ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸil ಆ 'ಯು:.] ಅಧ್ಯಕ್ಷರ ಭಾಷಣ. [ಕರ್ಣಾಟಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣ. - ಅನಂತರ ಅಧ್ಯಕ್ಷರಾದ ಶ್ರೀಯುತ ಆರ್. ನರಸಿಂಹಾಚಾರ್ಯರು ತಮ್ಮ ಅಮೋಘವೂ, ಕರ್ಣಾಟಕ ಭಾಷೆ ಮತ್ತು ದೇಶಗಳ ಇತಿಹಾಸಮಿಶ್ರಿತವೂ ಆದ ಈ ಕೆಳಗಣ ಭಾಷಣವನ್ನು ಮಾಡಿ ಸಾಮಾಜಿಕರನ್ನು ಆನಂದಗೊಳಿಸಿದರು: ಮಹಾಶಯರೇ ! ದೇಶಬಾಂಧವರೇ ! ಭಾಷಾಭಿಮಾನಿಗಳೇ! ತಾವುಗಳು ತಮ್ಮಗಳ ಉದಾರಾಶ್ರಯದಿಂದ ಅಲ್ಪಜ್ಞನಾದ ನನ್ನನ್ನು ಈ ಉನ್ನತ ಪದವಿಗೆ ನಿಯಮಿಸಿ ಗೌರವಿಸಿದುದಕ್ಕಾಗಿ ನನ್ನ ಕೃತಜ್ಞತೆಯ ಪರಿಮಿತಿಯನ್ನು ಮಾತು ಗಳ ಮೂಲಕ ತಿಳಿಸಲು ಅಶಕ್ತನಾಗಿದ್ದೇನೆ. ಈ ಮಹಾಪದವಿಯ ಕಾರ್ಯವನ್ನು ನಿರ್ವ ಹಿಸುವ ಶಕ್ತಿ ನನ್ನಲ್ಲಿಲ್ಲದಿದ್ದರೂ ದೇಶಭಾಂಧವರೂ ಭಾಷಾಭಿಮಾನಿಗಳೂ ಆದ ತಮ್ಮ ಗಳ ಆಜ್ಞೆಯನ್ನು ಶಿರಸಾವಹಿಸಿ ನನ್ನಿಂದಾದಮಟ್ಟಿಗೆ ಕನ್ನಡನಾಡಿನ ಮತ್ತು ಕನ್ನಡ ನುಡಿಯ ಸೇವೆಯನ್ನು ಅಲ್ಪಸ್ವಲ್ಪವಾದರೂ ತಮ್ಮೊಡನೆ ಸೇರಿ ಮಾಡುವುದು ಕರ್ತವ್ಯ ವೆಂದು ತಿಳಿದು ಈ ಮಹಾಕಾರ್ಯಕ್ಕೆ ಸಮ್ಮತಿಸಿರುವೆನು, ಈ ಕಾರ್ಯವು ತಮ್ಮಗಳ ಸಹಾಯದಿಂದ ಸುಲಲಿತವಾಗಿ ನಡೆದು ಫಲೋದರ್ಕವಾಗಬೇಕೆಂದು ಜಗದೀಶ್ವರನಲ್ಲಿ ಪ್ರಾರ್ಥಿಸುವೆನು. ಕನ್ನಡನಾಡಿನ ಮತ್ತು ಕನ್ನಡ ನುಡಿಯ ಪ್ರಾಚೀನತೆ. ಕ್ರಿಸ್ತ ಪೂರ್ವ ೩ನೆಯ ಶತಮಾನದಲ್ಲಿ ಅಶೋಕನು ಬನವಾಸಿಗೆ ಒಬ್ಬ ಬೌದ್ಧ ಬೋಧಕನನ್ನು ಕಳುಹಿಸಿದಂತೆ ತಿಳಿಯುತ್ತದೆ. ಅದೇ ಕಾಲದಲ್ಲಿ ಮಹಿಷಮಂಡಲಕ್ಕೆ ಮತ್ತೊಬ್ಬ ಬೋಧಕನನ್ನು ಕಳುಹಿಸಿದಂತೆಯೂ ತಿಳಿಯುತ್ತದೆ. ಈ ಮಹಿಷಮುಂಡ ಲವು ಮೈಸೂರು ದೇಶವಲ್ಲ, ಗೋದಾವರಿಯ ಸವಿಾಪದ ಪ್ರಾಂತವ್ರ ಎಂದು ಮೆ! ಸ್ಟ್ರೀಟ್ ಬರೆದಿದ್ದಾರೆ. ಆದರೂ ಮೈಸೂರುಸೀಮೆಗೆ ಮಹಿಷರಾಷ್ಟ್ರ, ಅಥವಾ ಮೈಸನಾಡು ಎಂಬ ಹೆಸರು ಶಾಸನಗಳಲ್ಲಿಯೂ ಪ್ರಾಚೀನಗ್ರಂಥಗಳಲ್ಲಿಯೂ ದೊರೆಯುತ್ತದೆ. ಮೈಸ ಎಂಬುದು ಮಹಿಷ ಎಂಬ ಶಬ್ದದ ತದ್ಭವವು, ತಮಿಳುಭಾಷೆ ಯಲ್ಲಿರುವ ಅಗನಾನೂರು ಎಂಬ ಕವಿಸೂಕ್ತಿ ಕದಂಬದಲ್ಲಿ ಕ್ರಿಸ್ತ ಶಕ ೨-ನೆಯ ಶತ ಮಾನದಲ್ಲಿದ್ದ ಮಾಮೂಲನಾರ್‌ ಎಂಬ ಕವಿಯ ಉಕ್ತಿಯಾದ ೧೫ ನೆಯ ಪದ್ಯದಲ್ಲಿ ಎರುಮ್ಮೆನಾಡು (ಎರುಮೈ : - ಮಹಿಷ) ಎಂಬ ಹೆಸರನ್ನು ಹೇಳಿ ಇದು ಪಶ್ಚಿಮಪ್ರಾಂತ ದಲ್ಲಿ (ಕುಡನಾಡು) ಇದೆ ಎಂದೂ ಹೇಳಿದೆ. ನಕ್ಕೀರರ್ ಎಂಬ ಮತ್ತೊಬ್ಬ ಪುರಾತನ ಕವಿಯ ಉಕ್ತಿಯಾದ ೨೬ನೆಯ ಪದ್ಯದಲ್ಲಿ-ನೆಡುಂಜೆರ್ಯ ಎಂಬ ಪಾಂಡ್ಯರಾಜನು ತಲೈಯಾಲಂಕಾನಂ ಎಂಬ ಸ್ಥಳದಲ್ಲಿ ಚೇರ್ರ, ಚೈರ್ತ, ತಿತಿರ್ಯ, ಎನಿ, ಎರು ಮೈಯೂರ್ರ (ಮಹಿಷಪುರದವನು), ಇರುಂಕೋವೇರ್ನ್ಮಾ, ಪೊರುರ್ನ ಎಂಬ ಏಳು ರಾಜರನ್ನೂ ಯುದ್ಧದಲ್ಲಿ ಸೋಲಿಸಿದಂತೆ ಹೇಳಿದೆ. ಅದೇ ಕವಿಯ ಉಕ್ತಿಯಾದ ೨೫೩. ನೆಯ ಪದ್ಯದಲ್ಲಿ ಮಹಿಷಪುರದವನು ಬಡಗರ ಕುಲದವನು ಎಂದು ಉಕ್ತವಾಗಿದೆ. ಶಿಲಪ್ಪದಿಕಾರಂ ಎಂಬ ಮತ್ತೊಂದು ತಮಿಳುಗ್ರಂಥದಲ್ಲಿ ಎರಡನೆಯ ಶತಮಾನದಲ್ಲಿದ್ದ ೧೨ 17,