ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೫] ದೂತಪರ್ವ 279 ವಾಳಯವೆ ದುಶ್ಯಾಸನನು ಜಗ ದೂಚಿಗದ ದುರದುಂಬಿ ಕುರುಪತಿ ಮೇಲೆ ನೇಮಿಸಲುಚಿತಗೈವನೆ ಭೂಪ ಕೇಳೆಂದ || ೬.೦ ಹರಿದನವ ಬೀದಿಯಲಿ ಬಿಡುದಲೆ ವೆರಸಿ ಸತಿಯರಮನೆಗೆ ಬಾಗಿಲ ಚರರು ತಡೆದರೆ ಮೆಟ್ಟಿದನು ತಿವಿದನು ಕಠಾರಿಯಲಿ | ತರುಣಿಯರು ಕಂಡಂಜೆ ವೊಕ್ಕರು ಸರಸಿಜಾಕಿಯ ಮಡೆಯನಾಖಳ ನುರುವಣಿಸಿದನು ರಾಹು ತಾರಾಧಿಪನ ತಗುಬ್ಬ೦ತೆ || ೬೩ ದೌಪದಿಯನ್ನು ಕುರಿತು ದುಶ್ಯಾಸನನ ಕರವಚನಗಳು, ಬಂದನವನಬುಜಾಕ್ಷಿ ಯಿದಿರಲಿ ನಿಂದನೆಲೆಗೇ ಗರುವತನವಿದು ಹಿಂದೆ ಸಲುವುದು ಸಲ್ಲದಿದು ಕುರುರಾಜಭವನದಲಿ | ಇಂದು ಮೆಜಿವರೆ ನಮ್ಮ ತೊತ್ತಿರ ಮುಂದೆ ಮೇಲೆ ನಡೆ ಮಂಚದಿಂದಿಚೆ ಯೆಂದು ಜಗದನು ಕೌರವಾನುಜನಾಮಹಾಸತಿಯ || ೬೪ ಜನಪನನುಜನು ನೀನೆನಗೆ ಮೈ ದುನನಲಾ ತಪ್ಪೇನು ಯಮನಂ ದನನು ಸೋಲಲಿ ತನ್ನ ಪ್ರಶ್ನೆಗೆ ಕೊಡಲಿ ಮಾಮಾತ || ಅನುಜ ಕೇಳ್ಯ ಪುಷ್ಪವತಿಯಾ ನನಗೆ ರಾಜಸಭಾಪವೇಶನ ವನುಚಿತವಲೇ ಹೇಡೆನಲು ಖಳರಾಯ ಖತಿಗೊಂಡ | ೬೫ ಎಲ್ಲಿಯದು ದಪ್ಪ ಮಹಿಮಾ ತೆಲ್ಲಿಯದು ನೀ ಪುಪ್ಪವತಿಯಾ ಗಲ್ಲಿ ಫಲವತಿಯಾಗು ನಡೆ ಕುರುರಾಜಭವನದಲಿ | 0