ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಂಯಿ } ಅ ಧ್ಯ 5 V ಭಸ೬ಣ. US WVಿ | JC 14V| •••-- -- - - - - -. ಸುಮಾರು ೯೦೦-ರಲ್ಲಿದ್ದ ರಾಜಶೇಖರನೆಂಬ ಸಂಸ್ಕೃತಕವಿ ತನ್ನ ಕಾವ್ಯ ವಿಾಮಾಂಸೆಯೆಂಬ ಗ್ರಂಥದಲ್ಲಿ ಕರ್ಣಾಟರು ಓದುವ ರೀತಿಯನ್ನು ಕುರಿತು ಹೀಗೆ ಬರೆದಿದ್ದಾನೆ... ರಸ: ಕೊಪ್ಯ ಸ್ತು ಕಾವ್ಯ ಸ್ತು ರೀತೀ ಕೋ ಸು ವಾ ಗುಣಃ | ಸಗರ್ವ೦ ಸರ್ವಕರ್ಣಾಟಾಷ್ಟ೦ಕಾರೋತ್ತರಸಾಲಿನಃ | (ರಸ, ರೀತಿ, ಗುಣ ಇವು ಆವುವಾದರೂ ಆಗಲಿ, ಎಲ್ಲಾ ಕರ್ಣಾಟರೂ ಹೆಮ್ಮೆ ಯಿಂದ ಟಂಕಾರದೊಡನೆ ಓದುತ್ತಾರೆ.) ಕನ್ನಡ ನಾಡಿನ ದೊರೆಗಳು. - ಕನ್ನಡನಾಡಿನಲ್ಲಿ, ಕಾಲಕ್ರಮದಲ್ಲಿ ಅನೇಕ ರಾಜ್ಯಗಳು ಹುಟ್ಟಿ ಅವ್ರಗಳಲ್ಲಿ ಆಂಧ್ರರೂ, ಕದಂಬರೂ, ಗಂಗರೂ, ಚಾಳುಕ್ಯರೂ, ರಾಷ್ಟ್ರಕೂಟರೂ, ಕಾಳ ಚುರ್ಯರೂ, ಹೊಯ್ಸಳರೂ, ವಿಜಯನಗರದರಸರೂ, ಮೈಸೂರರಸರೂ ಆಳಿದರು. ಈ ಮೂರ್ಧಾಭಿಷಿಕ್ತರಾದ ರಾಜರಲ್ಲದೆ ಅಲ್ಲಲ್ಲಿ ಅನೇಕ ಸಾಮಂತರಾಜರೂ ಇದರು. ಈ ರಾಜರೆಲ್ಲರೂ ಪ್ರಾಯಿಕವಾಗಿ ಪರಾಕ್ರಮಶಾಲಿಗಳಾಗಿಯೂ ಧರ್ಮಪರಾಯಣ ರಾಗಿಯೂ ವಿದ್ಯಾ ಪಕ್ಷಪಾತಿಗಳಾಗಿಯೂ ದಿಗಂತವಿಶ್ರಾಂತಕೀರ್ತಿಭಾಜನರಾಗಿಯೂ ರಾಜ್ಯಭಾರಮಾಡಿದರೆ, ಹಲವರು ಭಿನ್ನಮತಸ್ಥರಾದರೂ ರಾಗದ್ವೇಷಗಳಿಲ್ಲದೆ ಅನ್ಯಮತಗಳನ್ನು ಸಮದೃಷ್ಟಿಯಿಂದ ಕಾಣುತ್ತ ಅವಕ್ಕೆ ಪ್ರೋತ್ಸಾಹವನ್ನು ಕೊಡುತ್ತಿ ದರು, ಬೇರೆ ಬೇರೆ ಮತಸ್ಥರಿಗೆ ಪರಸ್ಪರ ವೈಮನಸ್ಯವು ಹುಟ್ಟಿದಾಗ ರಾಜರುಗಳು ಸಮಾಧಾನಪಡಿಸಿ ಸೌಹಾರ್ದವನ್ನು ನೆಲೆಗೊಳಿಸಿದಂತೆ ಶಾಸನಗಳಿಂದ ತಿಳಿಯುತ್ತದೆ. ವಿದ್ವಾಂಸರು, ವಿರಕ್ತರು, ಭಕ್ತರು ಇವರುಗಳಿಗೆ ತಕ್ಕ ಮನ್ನಣೆಯನ್ನು ಮಾಡಿ ಗೌರವಿಸುತ್ತಿದ್ದರು. ಗುಣಗ್ರಾಹಿಗಳಾಗಿ ಗುಣವಿಶಿಷ್ಟರನ್ನು ಆರಿಸಿ ತಕ್ಕ ಪದವಿ ಗಳಲ್ಲಿಟ್ಟು ತಮಗೂ ತಮ್ಮ ರಾಜ್ಯಕ್ಕೂ ಕ್ಷೇಮವುಂಟಾಗುವಂತೆ ಪೋಷಿಸಿದರು. ಕನ್ನಡನಾಡು ವಿದ್ಯಾವಿಭವದಿಂದಲೂ ವಾಣಿಜ್ಯಶಿಲ್ಯಾದಿ ಕಲಾಕೌಶಲ್ಯದಿಂದಲೂ ಪ್ರಜಾನುರಾಗದಿಂದಲೂ ಶೋಭಿಸುತ್ತಿದ್ದಿತು. ಕನ್ನಡನಾಡಿನ ಮಹಿಮೆ. - ದೈತನತೋದ್ದಾರಕರಾದ ಮಧ್ವಾಚಾರ್ಯರಿಗೆ ಕನ್ನಡನಾಡು ತವರುಮನೆ ; ಅತನತೋದ್ಧಾರಕರಾದ ಶಂಕರಾಚಾರ್ಯರಿಗೂ ವಿಶಿಷ್ಟಾದೈತನತೋದ್ದಾರಕ ರಾದ ರಾಮಾನುಜಾಚಾರರಿಗೂ ಆಶ್ರಯಸ್ಥಾನ, ಇವರುಗಳಿಂದ ಸ್ಥಾಪಿತವಾದ ಮಠ ಗಳೂ ಶಾಖಾಮಠಗಳೂ ಇಲ್ಲಿ ಈಗಲೂ ಶೋಭಿಸುತ್ತಿರುವುವು. ಈ ನಾಡು ವಿದ್ಯಾ ತೀರ್ಥ, ವಿದ್ಯಾರಣ್ಯ, ಸಾಯಣಾಚಾರ್ಯ, ಶ್ರೀಪಾದರಾಯ, ವ್ಯಾಸರಾಯ, ರಾಘ ವೇಂದ್ರಯತಿ, ಅನಂತಾಚಾರ್ಯ, ವೇದಾಂತಾಚಾರ್ಯ, ಪುರಂದರದಾಸ, ಕನಕ ದಾಸ, ಬಸವ, ಸಿದ್ಧರಾಮ, ನೇಮಿಚಂದ್ರ, ಶುಭಚಂದ್ರ ಇವರೇ ಮುಂತಾದ ತಪೋಧನ ೧೩೦