ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯಕ್ಕೆ ೨ ೬. | ಅಧ್ಯಕ್ಷರ ಭಾಷಣ. ಕರ್ಕಾಟಕ ಸಾಹಿತ್ಯ ಸಿದ್ದಾನೆ. ೨ ನೆಯ ಜಗದೇಕಮಲ್ಲನಲ್ಲಿ (೧೧೩೮- ೧೧೮೦) ೨ನೆಯ ನಾಗವರ್ಮನು ಕಟಕೋ ಪಾಧ್ಯಾಯನಾಗಿದ್ದಂತೆ “ಜನನಾಥಂ ಜಗದೇಕನಲ್ಲಿ ಕಟಕೋಪಾಧ್ಯಾಯ ನಾನಾಗವರ್ಮಂ” ಎಂಬ ಜನ್ನನ ಪದ್ಯಭಾಗದಿಂದ ತಿಳಿಯುತ್ತದೆ. ಪಂಚತಂತ್ರವನ್ನು ಬರೆದ ದುರ್ಗಸಿಂಹನು ಇದೇ ರಾಜನಲ್ಲಿ ಸಂಧಿವಿಗ್ರಹಿಯಾಗಿದ್ದಂತೆ ಹೇಳಿಕೊಂಡಿ ದ್ದಾನೆ, ದಾವಣಗೆರೆಯ ೪೧ ನೆಯ ಶಾಸನವನ್ನು ಬರೆದ ಮಧುಸೂದನದೇವನು ಇದೇ ರಾಜನ ಸಾಮಂತನಾದ ಉಚ್ಚಂಗಿಯ ವೀರಪಾಂಡ್ಯನಿಂದ ಪೂಜಿತನಾಗಿದ್ದಂತೆ ತಿಳಿಯುತ್ತದೆ. ಕಾಳಚುರ್ಯರು-ಬಿಜ್ಜಳನ (೧೧೬-೧೧೬೭) ಕಾಲದಲ್ಲಿ ಬಸವ, ಚೆನ್ನ ಬಸವ, ಕೊಂಡಗೂಳಿ ಕೇಶಿರಾಜ ಮುಂತಾದ ವೀರಶೈವರು ಗ್ರಂಥಗಳನ್ನು ಬರೆದಿ ದ್ದಾರೆ. ಈ ಕಾಲದಲ್ಲಿ ವೀರಶೈವವುತಕ್ಕೆ ಸಂಬಂಧಿಸಿದ ಅನೇಕ ವಚನಗ್ರಂಥಗಳು ಹುಟ್ಟಿದುವು. ಕಾಕತೀಯರು- ಪ್ರತಾಪರುದ್ರನ ಸಭೆಯಲ್ಲಿ ರಾಘವಾಂಕನು ವೀರೇಶ್ವರ ಚರಿತೆಯನ್ನು ಓದಿ ವಾದಿಗಳನ್ನು ಜಯಿಸಿದಂತೆ ಹೇಳಿದೆ. ಮತ್ತೊಬ್ಬ ಪ್ರತಾಪ ರುದ್ರನ ಕಾಲದಲ್ಲಿ ಸೋಮೇಶ್ವರಶತಕವನ್ನು ಬರೆದ ಪಾಲ್ಕುರಿಕೆ ಸೋಮನು ಬಾಳಿ ದಂತೆ ತಿಳಿಯುತ್ತದೆ. ಹೊಯ್ಸಳರು- ೧ ನೆಯ ಬಲ್ಲಾಳನ (೧೧೦೦.೧೧೦೬) ಕಾಲದಲ್ಲಿ ಅಭಿನವ ಪಂಪನು ಇದ್ದಂತೆ ಕಂತಿಯ ಚರಿತದಿಂದ ತಿಳಿಯುತ್ತದೆ. ವಿಷ್ಣುವರ್ಧನನ (೧೧೧೧-. ೧೪೧) ಕಾಲದಲ್ಲಿ ರಾಜಾದಿತ್ಯನು ಕ್ಷೇತ್ರಗಣಿತವೇ ಮೊದಲಾದ ಗ್ರಂಥಗಳನ್ನು ಬರೆದನು. ಜನ್ನನ ತಂದೆಯಾದ ಸುಮನೋ ಬಾಣನು ೧ ನೆಯ ನರಸಿಂಹನ (೧೧೪೧- -೧೧೭೩) ಕಟಕೋಪಾಧ್ಯಾಯನಾಗಿದ್ದ೦ತೆ “ ನೃಸಿಂಹಕ್ಷಿತಿಪಾಲನಲ್ಲಿ ಕಟ ಕೋಪಾಧ್ಯಾಯಂ ಸುಮನೋಬಾಣಂ" ಎಂಬ ಜನ್ನನ ಸದ್ಯಭಾಗದಿಂದ ವ್ಯಕ್ತ ವಾಗುತ್ತದೆ. ಇದೇ ರಾಜನ ಕರಣಿಕನಾದ ಹರೀಶ್ವರನೂ, ಮಂತ್ರಿಯಾದ ಕೆರೆಯ ಪದ್ಯ ರಸನೂ ಗ್ರಂಥಗಳನ್ನು ಬರೆದಿದ್ದಾರೆ. ೨ ನೆಯ ಎಲ್ಲಾಳನ (೧೧೭೩, ೧೨೨೦) ಮಂತ್ರಿ ಯಾದ ಬೂಚಿರಾಜನು ಕವಿತೆಯಲ್ಲಿ ಪೊನ್ನನಿಗೆ ಸಮಾನನಾಗಿದ್ದನೆಂದು ಒಂದು ಶಾಸನ ದಿಂದ (ಹಾಸನ ೧೯) ತಿಳಿಯಬರುತ್ತದೆ. ಅದೇ ರಾಜನ ಸಜ್ಜೆವಳನಾದ ಪದ್ಮ ನಾಭನ ಇಷ್ಟಾನುಸಾರವಾಗಿ ನೇಮಿಚಂದ್ರನು ಅರ್ಧನೇಮಿಯನ್ನು ಬರೆದಂತೆ ಹೇಳು ತಾನೆ, ಅದೇರಾಜನ ಮಂತ್ರಿಯಾದ ಚಂದ್ರಮೌಳಿಯಿಂದ ಪೋಷಿತನಾಗಿ ರುದ್ರ ಭಟ್ಟನು ಜಗನ್ನಾಥವಿಜಯವನ್ನು ಬರೆದನು. ಅದೇರಾಜನ ಮಂತ್ರಿಯಾದ ನಸು ಧೈ ಕಬಾಂಧವ ರೇಚರಸನ ಪ್ರೇರಣೆಯಿಂದ ಆಚಣ್ಣನು ವರ್ಧಮಾನ ಪುರಾಣವನ್ನು ಬರೆ ದಂತೆ ತಿಳಿಯುತ್ತದೆ. ಇದೇ ದೊರೆಯಿಂದ ಕವಿಚಕ್ರವರ್ತಿಯೆಂಬ ಬಿರುದನ್ನು ತಾನು ಪಡೆದಂತೆ ಜನ್ನನು ಹೇಳುತ್ತಾನೆ, ೨ ನೆಯ ನರಸಿಂಹನ (೧೨೨೦.೧೨೩೨) ಮಂತ್ರಿ ಯಾದ ಪೋಲಾದಂಡನಾಥನು ಷಟ್ಟದೀರೂಪವಾದ ಹರಿಚಾರಿತ್ರವನ್ನು ಬರೆವಂತೆ ತಿಳಿಯುತ್ತದೆ. ಕೇಶಿರಾಜನ ತಂದೆಯಾದ ಮಲ್ಲಿಕಾರ್ಜುನನು ಕಾವ್ಯಾಂಗಗಳ ವರ್ಣ ೧! 18