ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ ವ ತ ರ ಣ ಕೆ . ಈ ಪುಸ್ತಕವು ಕರ್ಣಾಟಕಮಹಾಭಾರತದ ಎರಡನೆಯ ಸಂಚಿಕೆ ಯಾಗಿರುವುದು, ಈ ಗ್ರಂಥಕರ್ತನ ವಿಷಯದಲ್ಲಿಯೂ ಈ ಕವಿಯ ಭಾಷೆ ಮೊದಲಾದ ವಿಷಯಗಳಲ್ಲಿಯೂ ಹೇಳಬೇಕಾದ ವಿಷಯಗಳಲ್ಲಾ (ಕನ್ನಡ ಸೆಕ್ರ್ಸ ನಂಬರು ಮೂರು ನಾಲ್ಕನೆಯದಾದ) ಉಪೋ ದ್ವಾ ತಸಂಚಿಕೆ ಮತ್ತು ಸಂಭವಪರ್ವ ಇವುಗಳ ಅವತರಣಿಕೆಯಲ್ಲಿ ಹೇಳಲ್ಪಟ್ಟಿದೆ. ಆದುದರಿಂದ ಪ್ರಕ್ಷತ ಈ ಪುಸ್ತಕದಲ್ಲಿರುವ ಗ್ರಂಥದ ವಿಚಾರಮಾತ್ರ ಆವಶ್ಯಕವಾಗಿರುತ್ತದೆ, 3 - 4ು (1) ಜತುಗೃಹಪರ್ವ, (2) ಹಿಡಿಂಬವಧಪರ್ವ, (3) ಬಕ ವಧಪರ್ವ, (4) ಚೈತ್ರರಥಪರ್ವ, (5) ಸ್ವಯಂವರಪರ್ವ, (6) ವೈವಾಹಿಕಪರ್ವ (7) ವಿದುರಾಗಮಪರ್ವ (8) ರಾಜ್ಯಲಾಭಪರ್ವ (9) ತೀರ್ಥಯಾತ್ರಾಪರ್ವ, (10) ಸುಭದಾಹರಣಪರ್ವ, (11) ಖಾಂಡವವನದಹನಸರ್ವ, ೧ನೆಯ ಪರಿಶಿಷ್ಟ, ಅನೆಯ ಪರಿಶಿಷ್ಟ, ಇವೆಲ್ಲವೂ ಈ ಪುಸ್ತಕದಲ್ಲಿ ಅಡಗಿವೆ. ಈ ಪುಸ್ತಕದಲ್ಲಿ ಪ್ರಕಟಿಸಿರುವ ಪಾಠವು ಪ್ರಾಯಿಕವಾಗಿ ಬೆಂಗ ಳೂರು ಮೊದಲಾದ ಸ್ಥಳಗಳಲ್ಲಿ ಮುದ್ರಿತವಾದ ಪುಸ್ತಕಗಳಂತೆಯೂ ಚ, ಛ, ಟ, ಗುರ್ತುಗಳುಳ್ಳ ಪುಸ್ತಕಗಳಂತೆಯೂ ಇರುತ್ತದೆ. ಆದರೆ 24ನೆಯ ಸಂಧಿಯ ಕೊನೆಯಲ್ಲಿ ಅರ್ಜುನನಿಗೂ ಅಂಗಾರವರ್ಮನಿಗೂ ಸ್ನೇಹವಾದ ಬಳಿಕ ಅಂಗಾರವರ್ಮನು ಪಾಂಡವರಿಗೆ ಅನರ್ಘವಾದ ರತ್ನಾಭರಣಾದಿಗಳನ್ನು ಕೊಡುವಾಗ, ಅವರು (( ಬೇಕಾದ ಸಮಯದಲ್ಲಿ ತರಿಸಿಕೊಳ್ಳುವೆವು ನಿಮ್ಮಲ್ಲೇ ಇರಲಿ ” ಎಂದು ಹೇಳಿ ಹೊರಟರು. ಆಗ ಅಂಗಾರವರ್ಮನು ಕೆಲವು ಧರಮಾರ್ಗಗಳನ್ನೂ ಪೂರ್ವದ ಕಥೆಗೆ