ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸಂ ಆಶ್ವಯುಜ.] ಅಧ್ಯಕ್ಷರ ಭಾಷಣ ಕರ್ಣಾಟಕ ಸಾಹಿತ್ಯ ರಿಂದಲೂ ವಿದ್ವದ್ವರ್ಯರಿಂದಲೂ ತತ್ವದರ್ಶಿಗಳಿಂದಲೂ ಭಕ್ತಶಿರೋಮಣಿಗಳಿಂದಲೂ ಅಲಂಕೃತವಾಗಿದ್ದಿತು, ವಾಣಿಜ್ಯ, ಶಿಲ್ಪ ಮುಂತಾದ ಕಲೆಗಳಲ್ಲಿ ಅಸದೃಶವಾದ ನೈಪುಣ್ಯವನ್ನು ಹೊಂದಿದವರೂ ಕನ್ನಡನುಡಿಯ ಸೊಬಗನ್ನು ಪ್ರಕಾಶಗೊಳಿಸಲು ಸಮರ್ಥರಾದ ಕವಿಶಿಖಾಮಣಿಗಳೂ ಈ ನಾಡಿನ ಕೀರ್ತಿಯನ್ನು ಸ್ಥಿರೀಕರಿಸಿದ್ದಾರೆ. ವಾಣಿಜ್ಯ. - ಚಿತ್ರದುರ್ಗದಲ್ಲಿ ಆಂಧ್ರಕೃತ್ಯರ ಸೀಸದ ನಾಣ್ಯಗಳು ದೊರೆತುವೆಂದು ಹಿಂದೆ ಯೇ ತಿಳಿಸಿದ್ದೇನೆ. ಅದೇ ಸ್ಥಳದಲ್ಲಿ ಕ್ರಿಸ್ತ ಪೂರ್ವ ೨ನೆಯ ಶತಮಾನದಲ್ಲಿದ್ದ ರ್ಹುತಿ ಎಂಬ ಚೀನದೇಶದ ಚಕ್ರವರ್ತಿಯ ಹಿತ್ತಾಳೆನಾಣ್ಯವೂ ಕ್ರಿಸ್ತಶಕ ೧೪-ರಲ್ಲಿ ಸತ್ತ ಆಗ | ಸ್ವಸ್ ಎಂಬ ರೋಮ್ ಚಕ್ರವರ್ತಿಯ ಡಿನೇರಿಯಸ್ ಎಂಬ ಬೆಳ್ಳಿ ನಾಣ್ಯಗಳೂ ದೊರೆತುವು. ಇದರಿಂದ ಪೂರ್ವಕಾಲದಲ್ಲಿ ಕನ್ನಡನಾಡಿನ ವಾಣಿಜ್ಯವು ಎಷ್ಟರ ಮಟ್ಟಿಗೆ ವ್ಯಾಪಿಸಿತು ಎಂಬಂಶವನ್ನು ಸ್ವಲ್ಪಮಟ್ಟಿಗೆ ಊಹಿಸಬಹುದಾಗಿದೆ. ವೀರಬ ಣಂಜು ಧರ್ಮಕ್ಕೆ ಅಯ್ಯಾವಳೆ (ಐಹೊಳೆ) ಜನ್ಮಸ್ಥಾನವೆಂದು ಶಾಸನಗಳಲ್ಲಿ ಹೇಳಿದೆ. ೧೧೮೮-ರಲ್ಲಿ ಬರೆದ ಒಂದು ಶಾಸನದಲ್ಲಿ (ಅರಸೀಕೆರೆ ೨೨) ಚೆಟ್ಟಿ ಪಸೆಟ್ಟ ಎಂಬವನು ಇಂದ್ರನ ಉಚೈಶ್ರವಸ್ಸಿಗೆ ಸಮಾನವಾದ ಕುದುರೆಗಳನ್ನೂ ಐವತಕ್ಕೆ ಸದೃಶವಾದ ಆನೆಗಳನ್ನೂ ಶ್ರೇಷ್ಠವಾದ ಮುತ್ತುಗಳನ್ನೂ ಹಡಗುಗಳಲ್ಲಿ ತಂದರೆಗಳಿಗೆ ಮಾರು ತಿದ್ದಂತೆ ಹೇಳಿದೆ ಹರಿಯ ಹಯಕ್ಕೆ ತೋಡೆ ನಿಪ ಹೇಷಚಯಂಗಳನಿಂ ಪ್ರದ೦ತಿರ್ಯೊ | ದೊರೆಯೆನಿಸಿರ್ಪ ದ೦ತಿಗಳನಭ್ರದೊಳಾದ ಸುಸಾಣಿಮುತ್ತಿ ನೋgಕೆ | ಸರಿಯೆನಿಸಿರ್ಪ ಮುತ್ತುಗಳ ನೆಯೇ ಬಹಿತ್ರದೆ ತಂದು ಮಾರುವಂ ! ಧರಣಿಪರ್ಗೊಟ್ಟು ಕಮ್ಮಟದ......ಚೆಟ್ಟ ಪಸೆಟ್ಟ ಸ೦ತತಂ ! ಅದೇ ಶಾಸನದಲ್ಲಿ ವಾಸೆಯನೆಂಬ ವರ್ತಕನು ಪೂರ್ವದೇಶದ ವಸ್ತುಗಳನ್ನು ಪಶ್ಚಿಮದೇಶಕ್ಕೂ ಪಶ್ಚಿಮದೇಶದ ವಸ್ತುಗಳನ್ನು ಪೂರ್ವದೇಶಕ್ಕೂ ಉತ್ತರದೇಶದ ಭಂಡಗಳನ್ನು ದಕ್ಷಿಣದೇಶಕ್ಕೂ ದÅಣದೇಶದ ಭಂಡಗಳನ್ನು ಉತ್ತರದೇಶಕ್ಕೂ ಕಳು ಹಿಸುತ್ತಿದ್ದನೆಂದು ಹೇಳಿದೆ... ಹರಿದಾಶಾಭಾಂಡವ: ವಾರುಣಿಗೆ ನಡ ಸುವ೦ ವಾರುಣೀ ವಸ್ತು ವಂ ವಿ | ಸ್ವರದಿಂದಿಂದ್ರಾಶೆಯೊಳ್ ಸೆರ್ಚಿಸುವ ನೊಸೆದು ಕಾಬೇರಿಯಿಂ ದ್ಯು ನ್ನು ನಂ ನೋ !! ಡಿರೆ ಯಾವ್ಯಾ ಭಾಗದೊಳ್ ಸ೦ದಿಸುವನೆಸೆವ ಮೋಲ್ಕ೦ಗಳ ೦ಯಾನ್ಯು ಎಂದು! ತರದಿಕ್ಕಿ೦ಗಟ್ಟುವ೦ ನೋಡನುಪಮವಣಿಜ೦ ದಾಸೆಯಂ ದೋಷದೂ ರc । ೧೨೫೫-ರಲ್ಲಿ ಬರೆದ ಮತ್ತೊಂದು ಶಾಸನದಲ್ಲಿ (ಅರಸೀಕೆರೆ ೧೦೮) ಕುಂಜನಂಬಿ ಸೆಟ್ಟಿ ಎಂಬವನು ಮಾಳವ, ಕಳಿಂಗ, ಚೋಳ, ಪಾಂಡ್ಯ ಈ ರಾಜರುಗಳ ಸಮಯಕ್ಕೆ ೧೩೧