ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

264 ಮಹಾಭಾರತ [ಸಭಾಪರ್ವ ಸುಳಿಸು ಹಾಸಂಗಿಗಳ ಮೋಹರ ಗೊಳಿಸು ಸಾರಿಯನೊಂದು ರೇಖೆಯ ಬಯಲೊಂದೇ ಕೋಟಿ ಹಾಯ್ಕೆಂದೊದಗಿದನು ಭೂಪ | ೩ ದುಗುಣಕಿಕ್ಕಿದನರಸನಾಚೆಗೆ ತೆಗೆದನವ ಮೂಲೆಂದು ನಾಲ್ಕ ಕುಗಿದನವನಿಪನ್ನೆದ ಕಳದನು ಬಹಳವನು ಶಕುನಿ | ತೆಗೆದ ನಿಮ್ಮಡಿಗರಸನವನಾ ತ್ರಿಗುಣ ಪಂಚಕಸಪ್ಪನವಕ ಪ್ರಗುಣವೆಂದನು ಶಕುನಿ ಸೋಲಿಸಿದನು ಮಹೀಪತಿಯ || ೪ ಎಣಿಸಿದನು ರೇಖೆಗಳನಿಮ್ಮಡಿ ಗಣಿತಸಂಖ್ಯಾಸಿದ್ದ ವಸ್ತುವೆ ನೆಣಿಸಲರ್ಬದಸಂಖ್ಯೆಯಾದುದು ಹಲಗೆ ಯೊಂದಅಲಿ | ಗುಣನಿಧಿಯ ಮಗಳೊಡ್ಡ ಲಾಪರೆ ಪಣವ ವಚನಿಸು ಕೇಳ್ಳನೆನೆ ನೃಪ ಗುಣಶಿರೋಮಣಿ ಧರ್ಮಸುತ ನಸುನಗುತಲಿಂತೆಂದ | ೫ ಹಡು ಸಾರಿಯ ರೆಬೇರೇಖೆಗೆ ಮಾಡಿತರ್ಮುದ ಧನ ಸುಯೋಧನ ನಾಡಿ ನೋಡಲಿ ಹಾಯ್ದು ಹಾಸಂಗಿಗಳ ಹಾಯ್ಕೆನುತ | ಆಡಿದನು ಧರ್ಮಜನು ಖಾಡಾ ಖಾಡಿಯಲಿ ಸರಿಗಳೊಡನೆ ಹೋ ಗಾಡಿದನು ಭಂಡಾರವನು ಜನನಾಥ ಕೇಳೆಂದ || ಸಾರಿ ಸೋತುವು ಸೋಲ ನಿಮಗನು ಸಾರಿ ನಿಮ್ಮೆವರು ವನಾಂತಕೆ ಸಾರಿ ಸಾಕಿನ್ನೊಡ್ಕಲಾಪರೆ ಮತ್ತೆ ನುಡಿ ಧನವ |