ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಆದಿಪರ್ವ 212 ಮಹಾಭಾರತ ರೂಢಿಗಚ್ಛರಿಯಾಗಿ ಯೋಂದೇ ಗೂಡಿನಲಿ ಬಂದಂಬುಜಾತನ ನೋಡಿ ನಿಂದರು ಸುರಮನೋಹರದಿವ್ಯರೂಪದಲಿ || ಕಮಲಜನು ಕಂಡವರ ನಕ್ಕನು ಕುವುತಿಯಲಿ ನೀವೆನ್ನ ನೀಕ್ರಿಪ ಕಮಗಳಲಿ ನೀವೆ ಬಂದಿರಲ್ಲದೆ ಬರವು ಮತವಲ್ಲ | ಅಮಿತಜೀವರ ಕರ್ಮವೃತ್ತಿಯ 'ಕ್ರಮವ ತಾನೇ ಬಲ್ಲನಾಗಳು ಭ್ರಮಿಸನ್ನೆ ಸರ್ವಜ್ಞ ಕಮಲಜನಿವರಿಗಿಂತೆಂದ | ಲಜನಿವರಿಗಿಂತೆಂದ || ಶಟ್ಯಾದಿಗಳಿಗೆ ಬ್ರಹ್ಮಶಾಪ. ನೀವು ಮಾಡಿದ ಪಾಪ ನಿಮ್ಮನು ನೋವಿಸುವುದೈ, ಮಯಿಜನ್ಮಕೆ ದೇವಿಯರೆ ನಿಮಗೊಂದುಜನ್ಮಕೆ ಯಿರಲಿ ಕೇಳಂದ | ಭಾವದಲಿ ಸರ್ವಜ್ಞರಾದೊಡೆ ನೋವಿಸದೆ ಕಾಯೆಂದು ವಾಣೀ ದೇವಿಯರು ಕಳುಹಿದರು ಕಮಲಹನಾಜ್ಞೆಗೊಂಡವರ || ೪ ಆದರೆಯು ಜನ್ಮಾಂತದಲಿ ನಿಮ ಗಾದಯಾಂಬುಧಿ ವಾಸುದೇವನು ಮೇದಿನಿಗೆ ಜನಿಸುವನು ಮುಂದಕೆ ನಿಮಗೆ ಕರುಣಿಸುವ | ಯಾದವೇಂದ್ರನು ದ್ಯಾಪರಾಂತದ ಮೇದಿನೀಶರ ಕೆಡಹಿ ಭೂಮಿಯೊ ಳಾದ ಭಾರವನಿಳುಹಿ ಬರಲಿಕ್ಕೆಂದು ಕಂಡವರ || ಮೂಯಿಜನ್ಮದ ನಿಮ್ಮ ಗೂಡಿಗೆ ಪಾರುಖಾಣೆಗಳಂದು ನೇಮಿಸಿ ನಾರಿಯರ ಕಳುಹಲಿಕೆ ಬಂದರು ಜನ್ಮವೊಂದಲಿಲಿ | »