ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಸತಕೆ | ಅಧ್ಯಕ್ಷರ ಭಾಷಣ. (ಅಕ್ಟೋಬರ್ ೧೯೧೮, ನಾರೂಪವಾದ ಸೂಕ್ತಿ ಸುಧಾರ್ಣವವನ್ನು ವೀರಸೋಮೇಶ್ವರನ (೧೨೩೩-೧೨೫೪) ಏನೋದಾಕರ್ಣನಕ್ಕಾಗಿ ಬರೆದಂತೆ ಹೇಳುತ್ತಾನೆ. - ವೆಂಗಿಯ ಅರಸರು ಅಥವಾ ಪೂರ್ವದೇಶದ ಚಾಲುಕ್ಯರು-ಗುಣ ಗಾ೦ಕ ವಿಜಯಾದಿತ್ಯನ (೮೪೪.... ೮೮೮) ಕಾಲದಲ್ಲಿ ಗುಣಗಾಂಕಿಯಂ ಎಂಬ ಕರ್ಣಾ ಟಕ ಛಂದೋಗ್ರಂಥವು ಹುಟ್ಟಿದಂತೆ ಹಿಂದೆಯೇ ತಿಳಿಸಿದ್ದೇನೆ. ರಾಜರಾಜನ (೧೦೨೨. ೧೦೬೩) ಆಸ್ಥಾನಕವಿಯಾದ ನನ್ನಯ್ಯ ಭಟ್ಟನಿಗೆ ಸಹಾಯಕನಾಗಿದ್ದ ನಾರಾಯಣ ಭಟ್ಟನು ಕನ್ನಡದಲ್ಲಿಯೂ ಕವಿಯಾಗಿದ್ದಂತೆಯೂ ಕವೀಭವಜ್ರಾಂಕುಶ ಎಂಬ ಬಿರು ದನ್ನು ಪಡೆದಿದ್ದಂತೆಯೂ ಈ ಶ್ಲೋಕಗಳಿಂದ ತಿಳಿಯುತ್ತದೆ :- ಯಸ್ಸ೦ಸ್ಕೃತ ಕರ್ಣಾಟಪ್ರಾಕೃತ ಪೈಶಾಚಿಕಾ೦ಧಭಾಷಾಸು! ಕವಿರಾಜಶೇಖರ ಇತಿ ಪ್ರಥಿತ ಸ್ಸು ಕವಿತ್ವ ನಿಭವೇನ । ಕರ್ವೀ ಮನಿಷಾಲವದುರ್ವಿದರ್ಗ್ವಾ ಮನೋಹರಾಭಿರ್ನಿಜಸೂಕ್ತಿ ಭಿರ್ಯಃ || ಕುರ್ವನ್ನ ಗನ'೯೯ ಪಟುಭಿರ್ಜಿ ಭರ್ತಿ ಕನೀಭವಜ್ರಾ೦ಕುಶನಾನು ಸಾರ್ಥ೦ | ಸೌಂದತ್ತಿಯ ರಟ್ಟರು- ಪಾರ್ಶ್ವನಾಥಪುರಾಣವನ್ನು ಬರೆದ ಪಾರ್ಶ್ವಪಂಡಿ ತನು ೪ ನೆಯ ಕಾರ್ತವೀರ್ಯನ (೧೨೨೨, ೧೨೨೦) ಆಸ್ಥಾನಕವಿಯಾಗಿದ್ದನು. ಅದೇ ರಾಜನ ಕಾಲದಲ್ಲಿ ಬಾಳಚಂದ್ರಕವಿ ಕಂದರ್ಪನು ಬಾಳಿದಂತೆ ತಿಳಿಯುತ್ತದೆ. ಪುಷ್ಪದಂತಪುರಾಣವನ್ನು ಬರೆದ ೨ ನೆಯ ಗುಣವರ್ಮನು ತಾನು ಅದೇ ದೊರೆಯ ಕೈಯಕೆಳಗೆ ನಾಲ್ಫ್ ಭುವಾಗಿದ್ದ ಶಾಂತಿವರ್ಮನ ಆಶ್ರಿತನೆಂದು ಹೇಳಿಕೊಂಡಿದ್ದಾನೆ. ಕರಹಾಟದ ಶಿಲಾಹಾರರು--ಗಂಡರಾದಿತ್ಯನ ಮಗನಾದ ವಿಜಯಾದಿತ್ಯನ (೧೧೪) ತಮ್ಮ ಲಕ್ಷ್ಮಣರಾಜನ ಆಜ್ಞಾನುಸಾರವಾಗಿ ಕಣ್ಣಪಾರನು ನೇಮಿನಾಥ ಪುರಾಣವನ್ನು ಬರೆದಂತೆ ಹೇಳುತ್ತಾನೆ. ಅದೇ ಲಕ್ಷಣರಾಜನ ಆಳಿಕೆಯಲ್ಲಿ ನೇಮಿ ಚಂದ್ರನು ಲೀಲಾವತಿಯನ್ನು ಬರೆದನು. ಈ ಗ್ರಂಥದ ಕೊನೆಯಲ್ಲಿ “ಧರೆಯಂ ರಕ್ಷಿ ಸುತಿರ್ಕೆ ಲಕ್ಕಬರಿಸಂ ಲಕ್ಷ್ಮೀಧರೋರ್ವೀಶ್ವರಂ” ಎಂದು ಹೇಳಿದೆ. ಸಾಂತರರು- ತೈಲಪದೇವನ ಮಂತ್ರಿಯಾದ ಕನ್ನುಗನಿಗೆ ೧೦೯೦ ರಲ್ಲಿ ಬರೆದ ಒಂದು ಶಾಸನದಲ್ಲಿ (ಸಾಗರ ೧೦೩) ವಿಬುಧಜನಮನಃಪದ್ಮರಾಜಹಂಸ ಎಂಬ ಬಿರುದು ಉಕ್ತವಾಗಿದೆ. - ಕೊಂಗಾಳ್ವರು-ಚಂದ್ರನಾಥಾಷ್ಟಕವನ್ನು ಬರೆದ ಮೌಕ್ತಿಕಕವಿ ವೀರಕೊಂ ಗಾಳ್ವನ (ಸು. ೧೧೨೦) ಕಾಲದಲ್ಲಿ ಬಾಳಿದಂತೆ ತೋರುತ್ತದೆ. ಚೆಂಗಾಳ್ಳರು-ಸನ್ಯಕೌಮುದಿ (೧೫೦೮) ಮುಂತಾದ ಗ್ರಂಥಗಳನ್ನು ಬರೆದ೩ ನೆಯ ಮಂಗರಸನು ತಾನು ಚೆಂಗಾಳ್ವರಾಜರ ಕುಲಕ್ರಮಾಗತಮಂತ್ರಿಯಾದ ಕಲ್ಲಹಳ್ಳಿಯ ಪ್ರಭು ವಿಜಯನ ಮಗನೆಂದು ಹೇಳಿಕೊಂಡಿದ್ದಾನೆ. ಚೆಂಗಾಳ್ವನಂಜ ರಾಯನ (೧೫೦೨-೧೫೩೩) ಆಳಿಕೆಯಲ್ಲಿ ನಂಜುಂಡನು ಕುಮಾರರಾಮಕಥೆಯನ್ನು ಬರೆದಂತೆ ತಿಳಿಯುತ್ತದೆ. ೧೬