಲ್ಲಿಯೂ ಆತನ ನಾಮವನ್ನೇ ಅಂಕಿತಮಾಡಿರುವನು. ಇದು ನಾರಯಣಭಕ್ಕನಲ್ಲದವನಿಗೆ ಸಲ್ಲಲಾರದು. ಆದರೆ ಅಲ್ಲಲ್ಲಿ ' ಹರ ಹರ' • ಶಿವಶಿವ' ಎಂದು ಶಿವನಾಮವನ್ನು ಉಪಯೋಗಿಸುತ್ತಾ ಬಂದಿ ರುವುದರಿಂದ ಈತನನ್ನು ಶಿವಭಕ್ತನೆಂದು ಏಕೆ ಕೇಳಬಾರದು? ಎನ್ನ ಬಹುದು, ಮೇಲೆ ತೋರಿಸಿದ ಸ್ಥಳಗಳಲ್ಲಿ - ಹರಹರ ತಿವಶಿವ' ಇವೇ ಮೊದಲಾದ ಪದಗಳು ಪ್ರಕರಣವನ್ನು ಪರ್ಯಾಲೋಚಿಸಲಾಗಿ ಭಕ್ತಿ ಪೂರ್ವಕ ಶಿವಸ್ಮರಣಾರ್ಥವಾಗಿ ಉಪಯೋಗಿಸಿದಂತೆ ತೋರಿ ಬರುವು ದಿಲ್ಲ. ಅಲ್ಲದೆ ಆಶ ರ್ಯಾದರ್ಥದಲ್ಲಿಯೇ ಉಪಯೋಗಿಸಿರುವನು. ಇಂತಹ ಪ್ರಯೋಗಗಳು ಸಂಸ್ಕೃತದಲ್ಲಿಯೂ ಕಾಣಬರುವುದು. ಹೇಗೆಂದರೆ.. “ शिव शिव परितापं कोवदेत्कोमलांग्याः ॥ ಎಂದು (ಪುಷ್ಪಬಾಣ ವಿಲಾಸದಲ್ಲಿ) ಖೇದಾತಿಕಯದಲ್ಲಿಯೂ (Aಈ ಳಕೆ ara gra” ಎಂದು ಆಶ್ಚರ್ಯಾರ್ಥದಲ್ಲಿಯೂ ಒ