ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸಂ ಆಶ್ವಯುಜ ಕರ್ಣಾಟಕ ಸಾಹಿತ್ಯ ಸಮ್ಮೇಳನ, [ಕರ್ಣಾಟಕ ಸಾಹಿತ, ಸ ! ಈ ಸಭಾಮಂಟಪದಲ್ಲಿ ಶಾಂತರಾಗಿ ಕುಳಿತುಕೊಂಡು, ನಮ್ಮ ಮಾತೃ ಭಾಷೆಯ ಸೇವೆಯನ್ನು ಯಥಾಸಾಂಗವಾಗಿ ನಡೆಯಿಸುತ್ತಿರುವೆವೋ, ಆ ವಿಕ್ರಮಶಾಲಿಗಳಾದ ಬ್ರಿಟಿಷರ ಸಾಮ್ರಾಜ್ಯದ ಅಭೀಷ್ಟ ಚಿಂತನವನ್ನು ಮಾಡುವದು ನಮ್ಮೆಲ್ಲರ ಆದ್ಯ ಕರ್ತವ್ಯವು. ಮಹಾಶಯರೇ, ಕರ್ಣಾಟಕವು ಪ್ರಾಚೀನ ಕಾಲದಿಂದ ವೈಭವಸಂಪನ್ನವಾಗಿ ಮೆರೆದ ರಾಷ್ಟ್ರವು, ಚಾಲುಕ್ಯರು, ರಾಷ್ಟ್ರಕೂಟರು, ಸಮಚಾಲುಕ್ಯರು ಹಾಗೂ ವಿಜಯನಗರದ ಪ್ರಭುಗಳು ಇವರೇ ಮೊದಲಾದ ಕನ್ನಡ ಸಾರ್ವಭೌಮರು, ಗಂಗ, ಹೊಯಿಸಲ ಮೊದಲಾದ ತಂತಮ್ಮ ಮಹಾಮಾಂಡಲಿಕರಿಂದೊಡಗೂಡಿ ಸಾವಿರಾರು ವರ್ಷಗಳವರೆಗೆ ಕರ್ಣಾಟಕದ ಸಾಮ್ರಾಜ್ಯವನ್ನು ಧರ್ಮದಿಂದ ಆ ದಕ್ಷಿಣ ಒಂದು ಸ್ಥಾನದಲ್ಲಿ ಪ್ರಖ್ಯಾತರಾದರು. ಈ ಪ್ರಭುಗಳ ಪ್ರಬಲವಾದ ಆಶ್ರಯಬಲದಿಂದ ಕೊಬ್ಬೇರಿ ಕನ್ನಡ ನುಡಿಯ ಮಂದಾರವು ಕಾವ್ಯವ್ಯಾಕರಣ ಪುರಾಣೇತಿಹಾಸ ಗಳೇ ಮೊದಲಾದ ಅನೇಕ ಶಾಖೆಗಳಿಂದ ವಿಸ್ತಾರವಾಗಿ ಬೆಳೆದು, ಪ್ರತಿಯೊಂದು ಶಾಖೆ ಯಲ್ಲಿ ಪಂಪ, ಪೊನ್ನ, ರನ್ನ, ನಾಗವರ್ಮ, ಭಜ್ಞಾಕಲ೦ಕರೇ ಮೊದಲಾದ ಕವಿ ಶಿರೋಮಣಿಗಳ ಮನೋಹರವಾದ ಕಾವ್ಯಗಳೆಂಬ ಪುಷ್ಪಗುಚ್ಚಾದಿಗಳಿಂದ ಶೋಭಿ ಸುತ್ತ ಸಂಸ್ಕೃತದಂಥ ಪ್ರಾಚೀನ ಪ್ರೌಢಭಾಷೆಯ ಸಾಹಿತ್ಯದ ವರ್ಚಸ್ಸನ್ನು ಸಹ ಮರೆಮಾಡಿ ಬಿಟ್ಟಿತು. ಈ ಸ್ವಾಭಿಮಾನದ ಕಾರ್ಯದಲ್ಲಿ ಧಾರವಾಡದ ಸೀಮೆಯ ಪ್ರಾಚೀನ ಕಾಲದಿಂದ ಕರ್ಣಾಟಕ ಭಾಷಾಜನನಿಯ ಸೇವೆಯನ್ನು ಯಥೇಚ್ಛವಾಗಿ ಮಾಡುತ್ತ ಬಂದಿರುವುದು, ಕನ್ನಡ ನುಡಿಯ ಇತಿಹಾಸದ ತಂದೆಯಾದ ನೃಪ ತುಂಗನು ತನ್ನ ಕವಿರಾಜಮಾರ್ಗವೆಂಬ ಗ್ರಂಥದಲ್ಲಿ ವರ್ಣಿಸಿರುವ ಪಟ್ಟದಕಲ್ಲು, ಕೊಪ್ಪಳ, ಲಕ್ಷೇಶ್ವರ, ಒಕ್ಕುಂದ ಎಂಬ ಪಟ್ಟಣಗಳ ನಡುವಿರುವ ಆ ತಿರುಳ್ಳನ್ನಡ ನಾಡೆಂದರೆ ಇರ್ದೇ, ಆದುದರಿಂದ ನಾವು ಅಚ್ಚಗನ್ನಡಿಗರೆಂದು ಅಭಿಮಾನದಿಂದ ಹೇಳಿ ಕೊಳ್ಳಬಹುದು. ಕನ್ನಡದ ಕಾಳಿ ವಾಸನೆನ್ನಿಸಿಕೊಳ್ಳುವ ಆದಿಸಂಸಕವಿಯು ನಮ್ಮ ಪುಲಿ ಗೆರೆ (ಲಕ್ಷೇಶ್ವರ) ಯ ಅರಸನ ಆಶ್ರಯದಲ್ಲಿಯೇ ಇದ್ದನು. ಲಲಿತಪದಗಳಿ೦ದ ಯುಕ್ತವಾದ `ಧರ್ಮಾಮೃತ' ಎಂಬ ಗ್ರಂಥದ ಕರ್ತನಾದ ಆ ನಯಸೇನನೂ ಇಲ್ಲಿಯೇ ಮುಳಗುಂದದಲ್ಲಿ ನಾಸಿಸಿದನು. ನಾವೆಲ್ಲರು ನಿತ್ಯ ದಲ್ಲಿಯೂ ಪಠನ ಮಾಡಲು ಯೋಗ್ಯವಾದ ಕನ್ನಡ ಮಹಾಭಾರತವು ಕುಮಾರವ್ವಾ, ಸನಿಂದ ಗದುಗಿನ ವೀರನಾರಾಯಣನ ಸನ್ನಿಧಿಯಲ್ಲಿಯೇ ರಚಿತವಾಯಿತು. ಪರಮಭಾಗವತನಾದ ಕನಕದಾಸನು ಪರಮಾತ್ಮನ ಸಾದಾರವಿಂದದಲ್ಲಿ ರತನಾಗಿ ಕಾಗಿನೆಲೆಯಲ್ಲಿ ತಿರುಇನ್ನಡದಿಂದ ಆತನನ್ನು ಭಜಿಸಿದನು, ನೀತಿಸಾರವೆಲ್ಲ ಸುಲಭವಾದ ಮಾತಿ ಸಿಂದ ಸರ್ವರಿಗೂ ತಿಳಿಯುವಂತೆ ಉಪದೇಶ ಮಾಡಿದ ವೀರಶೈವಮತಾನುಯಾಯಿ ಯಾದ ಸರ್ವಜ್ಞ ಕವಿಯೂ ಇದೇ ಸೀಮೆಯ ಅಬಲೂರು ಎಂಬ ಗ್ರಾಮದಲ್ಲಿ ಜನ್ಮ ವೆತ್ತಿದನು. ಮಧುರವಾದ ವಾಣಿಯಿಂದ ವ್ಯವಹಾರಜ್ಞಾನವನ್ನು ಸಾಮಾನ್ಯರಿಗೂ ತಿಳಿದವಂತೆ ಶತಕರೂಪದಿ೦ದ ಬೋಧಿಸಿದ ವೀರಶೈವ ಸೋಮೇಶ್ವರನೂ ಪುಲಿಗೆರೆ ಯವನೇ, ಈ ರೀತಿಯಾಗಿ ನಮ್ಮ ನಾಡು ಕರ್ಣಾಟಕ ಸರಸ್ವತೀದೇವಿಯ ಕೃಪಾ ೧೦೯ ರ