ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸಂ ಆಶ್ವಯುಜ | ಕರ್ಣಾಟಕ ಸಾಹಿತ್ಯ ಸಮ್ಮೇಳನ 5 SI| ಕರ್ಣಾಟಕ ಸಾಹಿತ್ಯ ಗೋಚರವಾಗುತ್ತಿರಲು ನಾವು ನಮ್ಮ ಭಾಷೆಗೆ ಮಾತ್ರ ಹೊಸ ಸಂಸ್ಕಾರವು ಆಗಕೂಡ ದೆಂದು ಹಟಹಿಡಿದರೆ ಸಾಗಬಹುದೇ ? ಆದಕಾರಣ ನಮ್ಮ ಭಾಷೆಗೆ ಕೂಡ ಈಗಿನ ಕಾಲಕ್ಕನುರೂಪವಾಗಿ ಹೊಸರೂಪವನ್ನು ತಾಳಗೊಡುವುದು ವಿಹಿತವಾದದ್ದು. ಭಾಷೆಯಲ್ಲಿ ಬಲವಾದ ಬದಲಾವಣೆಗಳು ಆಗುವುದನ್ನು ಕಂಡು ಬೆದರಿ ಬಾಯ್ತಿಡುವ ಕಾರಣವಿಲ್ಲ. ಪುರಾತನ ಕಾಲದಿಂದ ರೂಢವಾಗಿರುವ ನಮ್ಮ ಭಾಷೆಯ ಆತ್ಮದಂ ತಿರುವ ವಾಕ್ಯರಚನೆ, ಶಬ್ಬ ಸಂಯೋಜನೆ ಮೊದಲಾದ ವಿಶಿಷ್ಟ ಭಾಷಾಮರ್ಯಾದೆ ಗಳನ್ನು ಕಾಯ್ದುಕೊಂಡು ಭಾಷೆಯ ಶರೀರದಂತಿರುವ ಇತರ ಬಾಸ್ಕೋಪಕರಣಗಳಲ್ಲಿ ಹೆಚ್ಚು ಕಡಮೆಯಾಗುವಂತೆ ನೋಡಿಕೊಳ್ಳುವುದೇ ನಮ್ಮ ಕರ್ತವ್ಯವು. ಆದರೆ, ಸದ್ಯದ ಕನ್ನಡನುಡಿಯ ಬೇರೆಬೇರೆ ಶಾಖೆಯವರು ತಮ್ಮ ನಾಡಿನ ಕನ್ನಡವೇ ಶುದ್ದ ಕನ್ನಡವೆಂದೂ, ಮಧುರಕನ್ನಡವೆಂದೂ, ಮೂಲ ಕನ್ನಡವೆಂದೂ, ಪ್ರೌಢಕನ್ನಡ ವೆಂದೂ, ಪ್ರಮಾಣಕನ್ನಡವೆಂದೂ, ತಿಳಿಗನ್ನಡವೆಂದೂ ಬಗೆದು ಅಭಿಮಾನದಿಂದ ಉಬ್ಬಿ ಕೂಡುವುದರಿಂದ ಭಾಷೆಯ, ಜನಾಂಗವೂ ಉನ್ನತಿಯನ್ನು ಹೊಂದಲಾರ ವೆಂದು ತಮ್ಮಂಥ ವಿದ್ವಾಂಸರಿಗೆ ಒಡೆದು ಹೇಳಬೇಕಾಗಿಲ್ಲ. ಒಟ್ಟಿನಮೇಲೆ, ಭಾಷಾ ಸಾಮ್ರಾಜ್ಯದಲ್ಲಿ ಕನ್ನಡಿಗರೆಲ್ಲರು ಐಕ್ಯವನ್ನು ಹೊಂದಿ ನುಡಿಯಲ್ಲಿ ಮಾತ್ರವಲ್ಲದೆ ನಡೆ ಯಲ್ಲಿಯೂ ಪೌರುಷವನ್ನು ತೋರಿಸಬೇಕಾಗಿದೆ. ಸುದೈವದಿಂದ ಸಾಹಿತ್ಯ ಸಮ್ಮೇ ಲನವು ಆರಂಭಿಸಲ್ಪಟ್ಟಂದಿನಿಂದ ಈ ಶುಭಕಾರ್ಯಕ್ಕೆ ಮೊದಲಿಟ್ಟಿದೆ. ಸಮ್ಮೇಲನವು ಮಾಡಿದ ಮೊದಲಿನ ಮಹತ್ಕಾರವು ಇದೇ ಸರಿ, ಇನ್ನು ಕನ್ನಡಿಗರಾದ ನಾವೆಲ್ಲರೂ ಸದಭಿಮಾನದಿಂದ ಒಟ್ಟುಗೂಡಿ ಬಂಧುಭಾವವನ್ನು ದೃಢಪಡಿಸಿಕೊಂಡು, ಕನ್ನಡ ಸಾಹಿತ್ಯವನ್ನು ಸರ್ವತೋಮುಖವಾಗಿ ಬೆಳೆಯಿಸಿ, ನಮ್ಮ ಶ್ರೇಯೋಭಿವೃದ್ಧಿಯನ್ನು ಸಾಧಿಸಿಕೊಳ್ಳಬೇಕು. ಈ ಮಂಗಲಕರವಾದ ಕಾರವನ್ನು ನೆರವೇರಿಸಲಿಕ್ಕೆ ತಮ್ಮಂಥ ಸಮರ್ಥರಾದ ಅಭಿಮಾನ ಶೀಲರೇ ಅಧಿಕಾರಿಗಳು; ಭಾಷಾದೇವಿಯ ಸೇವೆಯೇ ವಿನ ಯ ; ನಾವೆಲ್ಲರೂ ಕನ್ನಡಿಗರೆಂಬ ಬಂಧುತ್ವವೇ ಸಂಬಂಧ, ಹಾಗೂ ಕನ್ನಡಿಗರ ಏಳಿ ಗೆಯೇ ಪ್ರಯೋಜನ, ಹೀಗೆ ಸರ್ವತೋಪರಿ ಸುಖದಾಯಕವಾದ ಈ ವಿಶೇಷೋತ್ಸವ ಪ್ರಸಂಗದೊಳಗೆ ತಮ್ಮ ಸತ್ಕಾರದ ಬಗ್ಗೆ ಏನಾದರೂ ಕೊಂಕು ಕೊರತೆಗಳು ತೋರಿ ಬಂದಲ್ಲಿ, ಮಹನೀಯರ ಸಹಜವೃತ್ತಿಗನುಸರಿಸಿ ಅವನ್ನೆಲ್ಲ ಕ್ಷಮಿಸಿ ಆತೋನ್ನತಿ ರಾಷ್ಟೊನ್ನಗಳಿಗೆ ಮೂಲಭೂತವಾದ ಈ ಹೊತ್ತಿನ ಮಾತೃಭಾಷೋನ್ನತಿಯ ಪವಿತ್ರ ಕಾರ್ಯವನ್ನು ಇನ್ನು ಮುಂದೆ ಸಾಗಿಸಿ ಎಡರಿಲ್ಲದೆ ಕೊನೆಗಾಣಿಸುವಿರೆಂದು ತಮ್ಮೆಲ್ಲರನ್ನು ನವ್ರಭಾವದಿಂದ ಪ್ರಾರ್ಥಿಸಿ ಏರಮಿಸಲು ತಮ್ಮೆಲ್ಲರ ಅಪ್ಪಣೆಯನ್ನು ಬೇಡುವ, ಕನ್ನಡಿಗರ ಕೃಪಾಭಿಲಾಷಿ, ಬುಳ್ಳಪ್ಪಾ ಬಸವಂತರಾವ ಮಾಮಲೇದೇಸಾಯಿ, ಹಂದಿಗನೂರ ಸ್ವಾಗತಮಂಡಲದ ಅಧ್ಯಕ್ಷ. ೧೧೩