ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸ: ಚೈತ್ರಷಾಢ ಪತ್ರ ವ್ಯವಹಾರ. ಕರ್ಣಾಟಕ ಸಾಹಿತ್ಯ ಯಿಸುಗುಂ ” ಎಂದಿದೆ. “ ವೆಂಗಿನಗರಮುಂ " ಎಂಪಿ ಪಾಠಾಂತರವೂ ಇದೆಯಂತೆ. ಕವಿಯ ಗೌರವವನ್ನು ಹೆಚ್ಚಿಸಲಿಕ್ಕೆ ಗ್ರಾಮವನ್ನು ನಗರವಾಗಿ ಮಾಡಲು ಯಾರೋ ಪ್ರಯತ್ನಿಸಿರಬೇಕು. ಕಿಸುಕಾಡಿನ ದೃಷ್ಟಾಂತವನ್ನು ಲಕ್ಷಿಸಿದರೆ, ವೆಂಗಿಪಳು ವೆಂಬುದು ಮೊದಲು ಒಂದು ಗ್ರಾಮದ ಹೆಸರಾಗಿದ್ದು, ತರುವಾಯ ಒ೦ದು ಹೋಟ ಳಿಗೂ ಆ ಹೆಸರು ಬಿದ್ದು, ಕ್ರಮೇಣ ಗ್ರಾಮದ ನಾಮವು ವಿರೂಪವಾಯಿತೆಂದು ಊಹಿಸಬಹುದು. ಕಿಸುಕಾಡೆಂಬ ಗ್ರಾಮವು ಈಗಿಲ್ಲ. ಹಾಗೆಯೇ ವೆಂಗಿಪಳು ವೆಂ ಗ್ರಾಮವಿಲ್ಲದಿರುವುದು ಆಶ್ಚರ್ಯಕರವಲ್ಲ. ಬೆಳ್ಳ೦ಕಿ ಎಂಬುದು ನಿರೂಪಿಸಿದ ಹೆಸರಾಗಿರಒಹುದು. ಸಂಸನಾಗವರ್ಮರ ಗ್ರಾಮಗಳು ಕನ್ನಡದ ತಿರುಳಿನಲ್ಲಿವೆ. ಒ೦ಕುಂದ, ? ನಾಕುಂದದಿಂದ ಕಿಸುವೊಳಲಿಗೆ ಒಂದು ಗೀಟನ್ನು ಎಳೆದರೆ, ಹೊಂಗನ ಹಳ್ಳಿ ಅದರಿಂದ ಸುಮಾರು ಐದುಹರದಾರಿ ಉತ್ತರಕ್ಕಿದೆ. ಹೀಗಿರಲು ೪೫೦ ಮೈಲಿ ದೂರವಿರುವ ಅನ್ಯಮಂಡಲದಿಂದ ಬೇರೆ ಭಾಷೆಯನ್ನಾಡುವವರು ಕರ್ಣಾಟದೇಶಕ್ಕೆ ಧನಮಾನಾಸೇಕ್ಷೆಯಿ೦ದ ಒ೦ದು, ಕನ್ನಡಮಾತನ್ನು ಕಲಿತುಕೊಂಡು, ಕರ್ಣಾಟ ಕವಿಗಣದಲ್ಲಿ ಅಸಮಾನರಾಗಿ ಮೆರೆದರೆಂಬ ವಿಚಿತ್ರ ಕಥೆಯನ್ನು ಮೂಲೆಗಿಡಹು ದೆಂದು ಕಾಣುತ್ತದೆ. ಹ, ನಾರಾಯಣರಾವ್. "Cij