ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

146 ಮಹಾಭಾರತ [ಸಭಾಪರ್ವ ಸುರರಿಗಾದುದು ತುಪ್ಪ ಧರಣೀ ಸುರಮುನೀಂದ್ರರಿಗಾಯ್ತು ಶೂದ್ರ ತರರಿಗಾಚಂಡಾಲಪರಿಯಂತಾಯ್ತು ಸತ್ಕಾರ | ಧರಣಿಪಾಲಕರಿಗೆ ಚತುಸು ಗರದ ತಡಿಪರಿಯಂತ ವಿಶಂ ಭರೆಯ ಮಾನ್ಯರ ಮನ್ನಿಸೆಂದನು ಭೂಪತಿಗೆ ಭೀಷ್ಮ ॥ 84. ಸ್ನಾತಕಪ್ರಿಯಖುಗಾಚಾ ಯಾತಿಶಯಗುರುನೃಪತಿಸಹಿತೀ ಭೂತಳದೊಳಿಂತಾರು ಮಾನಿಸರರ್ಘಯೋಗ್ಯರಲೆ | ಪ್ರೀತಿಯಲಿ ನೀನರ್ತ್ಥವನು ವಿ ಖ್ಯಾತರಿಗೆ ಮಾಡೆನಲು ಮನ್ನಣೆ ಮಾತನಾರೆನೆ ವೀರನಾರಾಯಣನ ತೋಯಿಸಿದ || ಎಂಟನೆಯ ಸಂಧಿ ಮುಗಿದುದು, ೪೩ ~ -~- ಒ೦ ಬ ತ ನೆ ಯ ಸಂಧಿ , ಸೂಚನೆ. ರಾಜಸೂಯದಲಗ್ರಪೂಜಾ ರಾಜಿತನ ಪ್ರತಿಮಳಿಮನೆಯ ವಿ ರಾಜೆತನ ಶಿಶುಪಾಲ ಜಗವನು ಪೂರ್ವವೈರದಲಿ | ಧರ್ಮರಾಯನು ಅಗ್ರಪೂಜಾರ್ಹರಾರೆಂದು ಭೀಷರನ್ನು ಕೇಳುವಿಕೆ, ಕೇಳು ಜನಮೇಜಯ ಧರಿತ್ರೀ ಪಾಲ ಮುನಿಮಧ್ಯದಲಿ ನಿಂದು ನೃ ಸಾಲ ಭೀಮ್ಮಂಗೆಂದನತಿಗಂಭೀರನಾದದಲಿ |