ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

243 ಸಂಧಿ ೩೫] ರಾಜ್ಯಲಾಭಪರ್ವ ಬಂದು ಕಂಡುದು ಸಕಲಪುರಜನ ವೃಂದ ಕಾಣಿಕೆಗೊಟ್ಟು ಸುಭಟರ ಸಂದಣಿಯ ಗಜರಥಹಯದ ಪದಧೂತಳಿಗಳ | ಮಂದಿರದ ಬಾಗಿಲ ಗತಾಗತ | ವೃಂದದೊತ್ತೊತೆಯಲಿ ಪುರಜನ ನಿಂದುದಲ್ಲಿಯದಲ್ಲಿ ಪಡೆಯದೆ ರಾಜದರುಶನವ || ಅತಿಶಯವನೇನೆಂಬೆನವರಾ ವತಿಯ ಭೋಗಾವತಿಯ ಮಧ್ಯ ಸ್ಥಿತಿಯ ನಾಯಕರತುನದಂತಿರೆ ಮೆಖೆದುದಾನಗರ | ಸತತವೀಪರಿವಿಭವವೀಜನ ವಿತತಿಗಳ ಸನ್ಮಾರ್ಗವೀಸಂ ತತಿಗಳೀವಿಸ್ತಾರವೀಪರಿ ಭೂಪ ಕೇಳೆಂದ || ೧8 ಬಂದ ರಾಜರು ತಮ್ಮತಮ್ಮ ಪುರಕ್ಕೆ ಹೋಗುವಿಕೆ b ೪ ದ್ರುಪದಧ್ಯದ್ಭುಮ್ಮ ಮೊದಲಾ ದಪರಿಮಿತಬಾಂಧವನಿಕಾಯವ ನುಪಚರಿಸಿ ಕಳುಹಿದನು ಭೂಪತಿ ಪಂಚಕೈಕಯರ | ವಿಪುಳಕಾರುಣ್ಯದಲಿ ಪಾಂಡವ ನೃಪಜನವ ಸಂತೈಸಿ ದಾನವ ರಿಪು ನಿಜನಿವಾಸಕ್ಕೆ ಬಿಜಯಂಗೈಯ್ಯಲನುವಾದ | ಕೃಷ್ಣನು ದ್ವಾರಾವತಿಗೆ ಹೋಗುವಿಕೆ. ಕರೆಸಿ ಕುಂತೀಪದಿಯರನು ಕರುಣವಚನಾಮೃತದ ರಸದಲಿ ಹೊರೆದು ಕೃತದಾಯಾದವಿಷಮವಿರೋಧವರ್ತನವ | - ೧೫.