ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

278 ಮಹಾಭಾರತ [ಸಭಾಪರ್ವ” ಎನ್ನ ಮೆಚ್ಚಿಸಿ ಕೊಡಲಿ ತಾ ಬಹೆ ಸಿನ್ನು ಹೊಗೆನಲವನು ಭಯದಲಿ ತನ್ನೊಳಗೆ ಬಿದುತ್ತ ಬಂದನು ಕೌರವನ ಹೊರೆಗೆ | My ಅವನು ಸಭೆಗೆ ಬಂದು ಆವರ್ತಮಾನವನ್ನು ಹೇಳುವಿಕೆ ಬೇಯ ದೇವಿಯರೆಂದಮಾತಿದು ರಾಯ ಮುನ್ನ ವೆ ತನ್ನ ಸೋತಬು ಜಾಯತಾಕ್ಷಿಯ ಬತಿಕ ಸೋತೊಡೆ ಧರ್ಮಸೂಕ್ಷ್ಮದಲಿ | ರಾಯಸಭೆಯಲಿ ಹಿರಿಯರದಿದ ಮಾಯತವ ಹೇಳಿದರೆ ಬಹೆನೆಂ ದಾಯುವತಿ ಬಿನ್ನಹವ ಮಾಡಿದಳಂದು ಕೈಮುಗಿದ || ರ್೫ ರಾಯ ಸೋತನು ತನ್ನ ನಾವ ನ್ಯಾಯದಲಿ ತಹುದಿಲ್ಲ ತೊತ್ತಿರ ಲಾಯದಲಿ ಕೊಡುವೆವು ಕರೆ ಯೆನಲಿವನ ಗರಹೊಡೆದು | ವಾಯುಸುತನಂಬಿಸುವನೆಂದೀ ನಾಯಿ ಬೆದರಿದನಕಟ ದೂತನ ಬಾಯ ನೋಡಾ ಯೆಂದು ಬೈದನು ಕೌರವರ ರಾಯ || 40 ದುಶ್ಯಾಸನನನ್ನು ಕಳುಹಿಸುವಿಕೆ, ತಮ್ಮ ಬಾಲ್ವೆ ಹೋಗು ನೀ ದಿಟ ನಮ್ಮವರೆ ಹಿಡಿದೆಳದು ತಾ ನೃಪ ರೆಮ್ಮ ಕಿಂಕರರೈವರಿವರಿದ್ರೆನ ಮಾಡುವರು | ತಮ್ಮ ಕರ್ಮವಿಪಾಕಗತಿ ತಮ ತಮ್ಮನೇ ಕಾಡುವುದು ಧರ್ಮದೊ ಳಮ್ಮ ಕಾರಣವಲ್ಲ ನೀ ಹೋಗೆಂದು ನೇಮಿಸಿದ || ೧ ಗಾಳಿಯಳ್ಳಯ ನಿಳಿಯಲಕ್ಷ್ಮಿ ಜ್ವಾಲೆಯಲಿ ತಡೆಯುವೆ ಕಡುಹಿನ ಕಾಳಕೂಟದ ನದಿಗೆ ನಂಜಿನ ಹೊನಲು ಬೆಳಿಸಿತಲೆ |