ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(Sಷ ಓತಿಕೆ. ಅಧ್ಯಕ್ಷರ ಭಾಷಣ. - [ಅಕ್ಟೋಬರ್ ೧೯೧೮. of ೧೯೨೮. ಗಂಗರು- ಈ ರಾಜರಲ್ಲಿ ಸುಮಾರು ೫೦೦ ರಲ್ಲಿದ್ದ ದುರ್ವಿನೀತನು ನೃಪ ತುಂಗನ ಹೇಳಿಕೆಯ ಪ್ರಕಾರ ಕನ್ನಡದಲ್ಲಿ ಗದ್ಯಗ್ರಂಥಕಾರನಾಗಿದ್ದಿರಬಹುದೆಂದು ತೋರುತ್ತದೆ. ಶಿವಮಾರನು (೭೮೦ – ೮೧೪) ಗಜಾಷ್ಟಕವನ್ನು ಬರೆದನೆಂದೂ ಅದು “ಒನಕೆವಾಡಾದುದು" ಎಂದೂ ಒಂದು ಶಾಸನದಿಂದ (ನಗರ ೩೫) ತಿಳಿವುದರಿಂದ ಇದು ಕನ್ನಡ ಗ್ರಂಥವಾಗಿರಬಹುದೆಂದು ತೋರುತ್ತದೆ. ಮಹೇಂದ್ರಾಂತಕ ಎಂಬ ಬಿರುದುಳ್ಳ ಎರೆಯಪ್ಪನು (೮೮೬- ...೯೧೩) ಶೂದ್ರಕ, ಹರಿವಂಶ ಮೊದಲಾದ ಗ್ರಂಥ ಗಳನ್ನು ಬರೆದ ೧-ನೆಯ ಗುಣವರ್ಮನಿಗೆ ಪೋಷಕನಾಗಿದ್ದನು. ರಾಜಮಲ್ಲನ ಮಂತ್ರಿ ಯಾದ ಚಾವುಂಡರಾಯನು ೯೬೮ ರಲ್ಲಿ ಚಾವುಂಡರಾಯಪುರಾಣವನ್ನು ಬರೆದನು. ಈ ರಾಜನ ತಮ್ಮನಾದ ರಕ್ತಸಗಂಗನ ಆಶ್ರಿತನಾದ ನಾಗವರ್ಮನು ಛಂದೋಂಬುಧಿ ಮೊದಲಾದ ಗ್ರಂಥಗಳನ್ನು ಬರೆದನು. ರಾಷ್ಟ್ರಕೂಟರು- ಈ ದೊರೆಗಳಲ್ಲಿ ನೃಪತುಂಗನು ಕವಿಯಾಗಿದ್ದ ಸಂಗತಿ ತಿಳಿದೇ ಇದೆ. ೩-ನೆಯ ಇಂದ್ರರಾಜನ (೯೧೫-೯೧೭) ಕೈಯ ಕೆಳಗಿದ್ದ ಶ್ರೀ ವಿಜಯ ದಂಡನಾಥನಿಗೆ ಒಂದು ಶಾಸನದಲ್ಲಿ (E.•I. x. ೧೫೦) ಅನುಪಮಕವಿ ಎಂಬ ಬಿರುದು ಹೇಳಿದೆ. ೩-ನೆಯ ಕೃಷ್ಣರಾಜನು (೯೩೯-೯೬೮) ಪೊನ್ನನಿಗೆ ಕವಿಚಕ್ರ ವರ್ತಿ ಎಂಬ ಬಿರುದನ್ನು ಕೊಟ್ಟಂತೆ “ಕನ್ನರನಾದರದಿಂ ಕುಡೆ ಹೊನ್ನಂ ಕವಿಚಕ್ರ ವರ್ತಿವೆಸರಂ ತಳೆದಂ” ಎಂಬ ಜನ್ನನ ಪದ್ಯಭಾಗದಿಂದ ತಿಳಿಯುತ್ತದೆ. ಚಾಳುಕ್ಯರು-...ಈ ವಂಶಕ್ಕೆ ಸೇರಿದ ಅರಿಕೇಸರಿ ಎಂಬ ಸಾಮಂತರಾಜು ಆದಿಪಂಪನಿಗೆ ಪೋಷಕನಾಗಿ ಬಟ್ಟೆ ಸಾಸಿರದಲ್ಲಿ ಧರ್ಮಪುರವನ್ನು ಅಗ್ರಹಾರವಾಗಿ ಕೊಟ್ಟನು, ತೈಲಪನು (೯೭೩-೯೮೭) ರನ್ನನಿಗೆ ಕವಿಚಕ್ರವರ್ತಿಯೆಂಬ ಬಿರುದನ್ನು ಕೊಟ್ಟಂತೆ “ಮನನೊಸೆದು ತೈಲಪಂ ಕುಡೆ ರನ್ನಂ ಕವಿಚಕ್ರವರ್ತಿವೆಸರಂ ತಳೆದಂ” ಎಂಬ ಜನ್ನನ ಪದ್ಯಭಾಗದಿಂದ ತಿಳಿಯುತ್ತದೆ. ಆಹವಮಲ್ಲನ (೧೦೪೨-೧೦೬೮) ಆಶ್ರಿತನಾದ ಶ್ರೀಧರಾಚಾರ್ಯನು ಜಾತಕತಿಲಕವೆಂಬ ಜೋತಿಷಗ್ರಂಥವನ್ನು ೧೦೪೯. ರಲ್ಲಿ ಬರೆದಿದ್ದಾನೆ. “ಧಾತ್ರಿಯನಾಹವವಲ್ಲಭೂಮಿಪಾಳಕನೆಸೆದಾಳೆ” ಎಂದು ಗ್ರಂಥಾಂತ್ಯದಲ್ಲಿ ಬರೆದಿದ್ದಾನೆ. ಭುವನೈಕಮಲ್ಲನ (೧೦೬೮.೧೦೭೬) ಪಸಯಿತನಾದ ಲಕ್ಷನೃಪನ ಕೈಯ ಕೆಳಗೆ ಮಂತ್ರಿಯಾಗಿ ಬನವಸೆಸನ್ನಿರ್ಛಾಸಿರಕ್ಕೆ ಅಧಿಕಾರಿಯಾ ಗಿದ್ದ ಶಾಂತಿನಾಥನು ಸುಕುಮಾರಚರಿತವೆಂಬ ಚಂಪೂಗ್ರಂಥವನ್ನು ಬರೆದಿದ್ದಾನೆ. ಇದೇರಾಜನ ಮಹಾಪ್ರಧಾನನಾದ ಉದಯಾದಿತ್ಯನಲ್ಲಿ ಸಂಧಿವಿಗ್ರಹಿಯಾಗಿದ್ದ ನಾಗ ವರ್ಮಾಚಾರ್ಯನು ಚಂದ್ರಚೂಡಾಮಣಿಶತಕವನ್ನು ಬರೆದಿದ್ದಾನೆ, ಆಹವಮಲ್ಲನ ಮಗನಾದ ಜಯಸಿಂಹನ ಕೈಯ ಕೆಳಗೆ ಅಧಿಕಾರಿಯಾಗಿದ್ದ ಮಾಚಿರಾಜನ ಆಶ್ರಿತನಾಗಿ ಚ೦ದ್ರರಾಜನು ಮದನತಿಲಕವೇ ಮೊದಲಾದ ಗ್ರಂಥಗಳನ್ನು ಬರೆದನು. ಅದೇ ಆಹವ ಮಲ್ಲನ ಮಗನೂ, ವಿಕ್ರಮಾದಿತ್ಯನ ತಮ್ಮನೂ ಆದ ಕೀರ್ತಿವರ್ಮನು ಗೋವೈದ್ಯ ವನ್ನು ಬರೆದಿದ್ದಾನೆ. ಅದೇ ರಾಜನ ಆಶ್ರಿತನೂ, ಕೀರ್ತಿವರ್ಮನ ಮಿತ್ರನೂ ಆದ ಬ್ರಹ್ಮಶಿವನು ಸಮಯಪರೀಕ್ಷೆ, ತ್ರೈಲೋಕ್ಯ ರಕ್ಷಾಮಣಿಸ್ತೋತ್ರ ಇವುಗಳನ್ನು ರಚಿ ೧೩೪