ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸಂ! ಆಶ್ವಯುಜ, ಸಿ೦ಗಳ ಸ೦ವತ್ಸರದ ವರದಿ ಕರ್ಣಾಟಕ ಸಾಹಿತ್ಯ

... .... ........ -

ಶ್ರುತಪಡಿಸಿದೆವು. ಈ ಪಿಂಗಳಸಂವತ್ಸರದಲ್ಲಿಯೂ ನಮ್ಮಪರಿಷತ್ತು ಧೈರ್ಯಸ್ಟ್ರ್ಯಾ ರೋಗ್ಯಾದಿಗುಣಗಳಿಗೆ ಕೊರತೆ ಯಾವುದೂ ಬಾರದಂತೆ ಬಳೆದಿರುವುದೆಂದು ಶ್ರುತಪಡಿ ಸುವುದು ನಮಗೆ ಹರ್ಷವನ್ನುಂಟುಮಾಡುತ್ತಿರುವುದು, ಇಲ್ಲಿ ನೆರೆದಿರುವ ಕರ್ಣಾಟಕ ವಿದ್ವನ್ಮಂಡಲಿಯ ಸನ್ನಿಧಿಯಲ್ಲಿ ನಾವು ಒಪ್ಪಿಸುವ ಈ ತೃತೀಯ ವರ್ಷದವರದಿಯನ್ನು ಸಾವಧಾನದಿಂದ ಲಾಲಿಸುವುದಲ್ಲದೆ ನಮ್ಮ ಪರಿಷತ್ತಿನ ಶ್ರೇಯೋಭಿವೃದ್ಧಿಗಾಗಿ ಇಲ್ಲಿ ನೆರೆದಿರುವ ಮಹನೀಯರೆಲ್ಲರೂ ಒಮ್ಮನದಿಂದ ಸಹಾಯ ಮಾಡಬೇಕೆಂದು ವಿನಯ ಪೂರ್ವಕವಾಗಿ ಬೇಡುತ್ತೇವೆ. ಕಾರ್ಯನಿರ್ವಾಹಕರ ಬದಲಾವಣೆಗಳು. ೧೯೧೮ ನೆಯ ಇಸವ ಏಪ್ರೆಲ್ ಮೊದಲನೆಯ ತಾರೀಖಿನಿಂದ ಪರಿಷತ್ತಿನ ಸಮ್ಮೇಳನವು ನಡೆಯುವವರೆಗೆ ಮ। ಆರ್. ರಘುನಾಥರಾಯರೂ, ಡಾಕ್ಟರ್ ಸಿ, ಎಸ್. ಅಚ್ಯುತರಾಯರೂ ಜಂಟಿ ಗೌರವ ಕಾರ್ಯದರ್ಶಿಗಳಾಗಿ, ಮ!! ರಾ| . ಲಕ್ಷ್ಮೀನರ ಸಿಂಹರಾಯರು ಗೌರವ ಕೋಶಾಧ್ಯಕ್ಷರಾಗಿ ಇದ್ದರು, ಹಿಂದಿನ ವರ್ಷದ ಕೆಲಸವನ್ನು ಬಹು ಶ್ರದ್ಧೆಯಿಂದ ಮಾಡಿರುವರೆಂದು ಅಭಿಪ್ರಾಯಪಟ್ಟು ಪರಿಷತ್ತಿನ ಪಿಂಗಳ ಸಂವತ್ಸರದ ಕಾರ್ಯನಿರ್ವಾಹಕ ಮಂಡಲಿಯವರು ಪಿಂಗಳಸಂವತ್ಸರಕ್ಕೂ ಮ! ರಾ! ಆರ್. ರಘುನಾಥರಾಯರು ಮತ್ತು ಡಾಕ್ಟರ್ ಪಿ, ಎಸ್, ಅಚ್ಯುತರಾಯರು ಗೌರವ ಕಾರ್ಯದರ್ಶಿಗಳಾಗಿರಬೇಕೆಂದೂ ಮ! ರಾ ಟಿ, ಲಕ್ಷ್ಮಿನರಸಿಂಹರಾಯರು ಗೌರವ ಕೋಶಾಧ್ಯಕ್ಷರಾಗಿ ಇರತಕ್ಕುದೆಂದೂ ತೀರ್ಮಾನಿಸಿದರು. ಏಪ್ರಿಲ್ ೧ ನೆಯ ತಾರೀಖಿನಿಂದ ಜುಲೈ ೨೦ ನೆಯ ತಾರೀಖಿನವರೆಗೆ ಎರಡು ಹೊತ್ತೂ ಕೆಲಸಮಾಡುವ ಗುಮಾಸ್ತರೊಬ್ಬರೂ ಒಂದು ಹೊತ್ತು ಕೆಲಸಮಾಡುವ ಗುಮಾಸ್ತರೊಬ್ಬರೂ ಇದ್ದರು. ಎರಡು ಹೊತ್ತು ಕೆಲಸಮಾಡುತ್ತಿದ್ದ ಗುಮಾಸ್ತರು ಓದುವ ಉದ್ದೇಶದಿಂದ ಕೆಲಸಕ್ಕೆ ರಾಜೀನಾಮೆ ಕೊಟ್ಟದರಿಂದ ಒಂದು ಹೊತ್ತು ಕೆಲಸ ಮಾಡುತ್ತಿದ್ದ ಗುಮಾಸ್ತರನ್ನು ಪ್ರಾತಃಕಾಲವೂ ಸಾಯಂಕಾಲವೂ ಕೆಲಸಮಾಡ ಬೇಕೆಂದು ನಿಯಮಿಸಿ ೧೨ ರೂಪಾಯಿ ತಲಬನ್ನು ಕೊಡಲಾಯಿತು. ಒ೦ದು ಹೊತ್ತು ಕೆಲಸಮಾಡುತ್ತಿದ್ದ ಗುಮಾಸ್ತರಿಗೆ ಬದಲಾಗಿ ಪರಿಷತ್ತಿನಲ್ಲಿ ಪುಸ್ತಕ ಮತ್ತು ಮಾಸಪತ್ರಿಕೆಗಳ ವಿಮರ್ಶನಕ್ಕೂ ಗ್ರಂಥಶೋಧನಕಾರ್ಯಕ್ಕೂ ೨ ರೂಪಾಯಿ ತಲಬಿನ ಮೇಲೆ ಒಂದು ಹೊತ್ತು ಕೆಲಸಮಾಡುತ್ತಿದ್ದ ಪಂಡಿತರೊಬ್ಬರ ಜತೆಗೆ ಪಂಡಿತ ಕೆ, ನಂಜುಂಡಶಾಸ್ತ್ರಿಗಳನ್ನು ಒ೦ದುಹೊತ್ತು ಕೆಲಸಮಾಡುವ ಪಂಡಿತರ ನ್ಯಾಗಿ ೧೯೧೭ ನೆಯ ಇಸವಿ ಆಗಷ್ಟು ೨೬ ನೆಯ ತಾರೀಖಿನಲ್ಲಿ ಆದ ನಿರ್ಣಯದ ಮೇರೆ ನಿಯಮಿಸಲಾಯಿತು. ಪರಿಷತ್ತಿನ ಕೆಲಸವು ಹೆಚ್ಚು ತಲಿರುವುದರಿಂದ ಪರಿ ಷತ್ತಿನಲ್ಲಿ ಎರಡು ಹೊತ್ತೂ ಕೆಲಸಮಾಡುವ ಪಂಡಿತರೊಬ್ಬರನ್ನು ನಿಯಮಿಸಬೇ ಕೆಂದು ಮಾರ್ಚಿ ೨೪ ನೆಯ ತಾರೀಖಿನಲ್ಲಿ ನೆರೆದಿದ್ದ ಕಾರ್ಯನಿರ್ವಾಹಕ ಮಂಡಲಿಯ ಸಭೆಯವರು ನಿರ್ಣಯಿಸಿರುತ್ತಾರೆ. ಪರಿಷತ್ತಿನ ಜವಾನನ ಸಂಬಳವನ್ನು ೬ ರೂಪಾಯಿಗಳಿ೦ದ ೮ ರೂಪಾಯಿಗಳಿಗೆ ಹೆಚ್ಚಿಸಿದುದಾಯಿತು. X೧೫