ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೯] ಸ್ವಯಂವರಪರ್ವ 169 ಮಡಿಸಿದೆಲೆ ಬೆರಳೂಳಗೆ ಬಾಯೊಳ ಗಡಸಿದೆಲೆ ಬಾಯೊಳಗೆ ಸಚಿವರ ನುಡಿಯ ಕೇಳರು ಸುಳಿ ಯ ಕಾಣರು ಲೋಚನಾಗ್ರದಲಿ | ಕಡುಮುಳಿದು ಕಂದರ್ಪಶರವವ ಗಡಿಸೆ ಮೈಗಳನೊಡ್ಡಿ 1 ನೃಪರೆವೆ ಮಿಡುಕದಿರ್ದರು ಹೊತ್ತ ದುಗುಡದೆ ಹಾಯ್ ಬೆಂಗಿನಲಿ ೬೦ ರಾಯನೆಂದನು ಸಕಲಧರಣಿ ರಾಯರನು ಮನ್ನಿಸದೆ ಮರಳಿದ ಳಾಯತಾಕ್ಷಿ ಮಹಾಸ್ವಯಂವರದಲಿ ಮಹಾದೇವ || ಜೋಯಿಸರ ಹೋರೆಗಳ ಹೇಚಿಕೆ ಹೋಯಿತೇ ಹೊಳ್ಳಾಗಿ ಪಾಂಡವ ರಾಯರನು ತೋಯಿಸನೆ ಗದುಗಿನ ವೀರನಾರಯಣ || ೭೧ 8 N ಎಂದು ದ್ರುಪದನು ಪಾಂಡುಪುತ್ರರ ನಂದು ಕಾಣದೆ ನೃಪರ ನಾನೇ ನೆಂದು ನೆರಹಿದೆನೆನುತ ಕೃತ್ಮನ ನೋಡಿ ತಿರುಗಿದನು | ಮಂದರೋದ್ದರ ವರಯಶೋದಾ | ನಂದಕಂದ ಮುಕುಂದ ಗೋಪೀ. ವೃಂದವಲ್ಲಭ ಪಾಂಡುಪುತ್ರರ ಕರುಣಿಸೆ ಯೆಂದ || ಇಪ್ಪತ್ತೊಂಬತ್ತನೆಯ ಸಂಧಿ ಮುಗಿದುದು. م 1 ಕೈಗಳನೋಡಿ, ಚ, ತ, 2 ಬೆರಳಮಗಿನಹೊತ್ತ ದುಗುಡದಲಿ, ಚ, ಠ. BHARATH--Vot, III. 22