ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೯೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಹಾಭಾರತ [ಸಭಾಪರ್ವ ಮಗನೆ ತಂದೆಯ ಮಾರ್ಗದಲಿ ನಂ ಬುಗೆಯೋ ಕರುಣಾನಿಕ್ಷಣದ ನಂ ಬುಗೆಯೋ ಚಿತ್ತೆಸೆಂದರಾಮಂತ್ರಿಗಳು ಕೈಮುಗಿದು || ೧೪೬ ಜರಾಸಂಧನ ಸಂಸ್ಕಾರ. ಶವವ ಸಂಸ್ಕರಿಸುವುದು ಮಾಗಧ ನವಸಿಯಲಿ ಸಹದೇವಗಭಿಪೇ. ಕವನು ಮಾಡಿಸಿದಲ್ಲದೆತ್ತಲು ಮುಖವುದಿಲ್ಲೆಂದು | ಅವರಿಗಭಯವನಿತ್ತು ಪರಿವಾರ ರವನು ಕಳುಹಿದನಿಲಾತನ | ಯುವತಿಯರು ಬೇಡಿಗರು ವ ಯ ಪಡೆದು ಮರಳಿದರು || ೧೪v ಅವನ ಸಂಸ್ಕಾರದಲಿ ನಾರೀ ನಿಮಯ ಸರಗತವಾಯ್ತು ವೈದಿಕ ವಿಧವಿಧಿಯು ಮಾಡಿದರು ಶಾವಕ್ರಿಯಾದಿಗಳ || ಅವನ ಮಗ ಸಹದೇವನಾತಂ ಗವಸಿಯಲಿ ಪಟ್ಟಾಭಿಷೇಕೊ ತೃವನ ಮಾಡಿಸಿ ಕೊಟ್ಟನಭಯವನಾಪರಿಗ್ರಹಕೆ | ೧೪೯ ಸಹದೇವನಿಗೆ ರಾಜ್ಯವನ್ನು ಕೊಡುವಿಕೆ, ತೀರುಗು ತೇಟಿಗಳ ನಾಭಂ ಡಾರವನು ಗಜಘಟೆಸಹಿತ ವಿ ಸ್ವಾರವಿಭವವನೊಪುಗೊಂಡರು ಮಗಧನಂದನನ | ಧಾರುಣಿಯನವಗಿತ್ತು ಸಕಲಮ ಹೀರಮಣರನು ಕಳುಹಿ ಬಂದನು ಪೀರನಾರಾಯಣನು ತಕ್ರಪ್ರಸ್ಥಪುರವರಕೆ || ೧೫೦ ಎರಡನೆಯ ಸಂಧಿ ಮುಗಿದುದು -೦೦೦೦೦ - -