ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷತೃತ್ರಿಕ.] ಅಧ್ಯಕ್ಷರ ಭಾಷಣ ಕ್ಷ [ಅಕ್ಟೋಬರ್ ೧೯೧೮. .. .. ..... . . .. . ಬೇಕಾದ ವಸ್ತುಗಳನ್ನು ಒದಗಿಸಿಕೊಟ್ಟು ಹೊಯ್ಸಳರಾಜ್ಯದಲ್ಲಿ ಕೀರ್ತಿಯನ್ನು ಪಡೆ ದಿವಂತೆ ಹೇಳಿದೆ ಬೀರನ ಮಾಳವೇ೦ದ್ರನ ಕಳಿಂಗನ ಚೋಳನ ಪಾಂಡ್ಯಭೂ ತಳಾ | ಧಾರನ ಮುಟ್ಟಿ ದೊ೦ದನಸರಂಗಳ ನಾಗಳೆ ಪೂಣ್ಣು ಮಾಳ್ವ ನಿ ಸ್ತಾರದ ಪುಣ್ಯ ಸ೦ಪದದಿನೊಪ್ಪುವ ಸೆಟ್ಟಗೆ ಕು೦ಜನ೦ಬಿಗಿ | ನಾ ರೆಣೆಯೆಂ ಬಿನ೦ ನೆಗಳ್ಳನಗ್ನದ ಹೊಯ್ಸಳ ರಾಯರಾಜ್ಯ ದೊಳ್ || ಶಿಲ್ಪ. ವಾಸ್ತು ವಿನ್ಯಾವಿಶಾರದರಾದ ಕನ್ನಡನಾಡಿನ ಶಿಲ್ಪಿಗಳು ಎಲ್ಲೋರ, ಇಟ್ಟಗಿ, ಬೇಲೂರು, ಹಳೆಯಬೀಡು, ಸೋಮನಾಥಪುರ, ನಂದಿ, ಶೃಂಗೇರಿ, ಶ್ರವಣಬೆಳ್ಳೋಳ ಮುಂತಾದ ಸ್ಥಳಗಳಲ್ಲಿ ನಿರ್ಮಿಸಿರುವ ದೇವಾಲಯಗಳೂ ಕೆತ್ತಿರುವ ವಿಗ್ರಹಗಳೂ ವಿದೇಶೀಯರಾದ ಶಿಲ್ಪಶಾಸ್ತ್ರಜ್ಞರನ್ನು ಆಶ್ಚರ್ಯರಸದಲ್ಲಿ ಮಗ್ನರಾಗುವಂತೆ ಮಾಡಿದೆ. ಶ್ರವಣಬೆಳೊಳದಲ್ಲಿರುವ ಸುಮಾರು ೬೦ ಅಡಿ ಎತ್ತರವುಳ್ಳ ಗೋಮಟೇಶ್ವರನ ಸುಂದರ ವಾದ ವಿಗ್ರಹವು ನೋಡಿದವರನ್ನೆಲ್ಲಾ ಸ್ತಬ್ಬರನ್ನಾಗಿ ಮಾಡುತ್ತದೆ. ಈಜಿಪ್ಟ್ ದೇಶ ವನ್ನು ಬಿಟ್ಟರೆ ಇಂತಹ ಅದ್ಭುತವಾದ ಕೆಲಸವು ಪ್ರಪಂಚದ ಇನ್ನಾವಭಾಗದಲ್ಲಿಯೂ ಇಲ್ಲವೆಂದು ತಿಳಿಯುತ್ತದೆ ಮೇಲೆ ಹೇಳಿದ ದೇವಾಲಯಗಳಲ್ಲಿ ಶಿಲ್ಪಿಗಳು ತೋರಿ ಸಿರುವ ಕೌಶಲ್ಯವನ್ನು ಫರ್ಗಸ್ರ, ಹಾವಲ್, ವಿನ್ಸೆಂಟ್ ಸ್ಮಿತ್, ವರ್ಕ್‌ಮ್ರ ಮುಂತಾದ ಶಿಲ್ಪಶಾಸ್ತ್ರಜ್ಞರು ಹೇರಳವಾಗಿ ಪ್ರಶಂಸಿಸಿದ್ದಾರೆ. ಈ ಶಿಲ್ಪಿಗಳಲ್ಲಿ ಹಲ ವರು ತಾವು ಕೆತ್ತಿದ ವಿಗ್ರಹಗಳ ಬುಡದಲ್ಲಿ ತಮ್ಮ ಹೆಸರುಗಳನ್ನು ಬರೆದುಕೊಂಡಿ ದ್ದಾರೆ. ಈ ಹೆಸರುಗಳಲ್ಲಿ ಮಲ್ಲಿತಮ್ಮ, ಮಸಣಿತಮ್ಮ, ಬೈಚೋಜ, ಹೊನ್ನೋಜ, ವಾಸೋಜ, ನಂಜಯ, ಹರಿಪ, ಮಧುವಣ್ಣ, ಎಳನುಸಯ, ಎಂಬುವು ಕೆಲವು. ಈ ರೀತಿಯಾಗಿ ಶಿಲ್ಪಿಗಳು ತಮ್ಮ ಹೆಸರು ಬರೆದುಕೊಂಡಿರುವುದು ಮೈಸೂರು ದೇಶ ದಲ್ಲಿ ಮಾತ್ರವೇ ಎಂದು ತಿಳಿಯುತ್ತದೆ. ಉಳಿದ ಕಡೆ ಈ ಪದ್ಧತಿ ಪ್ರಾಯಿಕವಾಗಿ ಇಲ್ಲ. ಫರ್ಗಸ್ರ ಮುಂತಾದವರು ನೋಡದೆ ಇರುವ ಒಂದು ದೇವಸ್ಥಾನದ ವಿಷ ಯವನ್ನು ಮಾತ್ರ ಇಲ್ಲಿ ಸ್ವಲ್ಪಮಟ್ಟಿಗೆ ಸೂಚಿಸುತ್ತೇನೆ. ೧೪- ನೆಯ ಶತಮಾ ನದ ಪೂರ್ವಾರ್ಧದಲ್ಲಿ ಶೃಂಗೇರಿಯ ಮಠದಲ್ಲಿ ವಿದ್ಯಾತೀರ್ಥರೆಂಬವರು ಸ್ವಾಮಿ ಯಾಗಿದ್ದರು. ಇವರು ಭಾರತೀ ತೀರ್ಥರಿಗೂ ವಿದ್ಯಾರಣ್ಯರಿಗೂ ಗುರುಗಳು, ಇವರ ದರ್ಶ ನವನ್ನು ಮಾಡುವುದಕ್ಕಾಗಿ ವಿಜಯನಗರದ ೧ನೆಯ ರಾಜನಾದ ಹರಿಹರನು ೧೩೪೬ ರಲ್ಲಿಯೂ ಅವನ ತಮ್ಮನಾದ ಬುಕ್ಕನು ೧೩೫೬-ರಲ್ಲಿಯೂ ಶೃಂಗೇರಿಗೆ ಹೋಗಿದ್ದಂತೆ ಶಾಸನಗಳಿಂದ ತಿಳಿಯುತ್ತದೆ. ಈ ಮಹಾತ್ಮರ ಜ್ಞಾಪಕಾರ್ಥವಾಗಿ ಇವರ ಸನಾ ಧಿಯ ಮೇಲೆ ಇವರ ಶಿಷ್ಯರಾದ ಭಾರತೀತೀರ್ಥರು ತಾವೇ ಮೇಲ್ವಿಚಾರಣೆಯನ್ನು ವಹಿಸಿ ವಿದ್ಯಾಶಂಕರ ಎಂಬ ನಾಮಧೇಯವುಳ್ಳ ಒಂದು ದೇವಸ್ಥಾನವನ್ನು ಸುಮಾರು ೧೩L-ರಲ್ಲಿ ಕಟ್ಟಿಸಿದರು. ಈ ದೇವಸ್ಥಾನವು ಚಿತ್ರವಿಚಿತ್ರವಾದ ಕೆಲಸಗಳಿ೦ದ ೧೩೨