ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

: ಕರ್ಣ ಟಿಕ : 4 ಕಾಳಯುಕ್ತ ಸಂ ಚೈತ್ರಾಷಾಢ ಪತ್ರ ವ್ಯವಹಾರ. ಧಾರವಾಡದಲ್ಲಿ ಓದಿದ ಬಹುಶ್ರುತ ಉಪನ್ಯಾಸದಲ್ಲಿ ಸಂಪನ ಜನ್ಮಸ್ಥಳವು ಪುಲಿಗೆರೆ ಯೆಂದು ಹೇಳಿದರೂ, ಪೊನ್ನನಾಗವರ್ಮರ ವಿಷಯದಲ್ಲಿ ಮೌನವನ್ನು ಆಚರಿಸಿದ್ದಾರೆ. ಪಂಪನ ಜನ್ಮಸ್ಥಳವು ಸರಿಯಾಗಿ ತಿಳಿಯುವುದಿಲ್ಲವೆಂದು ವೇ। ತಿಮ್ಮಪ್ಪಯ್ಯ ಶಾಸ್ತ್ರಿ ಗಳು ಈ ಪತ್ರಿಕೆಯಲ್ಲಿ ಪ್ರಕಟಿಸಿದ ಒಂದು ಉಪನ್ಯಾಸದಲ್ಲಿ ಹೇಳಿರುವರು. ಇಷ್ಟು ವಿಚಿಕಿತ್ಸೆಗೆ ಕಾರಣವೇನು ? ವೆಂಗಿಪುರವೆಂಬ ವೆಂಗಿಮಂಡಲದ ರಾಜಧಾನಿ ಆಂಧ್ಯ ದೇಶದಲ್ಲಿತ್ತೆಂದು ಪ್ರಾಕನವಿಷಯವಿಮರ್ಶಕರು ನಿರ್ಣಯಿಸಿದುದೇ ಕಾರಣವಲ್ಲವೇ? ಕರ್ಣಾಟದೇಶದ ರಾಜರು ದಂಡನಾಯಕರನ್ನೂ ಕನ್ನಡಕವಿಗಳನ್ನೂ -- .ಮುಖ್ಯವಾಗಿ ಕವಿಗಳನ್ನು -೧೫೦ ಹರದಾರಿದೂರದಿಂದ ಕರೆಯಿಸಿಕೊಳ್ಳುವುದು ಅಸಂಭಾವ್ಯವಾ ದುದರಿಂದ, ಇವರ ಪೂರ್ವಜನರು ಮಾತ್ರ ಅಲ್ಲಿಂದ ಬಂದಿರಬೇಕು. ಇವರೇ ಎಲ್ಲಿ ಹುಟ್ಟಿದರೆಂಬುದು ತಿಳಿಯದೆಂಬ ಪಕ್ಷವನ್ನು ಹಿಡಿಯುವುದರಲ್ಲಿ ವಿವೇಕವಿರಬಹುದು. ಆದರೆ ಹಿರಿಯರ ವಾಸಸ್ಥಳದಲ್ಲಿ ತಾವು ಹುಟ್ಟಿರಲಿಲ್ಲವಾದರೆ, ಆ ಸ್ಥಳಗಳನ್ನು ಮಾತ್ರ ಹೇಳಿ ತಮ್ಮ ಹುಟ್ಟೂರನ್ನೂ ಏಕೆ ಮಾಜಿಸಿದರು ? ನಿಬುಧರು ಹಿಮ್ಮೆಟ್ಟುವಲ್ಲಿ ಅಬುಧರು ನುಗ್ಗುತ್ತಾರೆ, ಎಂಬ ಆಂಗ್ಲ ಕವಿಯ ನುಡಿಯನ್ನು ನಾನೀಗ ಉದಾಹರಿಸ ಬೇಕೆಂದಿದ್ದೇನೆ. ಆಂಧ್ರದೇಶದಲ್ಲಿ ಮೊದಲು ಪಲ್ಲವರಿಗೆ, ಆಮೇಲೆ ಮೂಡಣ ಚಾಲುಕ್ಯರಿಗೆ, ವೆಂಗಿಪುರವೆಂಬ ರಾಜಧಾನಿಯಿತ್ತೆಂಬುದೇನೋ ಚರಿತ್ರಸಿದ್ದವೆಂದು ಒಪ್ಪಿಕೊಳ್ಳ ಬೇಕು, ಆದರೆ ಇದಕ್ಕೆ ವೆಂಗಿಪಳುನೆಂದು ಹೆಸರಿತ್ತೇ ? ಸಜುವೆ೦ದರೆ ಕಾಡು. ಕಿಸುಕಾಡಿನಲ್ಲಿ ಕಿಸುವೊಳಲಿತ್ತು, ಹಾಗೆಯೇ ಸಂಪನಾಗವರ್ಮರು ನಟಿಸಿದ ಸೃಳವು ರಾಜಧಾನಿಯಾಗಿತ್ತಾದರೆ ಅದಕ್ಕೆ ಸಳುವೆಂದು ಮಾತ್ರ ಏಕೆ ಹೇಳಿದರು ? ವೆಂಗಿ ರಾಷ್ಟ್ರವು ಎಲ್ಲಿಯವರೆಗೆ ವಿಸ್ತರಿಸಿತ್ತು ? ಈಗ ವಿಜಾಪುರ ಜಿಲ್ಲೆಯಲ್ಲಿರುವ ಬಾದಾಮಿ ಯನ್ನು ಚಾಲುಕ್ಯರು ಸಲ್ಲವರ ಕೈಯಿಂದ ಕಿತ್ತು ಕೊಂಡರೆಂದು ವಿಮರ್ಶಕರು ಹೇಳು ತಾರೆ, ಹಾಗಾದರೆ ಪಲ್ಲವರ ರಾಷ್ಟ್ರವಾದ ವೆಂಗಿಮಂಡಲವು ಅವರ ಕಾಲದಲ್ಲಿ ಕರ್ಣಾಟದೇಶದ ಒಂದು ಭಾಗವನ್ನು ಒಳಗೊಂಡಿತ್ತೆಂದು ಎಣಿಸಬಹುದಲ್ಲವೇ ? ಪಡುವಣ ಚಾಲುಕ್ಯರು ಸ್ವತಂತ್ರಾಧಿಕಾರದಲ್ಲಿದ್ದಾಗ ಕರ್ಣಾಟದೇಶದಲ್ಲಿ ವೆಂಗಿಮಂಡ ಲದ ಹೆಸರನ್ನು ತ್ಯಜಿಸಿರಬೇಕು. ಇವರು ರಾಷ್ಟ್ರಕೂಟರಿಂದ ಸರಾಜಿತರಾಗಿ, ಅವರ ಹೆಸರೇ ಅಡಗಿ, ಇವರ ದಾಯಾದರಾದ ಮೂಡಣ ಚಾಲುಕ್ತರು ಸಲ್ಲವರನ್ನು ಗೆದು ವೆಂಗಿಪುರವನ್ನು ಆಳುತ್ತಿರುವಾಗ, ಎಂದರೆ ಪಂಪನ ಕಾಲದಲ್ಲಿ, ವೆಂಗಿನಿಷಯವು ಪುನಃ ಕರ್ಣಾಟದೇಶದ ಭಾಗವನ್ನು ಆವರಿಸಿತ್ತೆಂದು ಕವಿಗಳು ಹೇಳುವುದರಲ್ಲಿ ನೃತ್ಯ ಯಾತೀತವೇನು ? " ಗೊಜ್ಜಿಗನೆಂಬ ಸಕಳ ಚಕ್ರವರ್ತಿ ಮಲೆಯೆ ತನಗೆ ಶರಣಾಗತ ನಾದ ವಿಜಯಾದಿತ್ಯನಂ ಕಾದ ಎಲ್ಲಾನದೊಳ್ ಶರಣಾಗತಜಳನಿಧಿಯುಂ " ಎಂದು ಪಂಪನು ತನ್ನ ಪೋಷಕನನ್ನು ಹೊಗಳಿದ್ದಾನೆ. ಈ ವಿಜಯಾದಿತ್ಯನು ಮೂಡಣ ಚಾಲುಕ್ಯನಾಗಿರಬೇಕೆಂದು ಕೆಲವರ ಅಭಿಪ್ರಾಯವಿದೆ. ಹಾಗಾದರೆ ಅವನನ್ನು ಆ ಚಕ್ರವರ್ತಿ ಮಲೆತದ್ದು ಆಂಧ್ರ ದೇಲ್ಲಾರವಗಿರಬಹುದೋ ಕರ್ಣಾಟ ದಲ್ಲಾಗಿರಬಹುದೋ ? ೧೦೩ 14