ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

150 ಮಹಾಭಾರತ (ಆದಿಪರ್ವ ಆಗ ಪಾಂಡವರ ವಿಷಯದಲ್ಲಿ ದ್ರುಪದನ ಚಿಂತೆ ಪ್ರಚುರಮಣಿ ಯಿದೆ ಪದ್ಮರಾಗದ ರುಚಿರರತ್ನವು ಜಾತರೂಪದಿ ಖಚಿತವಾದೊಡೆ ಪುಣ್ಯವೆನುತಾ ದ್ರುಪದ ಚಿಂತಿಸಿದ | ೩೦ ದೇವರೆನಗಾಪಾಂಡುಪುತ್ರರ ನೋವಿ ಕೊಟ್ಟೂಡೆ ಹರುಷವೆನುತಾ. ಭಾವದಲಿ ದ್ರುಪದನ ಪದೇವರ ನೆನೆಯುತಿಂತೆಂದ | ಈವಧುವಿಗಿಂನವರ ಕಾಣೆನು ದೇವರೆಂದಾಪಾಂಡುಪುತ್ರರ | ಕಾವನಾದೊಡೆ ಯೆನ್ನ ಪುಣ್ಯಕದಾರು ಸರಿಯೆಂದ | ೩೧ ಬಟಿಕವರು ಕೌಂತೇಯರಾಗಳು ಹೋಟಲೊಳಗೆ ಭಿಕ್ಷಾನ್ನ ನೆತ್ತಿಯ ಘಟಿಲನ್ನೆ ತಂದವರು ಹೊಕ್ಕು ಕುಲಾಲಮಂದಿರವ || ಒಳಗೆ ದೇವಾರ್ಚನೆಯ ಮಾಡಿಯೆ ನಳಿನನಾಭಾರ್ಪಿತವನುಂಡರು ನಲಿಯುತಲಿ ತಾವಂದು ಪಾಂಡವರರಸ ಕೇಳೆಂದ || ಇರುಳು ನೂಕಿದರಲ್ಲಿ ಮರುದಿನ ತರಣಿಗರ್ಫೈವನಿತ್ತು ವಿಹಿತದಿ ಭರದನುಪಾನವನು ಮಾಡಿಯೇ ಬಹಿಕ ಪುರದೊಳಗೆ | ಧರಣಿಸುರಗೃಹದೊಳಗೆ ಭಿಕವ ತಿರಿದು ತಂದರು ಮತ್ತೆ ಮಾತೆಯ ಕರದಲರ್ಪಿಸಿ ಬಳಿಕ ಭೋಜನಮಾಡಿ ಹರುಷದಲಿ || ೩೩ ಉಂಡು ದುಪದಾಲಯದ ಭೂಸುರ ಹಿಂಡಿನಲಿ ಭಾವದಲಿ ಕುಳಿತಿರೆ ಗಂಡುಗಲಿಗಳು ಮೇಲೆದರಾದ್ರಿಜರಾಜಸಭೆಯೊಳಗೆ || ܩܛ