ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜ ಸಂಧಿ ೧೬) ಅನುನ್ಸೂತಪರ್ವ 341 ಉಬ್ಬು ಮುರಿದುದು ತಮ್ಮೊಳೊಬ್ಬರ ನೊಬ್ಬರೀಕ್ಷಿಸಿ ಕೈಯ್ಯ ಗಲ್ಲದ ನಿಬ್ಬರದ ನಿಡುಸುಯ್ದ ಬೋಡಿದ ಮನದ ಕೊಳಾದಿಯ || ಜಬ್ಬುಲಿಯ ಜಾಳಿಗೆಯ ಚಿಂತೆಯ ಹಬ್ಬುಗೆಯ ಹರವರಿಯು ಖೇದದ ಮಬ್ಬಿನಲಿ ಮುಲುಗಿದರು ಸಲುಗುಣಪವನಜಾದಿಗಳು || ೬೦ ದೌಪದಿಯು ಧರ್ಮರಾಜ ಮೊದಲಾದವರು ಮಾತನಾಡುವಿಕೆ, ಕಂಡಿರೇ ಧೃತರಾಷ್ಟ್ರ ನನು ಕೈ ಕೊಂಡಿರೇ ವನದೀಕ್ಷೆಯನು ಪಿತ ನಂಡಲೆದು ಕೃಷ್ಣಾಜಿನವನುಡಿಗೆಯ ನಿತ್ಯನಲೆ | ಚಂಡಿಕೊಂಡರೆ ನೀವು ನಿಮ್ಮಯ ಭಂಡತನ ಸಾಕಿನ್ನು ವನವಾ ಖಂಡಗ್ರಸ್ಥವಲೆ ನಮಗಿನ್ನೆಂದಳಿಂದುಮುಖಿ || ವಾರಕದ ರತ್ನಾಭರಣಪ್ಪ ಗಾರವೇಕಿನ್ನವನು ತೆಗೆಯಲಿ ಧಾರಿಣಿಯ ಲಂಪಟವನುಟಿಯಲಿ ವನವನಟ್ಟಿರಲಿ ! ಭೂರಿಸಭೆಯಲಿ ನಮ್ಮ ಭಂಗಿಸಿ ನಾರಿಯರು ಗಹಗಹಿಸಿ ನಗುತಿಹ ಕಾರಣವ ಕೈಕೊಳಲಿ ತೆಗೆ ಶೃಂಗಾರಗಳನೆಂದ || ಕಳದು ಬಿಸುಟರು ಮತ್ತೆ ರತ್ನಾ ವಳಿಯ ವಿವಿಧಾಭರಣವನು ಪರಿ ಲಲಿತಕೃಪ್ಲಾ ಜಿನವ ಹೊದೆದರು ಹಾಯ್ಕೆ ಹಚ್ಚಡವ | ನಳಿನಮುಖಿ ಬಹುವಿಧದ ಮುಕ್ತಾ ವಳಿಯಲಂಕಾರವನುಗಿದು ಸಭೆ ಯೋಳಗೆ ಬಿಸುಟಳು ನಿಂದಳಬಲೆ ನಿಜಾನುರೂಪದಲಿ | ೬೩ & ೧ & ೧ ಒ ೬. ೪ ೧