ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳ ಯುಕ, ಸಂ ಆಶ್ವಯುಜ, ಕರ್ಣಾಟಕ ಸಾಹಿತ್ಯ ಸಮ್ಮೇಳನ, [ಕರ್ಣಾಟ ಕ ಸಾಹಿತ್ಯ •11 • ... .. • ---- ... ಸದ್ಯದ ಕನ್ನಡದಲ್ಲಿ ಕಾಣುವ ಈ ಬಹುರೂಪತೆಯನ್ನು ನಷ್ಟಪಡಿಸಿ, ಏಕರೂಪತೆ ಯನ್ನು ನೆಲೆಗೊಳಿಸುವ ಪ್ರಶ್ನವು ನಮ್ಮೆಲ್ಲರಿಗೆ ಅತಿಶಯಮಹತ್ವದ್ದಾಗಿರುವುದು. ಗೃಹಗೋಷ್ಠಿಗಳಲ್ಲಿ ನಾನು ತಾನೆಂದು ಮುಂದೆ ಬರುತ್ತಲಿರುವ ತೆಲುಗು, ತಮಿಳು ಮೊದಲಾದ ಆಪ್ತಭಾಷೆಗಳೂ ವಿದ್ಯಾವ್ಯಾಸಂಗಗಳಲ್ಲಿ ಕರೆಯದಿದ್ದರೂ ಬರದೆಬಿಡು ವವರಲ್ಲವೆಂದು ಒಳನುಗ್ಗುವ ಮಹಾರಾಷ್ಟ್ರ ಹಿಂದುಸ್ತಾನೀ ಮೊದಲಾದ ಸಾಹಸ ಭಾಷೆಗಳೂ, ಮನೆವಾರ್ತೆಯಲ್ಲಾಗಲಿ, ವಿದ್ಯಾವ್ಯಾಸಂಗಗಳಲ್ಲಾಗಲಿ, ಬೇಕಾದಲ್ಲಾಗಲಿ, ಹೊಟ್ಟೆಯಿರುವವರೆಗೆ ನಾನಿಲ್ಲದೆ ನಿನಗಾರು ಗತಿಯೆಂದು ಹಕ್ಕಿನಿಂದ ಕೈಬೀಸಿ ಬರುವ ಇಂಗ್ಲೀಷ್ ಭಾಷೆಯೂ, ಕಾರಣಾಂತರಗಳಿಂದ ಪ್ರಬಲವಾಗಿ ನಮ್ಮ ಭಾಷೆ ಯನ್ನು ಹೇಳಿಕೇಳಿ ಇಲ್ಲವೆ ಹೆದರಿಸಿ, ಸದ್ದಿಲ್ಲದೆ ನುಂಗಿ ನೀರು ಕುಡಿಯಲಿಕ್ಕೆ ನಿಂತಿ ರುವುವು. ಇಂಥ ಹೀನಸ್ಥಿತಿಯಲ್ಲಿ ಬಳಲುತ್ತಿರುವ ಭಾಷಾಮಾತೆಯ ದುರ್ದಶೆಯನ್ನು ಹೋಗಲಾಡಿಸುವ ಪವಿತ್ರ ಕಾರ್ಯವನ್ನು ಆಕೆಯ ಮಕ್ಕಳಾದ ನಾವಲ್ಲದೆ ಮತ್ತಾರು ಕೈಕೊಳ್ಳ ಬೇಕು ? ಹಳಗನ್ನಡಕ್ಕೂ, ಹೊಸಗನ್ನಡಕ್ಕೂ ಇರುವ ಭೇದದ ಚರ್ಚೆ, ಭಾಷಾ ಸೀಮೆಯ ಮೇಲೆ ಬೀಳುತ್ತಿರುವ ಪರಭಾಷೆಗಳ ದಾಳಿಗಳನ್ನು ಮುರಿಯುವ ಯೋಚನೆ, ಮುಂದೆ ಕನ್ನಡನುಡಿಗೆ ಬರಬಹುದಾದ ಸ್ವರೂಪ, ನೂತನ ವಿಚಾರಗಳಿಗೆ ತಕ್ಕ ಶಬ್ಬಸಂಯೋಜನಗಳ ವಿಚಾರ, ಶಾಸ್ತ್ರೀಯ ಪರಿಭಾಷೆಯನ್ನು ನಿಶ್ಚಯಿಸುವ ಆವಶ್ಯಕತೆ, ವಿದ್ಯಾಭ್ಯಾಸದಲ್ಲಿ ಕನ್ನಡಕ್ಕೆ ಕೊಡಬೇಕಾದ ಸ್ಥಾನ, ಭಾಷಾ ಸಾಮಾಜ್ಯ ದಲ್ಲಿ ಒಕ್ಕಟ್ಟಾಗುವ ಉಪಾಯ-ಇವೇ ಮುಂತಾದ ನೂರಾರು ಮಹತ್ವದ ಪ್ರಶ್ನೆ ಗಳು ಈ ಕೆಲಸವನ್ನು ಸ್ವೀಕರಿಸುವವರ ಮುಂದೆ ನಿಲ್ಲುತ್ತವೆ. ಇವೆಲ್ಲ ಪ್ರಶ್ನೆಗಳನ್ನು ಸಮರ್ಪಕವಾಗಿ ಬಿಡಿಸಲಿಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ಭಾಗಗಳ ಕನ್ನಡಿಗರು ಒಟ್ಟುಗೂಡಿ ವಿಚಾರಮಾಡುವುದು ಅತ್ಯಾವಶ್ಯಕವು, ಈ ಬಗೆಯಾಗಿ ಒಟ್ಟುಗೂಡುವ ಉದ್ದೇಶದಿಂದ ಧಾರವಾಡಸ್ಟರು ೧೯೦೬ ನೆಯ ಇಸವಿಯಲ್ಲಿ " ಕರ್ಣಾಟಕ ಗ್ರಂಥ ಕರ್ತರ ಸಮ್ಮೇಲನ” ವೆಂಬ ಹೆಸರಿನಿಂದ ಎಲ್ಲ ಭಾಗಗಳ ವಿದ್ವಜ್ಜನರ ಒತ್ತಟ್ಟಿಗೆ ಕೂಡಿಸಲು ಪ್ರಯತ್ನಿಸಿದರು. ಎರಡು ವರ್ಷ ಈ ಸಮ್ಮೇಲನವು ಈ ನಮ್ಮ ಧಾರ ವಾಡದಲ್ಲಿ ಕೂಡಿಸಲ್ಪಟ್ಟಿತು, ಆದರೆ ಕರ್ಣಾಟಕದ ಬೇರೆಬೇರೆ ಭಾಗಗಳಲ್ಲಿರುವ ಪಟ್ಟಣಗಳಲ್ಲಿ ವಿದ್ವಜ್ಜನರ ಸಮ್ಮೇಲನಗಳನ್ನು ವರುಷಾನುವರುಷ ಕೂಡಿಸುವುದ ರಿಂದಲೇ ನಮ್ಮ ಮೂಲ ಉದ್ದೇಶವು-ಅಂದರೆ ಬೇರೆಬೇರೆ ಪ್ರಾಂತಗಳಲ್ಲಿರುವ ಕನ್ನಡಿಗ ರಲ್ಲಿ ಬಳಕೆಯು ಬೆಳೆದು ಭಾಷೋನ್ನತಿಯಕಾರ್ಯವು-ಸಫಲವಾಗುವಂತಿರುವುದ ರಿಂದ, ಮೈಸೂರು ಕರ್ಣಾಟಕದ ಕೇಂದ್ರಸ್ಥಾನವಾಗಿರುವ ಬೆಂಗಳೂರಿನಲ್ಲಿ ಸಮ್ಮೇಲನ ವನ್ನು ಕೂಡಿಸಲಿಕ್ಕೆ ಧಾರವಾಡದವರು ನಾಲ್ಕಾರು ವರುಷ ಸಾಹಸಪಟ್ಟರು, ಕೊನೆಗೆ ಮೈಸೂರು ಪ್ರಾಂತದ ಮಹನೀಯರು ಅತ್ಯಂತ ಉತ್ಸಾಹದಿಂದ ಈ ಮಹತ್ಕಾರ್ಯ ವನ್ನು ಕೈಕೊಂಡದ್ದರಿಂದಲೂ, ಇದರಲ್ಲಿ ಅವರಿಗೆ ಶ್ರೀರ್ಮ ಮೈಸೂರು ಮಹಾರಾಜ ರವರಂಥ ಪರಮಸಮರ್ಥರಾದ ಕನ್ನಡಭಾಷಾಭಿಮಾನಿಗಳ ಮಹದಾಶ್ರಯದ ಬೆಂಬಲವು ಎಲ್ಲ ಕನ್ನಡಿಗರ ಸುದೈವದಿಂದ ದೊರೆತದ್ದರಿಂದಲೂ, ಇದಕ್ಕೆ ತೀವ್ರವಾ ಗಿಯೇ ಸ್ವೀರಸ್ವರೂಪವು ಒದಗಿ, ಕರ್ಣಾಟಕ ಸಾಹಿತ್ಯ ಪರಿಷತ್ತೆಂಬ ಸಂಸ್ಥೆಯು ೧೫೧ 15 |