ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಶಿಷ್ಟ ಸಕಲಮೃಗಗಳತಾನು ಬಿಲ್ಲಿನ ಮುಕುತಿಯಲಿ ಸಂಹರಿಸಿ ಭೂಪತಿ ಸುಖಸಮೂಹದೊಳಿದ್ದು ಪಾಳಯಕ್ಕೆದಿದಾಕ್ಷಣದಿ | મક ಕೂಳುಕಾಣಿಕೆ ಯಿತ್ತು ತಕ್ಷಣ ವಾಳಗಳ ಪರುಠವಿಸಿ ಕಳುಹಲು ಪಾಳಯವು ತಾ ತಿರುಗಿ ಬಿಟ್ಟುದು ವರಯಯಾತಿಯದು | ಮೇಲೆ ಗಜತುರಗಾದಿಸವವ ಲೋಲತಾಣದಿ ಕಟ್ಟಿ ಭೂಪತಿ ಲೀಲೆಯಿಂ ಪ್ರಿಯರೊಡನೆ ಭೋಜನ ಮಾಡುತಿರುತಿರಲು || ೫v ಮುಖದಿವಸ ಪಾರುಧಿಯನಾಡಿಯ ವರಮಹಾಪಾಳಯವ ಹೊಕ್ಕರು ಹರುಷದಲಿ ವರಭೋಜನಂಗಳ ಮಾಡಿ ಸುಖದಿಂದ || ಆರುತ ಕಳದರು ವರವಿನೋದದ ಚರಿತ ಪಾರುಧಿಯಿಂದ ಬಹುದಿನ ವಿರುತಿರಲು ಬಹುದಿನದ ಮೇಲೊಂದಿನದ ರಾತ್ರಿಯೊಳು | ೫೯ ನೆಗೆಯಕಾಲದ ವೃಷ್ಟಿ ಸುಖಿಯಲು ಪರಿಹರಿಸಿ ಪಾರುಧಿಯ ಭೂಪತಿ ಮರಳುತಲೆ ಮಣೆಗಂಜಿ ಹೊಕ್ಕನು ದೈತ್ಯನಂದನೆಯ | ನಿರುತ ಮಂದಿರದೊಳಗೆ ಬರಲಿ ಕರನನು ಸತ್ಕರಿಸಿ ದನುಜೆಯು ನೆರೆದಳತನ ಕಾಡಿ ರತಿಕೇಳಿಯಲಿ ಮನವೊಲಿದು | &0 ನೆರೆಯಲಿಕೆ ದಿನದಿನದಿ ಗರ್ಭವು ನಿರುತವಾಗಲಿಕತ್ತ ಶುಕ್ರನ ವರಕುಮಾರಿಗೆ ಗರ್ಭವಾಯಿತು ವರಯಯಾತಿಯಲಿ | BHARATA-VoL, III. 42