ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

sಾಳ ಕಾಳಯುಕ್ತ ಸಂr ಆಶ್ವಯುಜ.7 ಅಧ್ಯಕ್ಷರ ಭಾಷಣ [ಕರ್ನಾಟಕ ಸಾಹಿತ್ಯ ತುಳುದೇಶದ ಅರಸರು--ಕಲ್ಯಾಣಕೀರ್ತಿ ತುಳುವದೇಶದ ದೊರೆ ಭೈರವ ಸುತ ಪಾಂಡ್ಯರಾಯನ ಇಷ್ಟಾನುಸಾರವಾಗಿ ಜ್ಞಾನಚ೦ದ್ರಾಭ್ಯುದಯವನ್ನು ೧೪೯ ರಲ್ಲಿ ಬರೆದಂತೆ ಹೇಳುತ್ತಾನೆ. ಸುಮಾರು ೧೫೦೦ ರಲ್ಲಿ ಜೀವಂಧರಷಟ್ಟದಿಯನ್ನು ಬರೆದ ಕೋಟೀಶ್ವರನು ಹೈವನ್ಸಪಸುತ ಸಂಗೀತಪುರದ ದೊರೆ ಸಂಗಮನ ಆಜ್ಞಾನು ಸಾರವಾಗಿ ತನ್ನ ಗ್ರಂಥವನ್ನು ಬರೆದನು. ಭರತೇಶ್ವರಚರಿತೆಯನ್ನು ೧೫೨೭ ರಲ್ಲಿ ಬರೆದ ರತ್ನಾಕರವರ್ಣಿ ತುಳುದೇಶದ ಭೈರಸಒಡೆಯರ ಸಭೆಯಲ್ಲಿ ಶೃಂಗಾರಕವಿ ಎಂಬ ಬಿರು ದನ್ನು ಪಡೆದಂತೆ ತಿಳಿಯುತ್ತದೆ. ಭಾರತ, ರಸರತ್ನಾಕರ, ಶಾರದಾವಿಲಾಸ ಮುಂ ತಾದ ಗ್ರಂಥಗಳನ್ನು ರಚಿಸಿದ ಸಾಳ್ವನು (ಸು. ೧೫೬೦) ತೌಳವಹೈ ವಕೊಂಕಣದೇಶಾಧಿ ನಾಥನಾದ ಸಾಳ್ವಮಲ್ಲನ ಆಸ್ಥಾನಕವಿಯಾಗಿದ್ದನು. ಬಾಹುಬಲಿ (ಸು. ೧೫೬೦) ಕೆಲ ವನೆಸಿಂಹಾಸನದ ಅರಿರಾಯರಗಂಡರದಾವಣಿ ಭೈರವೇ೦ದ್ರನ ಆಜ್ಞಾನುಸಾರವಾಗಿ ನಾಗಕುಮಾರಚರಿತೆಯನ್ನು ಒರೆದನು, ಅರಿರಾಯರಗ೦ಡರದಾವಣಿ ಭೈರವನೃಸನ ಆಜ್ಞೆಯಿಂದ ಚಂದ್ರಮನು ೧೬೪೬ ರಲ್ಲಿ ಕಾರ್ಕಳದ ಗೊಮ್ಮಟೇಶ್ವರಚರಿತೆಯನ್ನು ರಚಿಸಿದನು ಗೇರುಸೊಪ್ಪೆಯ ದೊರೆ ಭೈರವರಾಯನ ಆಳಿಕೆಯಲ್ಲಿ ಆದಿಯಪ್ಪನು (ಸು. ೧೬೫೦) ಧನ್ಯಕುಮಾರಚರಿತೆಯನ್ನು ಬರೆದನು. ಅಹಿಂಸಾಚರಿತೆಯನ್ನು ೧೭೪೮ ರಲ್ಲಿ ರಚಿಸಿದ ಪಾಯಣ್ಣನು ಸಂಗೀತಪುರದರಸ ಸಂಗನರಾಯಪುತ್ರನ ಆಶ್ರಿತನಾಗಿದ್ದನು. ರಾಮಚಂದ್ರಚರಿತ್ರದ ಪೂರ್ವಭಾಗವನ್ನು ಬರೆದ ಚಂದ್ರಶೇಖರನು ತುಳುದೇಶದ ಲಕ್ಷ್ಮಣಬಂಗರಾಜನ ಆಸ್ಥಾನಕವಿ, ತೌಳವದೇಶದ ಮೂಲಿಕೆಯ ರಾಜನಾದ ಚೆನ್ನರಾಯನಿಂದ ಪೋಷಿತನಾಗಿ ಪದ್ಮನಾಭನು ರಾಮಚಂದ್ರ ಚರಿತ್ರದ ಉತ್ತರಭಾಗವನ್ನು ೧೭೫೦ ರಲ್ಲಿ ರಚಿಸಿದನು. ಕೊಡಗು ಅರಸರು-ವೀರರಾಜೇಂದ್ರನು ೧೭೯೬ ರಲ್ಲಿ ರಾಜೇಂದ್ರನಾಮೆ ಯನ್ನು ಬರೆಯಿಸಿದನು. - ಚೌಟರು--ಚೆನ್ನನಾಂಬೆಯ ಆಳಿಕೆಯಲ್ಲಿ ತಿರುಮಲಸಾಮಂತನ ಕೋಶಾ ಧ್ಯಕ್ಷ ಪದ್ಮನಾಭನು (ಸು. ೧೬೮೦) ಸದ್ಮಾವತಿಚರಿತೆಯನ್ನೂ, ಅಬ್ಬಕ್ಕದೇವಿಯ ಆಳಿಕೆಯಲ್ಲಿ ಪಟ್ಟಾಭಿರಾಮನು (ಸು. ೧೭೨) ರತ್ನ ಶೇಖರಚರಿತೆಯನ್ನೂ, ಚಂದ್ರ ಶೇಖರ ಚಿಕ್ಕರಾಯನ ರಾಣಿವಾಸದ ಚೆನ್ನಮ್ಮದೇವಿಯ ಆಜ್ಞಾನುಸಾರವಾಗಿ ಸುರಾ ಲನು ೧೭೬೧ ರಲ್ಲಿ ಪದ್ಮಾವತಿಚರಿತೆಯನ್ನೂ ರಚಿಸಿದಂತೆ ತಿಳಿಯುತ್ತದೆ. ವಿಜಯನಗರದ ಅರಸರು-ಕನ್ನಡಕ್ಕೆ ಈ ದೊರೆಗಳ ಪ್ರೋತ್ಸಾಹವು ಕಡಮೆ ಎಂದು ಕೆಲವರಿಗೆ ಭಾವನೆಯಿರುವಂತೆ ತೋರುತ್ತದೆ. ಈ ಭಾವನೆಗೆ ಎಷ್ಟರ ಮಟ್ಟಿಗೆ ಆಧಾರವಿದೆ ಎಂಬುದನ್ನು ಕೆಳಗಣ ವಿಷಯಗಳು ವ್ಯಕ್ತಪಡಿಸದೆ ಇರಲಾರವು. ವಿಜಯನಗರದ ಸಂಸ್ಥಾನವ್ರ ಸ್ಥಾಪಿತವಾದಂದಿನಿಂದ ಕೊನೆಯವರೆಗೆ ಆ ವ೦ಶದ ದೊರೆಗಳ ಪ್ರೋತ್ಸಾಹವು ಕನ್ನಡಕ್ಕೆ ಲಭಿಸಿದೆ. ೧ ನೆಯ ಹರಿಹರನ (೧೩೩೬-೧೩೨9) ಆಳಿಕೆಯಲ್ಲಿ ಮುಗುಳಿಯಪುರದ ಅಧಿಪನಾದ ೧ ನೆಯ ಮಂಗರಾಜನು ನಿಷಚಿಕಿತಾ ೧೩೭