ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

62 V9 ಮಹಾಭಾರತ [ಆದಿಪರ್ವ ತಂದು ಬಿಸುಟನು ತನತನಗೆ ಜನಜಾಲ ಜೋಡಿಯಲಿ | ಬಂದು ಕಂಡುದು ನಮ್ಮ ಭೂಸುರ ವೃಂದ ಧನ್ಯರು ವಿಪ್ರ ಜಾತಿಗೆ ಸಂದುದಿಂದಗ್ಗಳಿಕೆ ಯೆಂದುದು ನೆರೆದ ಸೌರಜನ || ಖಕನ ಸಂಹಾರವಾದ ಬಳಿಕ ವಿಪ್ರರು ಭೀಮನನ್ನು ಸ್ತುತಿಸುವಿಕೆ, ಇದಿರುಗೊಂಡರು ಧೀರಭೀಮನ ಸದನವನು ಹೊಗಿಸಿದರು ಹರುಪ್ಪದಿ ವಿದಿತಭೂಸುರರೈದೆ ನುಡಿದರು ಭೀಮಸೇನಂಗೆ | ವಧಿಸಿ ಬಕನನು ನಮ್ಮ ರಕ್ಷಿಸಿ ವಿದಿತದಿವಸದ ಪರಮಪಾಕವ ಮುದದಿ ನೀವೇ ಕೊಂಬುದೆಂದರೆ ಭೀಮನಿಂತೆಂದ | vr೫ ವೀರನಾರಾಯಣಗದರ್ಪಿಸಿ ಭೂರಿಭೋಜನ ಮಾಡಿ ನೀವಿದ ನಾರು ನಿಲಿಸದೆ ಸಕಲಜಂಗಮರೂಪಗಿಕ್ಕುವುದು | ಧಾರುಣೀಸತಿ ಧರ್ಮಸುತ ತಾ ಹಾರಯಿಸಿ ಯಿಹುದೆಂದು ಕುಂತೀ ನಾರಿ ತಾ ಪತಿಕರಿಸಿ ಪಾರ್ಥನು ಚಲುವಮತವೆಂದ | V೬ ಧೀರರೈವರು ಮುದದಿ ಮನ್ನಿಸಿ ಧಾರುಣಿವಾತವನು ವರಕಲಿ ಮಾರುತಾತ್ಮಜ ಕರವ ಜೋಡಿಸಿ ಯೆಂದ ವಿಪ್ರರಿಗೆ | ಊರು ನಿಮಗಿದು ಸರ್ವಮಾನ್ನವು ಧಾರುಣೀಸುರರಂಜದಿರಿ ನಿಮ ಗಾರು ನಿಮ್ಮಾಯಗ್ರಹಾರಕೆ ಮುನಿವರಿಲ್ಲೆಂದ || ಎಂದು ಭೂಸುರಜನಕೆ ಧಾರೆಯು ನಂದೆ ಯೆದನು ಬಳಿಕ ವಿಪ್ರರ V೩