ಈ ಪುಟವನ್ನು ಪರಿಶೀಲಿಸಲಾಗಿದೆ
v
ಗ, ಘ, ಜ, ಠ, ಅಂದರೆ 218, 210, 2, 273 ಲೈಬ್ರರಿ ನಂಬರಿನ ಪುಸ್ತಕಗಳಲ್ಲಿ ಕಂಡು ಬಂದುದರಿಂದ ಮುದ್ರಣಮಾಡಿದುದಾಯಿತು, ಈ ಮೇಲೆ ಹೇಳಿದಂತೆ ಬಹುಪುಸ್ತಕಗಳನ್ನನುಸರಿಸಿ ಈ ಗ್ರಂಥವು ಶೋಧಿಸಲ್ಪಟ್ಟು, ಮುದ್ರಿತವಾಗಿರುವುದರಿಂದ, ಒಂದು ವೇಳೆ ಪ್ರಾಮಾದಿ ಕದೋಷಗಳೇನಾದರೂ ಇದ್ದರೆ ಅದನ್ನು ಲಕ್ಷಕ್ಕೆ ತಾರದೆ, ಅಭಿ ಜ್ಞರೂ ಗುಣಗ್ರಾಹಿಗಳೂ ಆದವರೆಲ್ಲರೂ ಗುಣವನ್ನು ಮಾತ್ರ ಮನಸ್ಸಿಗೆ ತಂದು ಆನಂದಿಸುವರೆಂದು ನಂಬಿದೆ.