ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ ಪೃ ತ ನಾ ೮ ನೆ ಯ ಸ ೦ ದಿ » ಸೂಚನೆ. ವೀರಕುಂತೀತನುಜರಿರುಳ೦ ಗಾರವರ್ಮನ ಗೆಲಿದು ಹೊಕ್ಕರು ಧಾರುಣೀಸುರವೇಷದಲಿ ಪಾಂಚಾಲಪುರವರವ | ಅರಸ ಕೇಳ್ಳ ಕಲಿ ಬಕಾಸುರ ಹರಣಸಮನಂತರದೊಳಾ ಪುರವರದೊಳಿದ್ದರು ವಿಮಳವಿಪ್ರಸ್ತೋಮದೊಡಗೂಡಿ | ಪ್ರವಾಸಿಯಾದ ಬ್ರಾಹ್ಮಣನ ದರ್ಶನ ಮತ್ತು ಭಾಷಣ. ವರುಷ ತುಂಬಿತು ನಮ್ಮ ಹಸ್ತಿನ ಪುರವ ಹೋಅವಂಟಂದಿನ ಯೆಂ ದರಸ ಕುಂತೀದೇವಿಗೆಂದನು ಭೂಪ ಕೇಳೆಂದ || ಆಸಮಯದಲಿ ಬಂದನೊಬ್ಬನು ಭೂಸುರನು ಸುಕುತೂಹಳನು ಬಹು ದೇಶಪರ್ಯಟನಪ್ರವಾಸಾಭ್ಯಾಸಶಿಕ್ಷೆಯಲಿ || ಗ್ಯಾಸಯಾಚಕನಾಗಿ ತನ್ನ ನಿ ವಾಸದಲಿ ಪರಿತುಷ್ಟನಾದ ಮ ಹೀಸುರನ ಮಾತಾಡಿಸಿದನಂದರಸ ವಿನಯದಲಿ | ಎತ್ತಣಿಂದಲಿ ಬರವು ಬೆಳೆಕಿ ನೈತ್ತ ಗಮನವು ಪೂರ್ವಸುಕೃತದ