ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸ - ಆಶ್ವಯುಜ.1 ಅಧ್ಯಕ್ಷರ ಭಾಷಣ. | ಕFಓಟಕ : 3 .. .. .. ... .. .. ಶೋಭಾಯಮಾನವಾಗಿರುವುದು, ಇದರ ಸಂವಿಧಾನ ರಚನೆಯೂ ಅನ್ಯಾದೃಶವಾ ದುವು. ಇದರ ಸಂವಿಧಾನದಂತಹ ಸಂವಿಧಾನವು (plan) ಆಸೇತುಹಿಮಾಚಲ ದಲ್ಲಿಯೂ ಇಲ್ಲ. ಭರತವರ್ಷದಲ್ಲಿ ಕೆಲವು ಕಟ್ಟಡಗಳು ಮಾತ್ರ ಗಜಪೃಷಾಕೃತಿ ಯಾಗಿ ಒಂದು ತುದಿಯಲ್ಲಿ ವರ್ತುಲವಾಗಿವೆ (upsidal at one und), ಈ ಕಟ್ಟಡವಾದರೋ ಸೌತೆಯ ಕಾಯ ಹಾಗೆ ಎರಡು ತುದಿಗಳಲ್ಲಿಯೂ ವರ್ತುಲವಾ ಗಿದೆ. ಇಂತಹ ಸಂವಿಧಾನದ ಕಟ್ಟಡಗಳು ಭರತವರ್ಷದಲ್ಲಿಲ್ಲ; ಇವನ್ನು ನೋಡಬೇ ಕಾದರೆ ರೋಮ್ ಪಟ್ಟಣಕ್ಕೆ ಹೋಗಬೇಕು, ಅಲ್ಲಿ ೧ನೆಯ ಶತಮಾನದ ಕೊನೆಯ ಲ್ಲಿದ್ದ ಟ್ರೇರ್ಜ ಎಂಬ ಚಕ್ರವರ್ತಿ ಇಂತಹ ಕಟ್ಟಡವನ್ನು ಕಟ್ಟಿಸಿದ್ದಾನೆ. ಇಂತಹ ಕಟ್ಟ ಡಕ್ಕೆ ಬಸಿಲಿಕಾ (Basilica) ಎಂದು ಹೆಸರು ಭರತವರ್ಷದಲ್ಲಿ ಎಲ್ಲಿಯೂ ದೃ ಚರವಾಗದ ಇಂಥ ಸಂವಿಧಾನವನ್ನು ಏರ್ಪಡಿಸಿ ಈ ಕಟ್ಟಡವನ್ನು ಕಟ್ಟಿದ ಶಿಲ್ಪಿಗಳ ಚಾತುರ್ಯವನ್ನು ಎಷ್ಟು ಕೊಂಡಾಡಿದರೂ ಸಾಲದು. ಇದು ಹಾಗಿರಲಿ, ದೇವ ಸ್ಥಾನದ ನವರಂಗದೊಳಗೆ ೧೨ ಚಿತ್ರಮಯವಾದ ಕಂಭಗಳಿವೆ. ಒಂದೊಂದು ಕಂಭದ ಮೇಲೆಯೂ ಮೇಷ, ವೃಷಭ ಮುಂತಾದ ೧೨ ರಾಶಿಗಳ ಚಿಹ್ನಗಳಲ್ಲಿ ಒಂದೊಂದು ಅಂಕಿತವಾಗಿದೆ. ಆಯಾಚಿಹ್ನಕ್ಕೆ ಅನುಗುಣವಾಗಿ ಆಯಾಕಂಭದ ಮೇಲೆ ಆಯಾ ತಿಂಗಳಲ್ಲಿ ಸೂರ್ಯರಶ್ಮಿ ಬೀಳುವಂತೆ ಕಂಭಗಳನ್ನು ನಿಲ್ಲಿಸಿರುವ ಶಿಲ್ಪ ಕೌಶಲ್ಯವು ಯಾರಿಗೆ ತಾನೆ ಆಶ್ಚರ್ಯವನ್ನು ಉಂಟುಮಾಡದು ? ಕನ್ನಡನುಡಿಗೆ ಪ್ರೋತ್ಸಾಹ ಪೂರ್ವದಿಂದಲೂ ಕನ್ನಡನುಡಿ ರಾಜರುಗಳ ಮತ್ತು ಮಂಡಲಿಕರ ಪ್ರೋತ್ಸಾಹ ದಿಂದ ಏಳಿಗೆಯನ್ನು ಹೊಂದಿರುತ್ತದೆ. ಗಂಗರು, ರಾಷ್ಪ ಕೂಟರು, ಚಾಳುಕ್ಯರು, ಕಾಳಚುರ್ಯರು, ಕಾಕತೀಯರು, ಹೊಯ್ಸಳರು, ವೆಂಗಿಯ ಅರಸರು ಅಥವಾ ಪೂರ್ವದೇಶದ ಚಾಳುಕ್ಯರು, ವಿಜಯನಗರದ ಅರಸರು, ಮೈಸೂರರಸರು, ಸೌಂದ ಯ ರಟ್ಟರು, ಕರಹಾಟದ ಶಿಲಾಹಾರರು, ಸಾಂತರರು, ಕೊಂಗಾಳ್ಳರು, ಚೆಂಗಾಟ್ರರು, ತುಳುದೇಶದ ಅರಸರು, ಕೊಡಗು ಅರಸರು, ಉಮ್ಮತ್ತೂರು, ನುಗ್ಗೆ ಹಳ್ಳಿ, ಸುಗಟೂರು. ಆವತಿ, ಇಕ್ಕೇರಿ, ಬೇಲೂರು, ಚಿತ್ರದುರ್ಗ, ಕಳಲೆ, ಪಿರಿಯಾಪಟ್ಟಣ, ಹದಿನಾಡು. ಚಿಕ್ಕನಾಯಕನಹಳ್ಳಿ ಮುದಿಗೆರೆ, ಬಿಜ್ಜನರ, ಈ ಸ್ಥಳಗಳ ಪಾಳೆಯಗಾರರು, ಚೌಟರು ಇವರುಗಳಲ್ಲಿ ಕೆಲವರು ಸ್ವತಃ ಕವಿಗಳಾಗಿದ್ದುದಲ್ಲದೆ ಅನೇಕರು ಕವಿಗಳಿಗೆ ಪೋಷಕ ರಾಗಿ ಬಹಳ ಪ್ರೋತ್ಸಾಹವನ್ನು ಉಂಟುಮಾಡಿದ್ದಾರೆ. ಈ ಪ್ರಭುಗಳು ಮಾತ್ರವಲ್ಲದೆ ಇವರ ಕೈಯ ಕೆಳಗೆ ದೊಡ್ಡ ದೊಡ್ಡ ಪದವಿಗಳನ್ನು ವಹಿಸಿದ್ದ ಮಂತ್ರಿಗಳು, ದಂಡ ನಾಯಕರು, ಪಸಾಯಿತರು ಮುಂತಾದ ಅಧಿಕಾರಿಗಳಲ್ಲಿಯೂ ಕೆಲವರು ಕವಿಗಳಾಗಿ ಯೂ, ಹಲವರು ಕವಿಪೋಷಕರಾಗಿಯೂ ಇದ್ದರು. ಅಲ್ಲದೆ ಚಿಕ್ಕ ಚಿಕ್ಕ ಪಾಳೆಯ ಪಟ್ಟಿಗೆ ವಿಭುಗಳಾದ ಹಲವರು ಗ್ರಂಥರಚನೆಯನ್ನು ಮಾಡಿದ್ದಾರೆ. ಈ ವಿಷಯವನ್ನು ಸ್ವಲ್ಪಮಟ್ಟಿಗೆ ಉದಾಹರಣಗಳೊಡನೆ ಕೆಳಗೆ ವಿವರಿಸುತ್ತೇನೆ .... ೧೩೩