ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸC!! ಆಶ್ವಯುಜ.1 ಅಧ್ಯಕ್ಷರ ಭಾಷಣ (ಕರ್ಣಾಟಕ ಸಾಹಿತ್ಯ - - - - - - ಕಲಾಶಾಸ್ತ್ರ ವಿಷಯಾಣಾಂ ಚ ಬಹೂನಾಂ ಗ್ರಂಥಾನಾಮಪಿ ಭಾಷಾಕೃತಾನಾಮು ಪಲಬ್ಭಮಾನತ್ವಾತ್ (ಕನ್ನಡದಲ್ಲಿ ತತ್ವಾರ್ಥಮಹಾಶಾಸ್ತ್ರಕ್ಕೆ ವ್ಯಾಖ್ಯಾನರೂಪವಾದ ೯೬೦೦೦ ಗ್ರಂಥಪರಿಮಿತಿಯುಳ್ಳ ಚೂಡಾಮಣಿಯೂ, ರಬ್ಬಾಗದ, ಯುಕ್ತಾ ಗಮ, ಪರಮಾಗಮ ಇವುಗಳಿಗೆ ಸಂಬಂಧಪಟ್ಟ ಗ್ರಂಥಗಳೂ, ಕಾವ್ಯ, ನಾಟಕ, ಅಲಂಕಾರ. ಕಲಾಶಾಸ್ತ್ರ ಈ ವಿಷಯವಾದ ಗ್ರಂಥಗಳೂ ಹೇರಳವಾಗಿ ದೊರೆವುದರಿಂದ ಈ ಭಾಷೆ ಶಾಸ್ತ್ರಕ್ಕೆ ಅನುಪಯುಕ್ತವಾದುದಲ್ಲ) ಎಂದು ಬರೆದಿದ್ದಾನೆ. ಈ ಚೂಡಾಮಣಿ ಯನ್ನು ಬರೆದವನು ತುಂಬುಲೂರಾಚಾರ್ಯ ಎಂಬ ನಾಮಾಂತರವುಳ್ಳ ಶ್ರೀವರ್ಧ ದೇವನು. ಇವನನ್ನು ಜಹೈ : ಕನ್ಯಾ ಜಟಾಗೋಣ ಬಭಾ ರ ಸ ರಮೇಶ್ವರಃ | ಶ್ರೀವರ್ಧದೇವ ಸಂಧತೇ ಜಹ್ಯಾಗೋಣ ಸರಸ್ವತೀ೦ ! (ಈಶ್ವರನು ಗಂಗೆಯನ್ನು ಜಟಾಗ್ರದಲ್ಲಿ ಧರಿಸಿದನು; ಶ್ರೀವರ್ಧದೇವನೇ! ನೀನು ಸರಸ್ವತಿಯನ್ನು ನಾಲಗೆಯ ತುದಿಯಲ್ಲಿ ಧರಿಸಿದೀಯೆ) ಎಂದು ೬ನೆಯ ಶತಮಾ ನದ ಅಂತ್ಯದಲ್ಲಿದ್ದ ದಂಡಿ ಸ್ತುತಿಸಿರುವಂತೆ ಒಂದು ಶಾಸನದಿಂದ ತಿಳಿಯುತ್ತದೆ. ೭-ನೆಯ ಶತಮಾನಕ್ಕೆ ಹಿಂದೆಯೇ ಇಂತಹ ಅಪಾರವಾದ ಗ್ರಂಥವು ಪುಟ್ಟ ಬೇಕಾದರೆ ಆ ಕಾಲಕ್ಕೆ ಬಹಳ ಹಿಂದೆಯೇ ಕನ್ನಡದಲ್ಲಿ ಗ್ರಂಥರಚನೆ : ಆರಂಭವಾಗಿರಬೇಕು. ಸುಮಾರು ೭೦೦-ರಲ್ಲಿದ್ದ ಶ್ಯಾಮಕುಂ ವಾಚಾರ್ಯನು ಪ್ರಾಚ್ಛತವನ್ನು ಕನ್ನಡದಲ್ಲಿ ಬರೆ ದಿರುವುದಾಗಿ ಇಂದ್ರನಂದಿಯ ಶ್ರುತಾವತಾರದಲ್ಲಿಯ ಕಾಲೇ ತತಃ ಕಿಯತ್ತ ಪಿ ಗತೇ ಪುನ: ಶ್ಯಾ ಮುಕುಂದ ಸಂಜ್ಞೆನ | ಪ್ರಾಕೃತ ಸ೦ಸ್ಕೃತ ಕರ್ಣಾಟಭಾಷಾ ಪದ್ದರ್ತಿ ಪರಾ ರಚಿತಾ : ಎಂಬ ಸದ್ಯದಿಂದ ತಿಳಿಯುತ್ತದೆ. ೯ನೆಯ ಶತಮಾನದಲ್ಲಿ ಹುಟ್ಟಿದ ಕುರಾಜ ಮಾರ್ಗವೇ ನಮಗೆ ದೊರೆತಿರುವ ಆದಿಗ್ರಂಥವಾಗಿದೆ. ಯಾಪ್ಪರುಂಗಲಕಾರಿಹೈ ಎಂಬ ತಮಿಳು ಛಂದೋಗ್ರಂಥದಿಂದ ಕನ್ನಡ ದಲ್ಲಿ ಗುಣಗಾ೦ಕಿಯಂ ಎಂಬ ಒಂದು ಛಂದೋಗ್ರಂಥವು ಇದ್ದಂತೆ ತಿಳಿಯುತ್ತದೆ. ಗುಣಗಾ೦ಕಿಯವು ಸ್ತ್ರೀಗೆ ಸಂಬೋಧಿಸಿದೆ ಎಂದೂ ತಮಿಳುಗ್ರಂಥವೂ ಆ ರೀತಿ ಯನ್ನೇ ಅನುಸರಿಸಿದೆ ಎಂದೂ ಹೇಳಿದೆ. ತಮಿಳು ಗ್ರಂಥವನ್ನು ಬರೆದ ಅಮೃತಸಾಗರ ನೆಂಬ ಕವಿ ೧೧ನೆಯ ಶತಮಾನಕ್ಕೆ ಹಿಂದೆ ಇದ್ದವನು. ಕನ್ನಡಗ್ರಂಥವನ್ನು ಬರೆದ ಕವಿಯ ಹೆಸರು ಹೇಳಿಲ್ಲ. ಅವನು ತನ್ನ ಗ್ರಂಥವನ್ನು ಗುಣಗ, ಗುಣ ಗಾಂಕ, ಗುಣಕೆನಲ್ಲ ಎಂಬ ವಿಶೇಷಣಗಳುಳ್ಳ, ೩-ನೆಯ ವಿಜಯಾದಿತ್ಯ ನೆಂಬ ( ೮೪೪-೮೮೮ ) ಪೂರ್ವದೇಶದ ಚಾಲುಕ್ಯರಾಜನಿಗೆ ಅ೦ಕಿತನಾಡಿದಂತೆ ತೋರುತ್ತದೆ. ಈ ಗ್ರಂಥವ, ನಮಗೆ ದೊರೆತಿಲ್ಲ. ನಾಗವರ್ಮನ ಕಾಲಕ್ಕೆ ಹಿಂದೆ ಹುಟ್ಟಿದ ಈ ಗ್ರಂಥ ನೇ ಕನ್ನಡಛಂದಸ್ಸಿನಲ್ಲಿ ಆದಿಗ್ರಂಥ. ೧೯