ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷತ್ಪತ್ರಿಕೆ | ಅಧ್ಯಕ್ಷರ ಭಾಷಣ 1 ಅಕ್ಟೋಬರ್ ೧೯೧೮. ರೂಪವಾದ ಖಗೇಂದ್ರಮಣಿದರ್ಪಣವನ್ನು ರಚಿಸಿದನು, ಗ್ರಂಥಾಂತ್ಯದಲ್ಲಿ “ ಧರೆಗನುರಾ ಗಮ: ಹರಿಹರಕ್ಷಿತಿಪಂ ಕುಡುತಿರ್ಪನೊಿಯಿಂ” ಎಂದು ಹೇಳಿದ್ದಾನೆ. ಧರ್ಮ ನಾಥಪುರಾಣವನ್ನು ಬರೆದ ಮಧುರನು ೨ ನೆಯ ಹರಿಹರನ (೧೩೭೭-೧೪೦೪) ಆಸ್ಥಾನಕವಿಯಾಗಿದ್ದನು. ೧ ನೆಯು ಬುಕ್ಕನ (೧೨- ೧೩೭೭) ಮಗನಾದ ಕಂಪ ರಾಜನ ಪುತ್ರ ದೇಸರಾಜನು ಸೊಬಗಿನಸೋನೆ, ಅನುರುಕ ಎಂಬ ಗ್ರಂಥಗಳನ್ನು ಬರೆದಿದ್ದಾನೆ. ೨ ನೆಯ ದೇವರಾಯನ (೧೪೧೯-೧೪೪೬) ಆಳಿಕೆಯಲ್ಲಿ ವೀರಶೈವಕವಿ ಗಳಿಗೆ ವಿಶೇಷ ಪ್ರೋತ್ಸಾಹವುಂಟಾಗಿ ಅನೇಕ ಗ್ರಂಥಗಳು ಹುಟ್ಟಿದವು. ಈ ರಾಜನ ಮಂತ್ರಿಗಳಲ್ಲಿ ಲಕ್ಕಣ್ಣ ದಂಡೇಶನು ಶಿವತತ್ವ ಚಿಂತಾಮಣಿಯನ್ನೂ, ಜಕ್ಕಣಾರನು ನೂರೊಂಮಸ್ವಲವನ್ನೂ ಬರೆದಿದ್ದಾರೆ. ಇವನ ಮಹಾಪ್ರಧಾನನಾದ ಗುರುರಾಜನ ಪ್ರೇರಣೆಯಿಂದ ಚಂದ್ರಕವಿ ವಿರೂಪಾಕ್ಷಾಸ್ನಾನ ಮೊದಲಾದ ಗ್ರಂಥಗಳನ್ನು ರಚಿಸಿ ದನು. ಅಲ್ಲದೆ ಈ ದೊರೆಯ ಪ್ರೋತ್ಸಾಹದಿಂದ ಚಾಮರಸನು ಪ್ರಭುಲಿಂಗಲೀಲೆ ಯನ್ನೂ ಮಗ್ಗೆ ಯಮಾಯಿದೇವನು ಶತಕತ್ರಯವನ್ನೂ ಗುರುಬಸವನು ಶಿವಯೋ ಗಾ೦ಗಭೂಷಣವೇ ಮುಂತಾದ ಸಪ್ತಕಾವ್ಯಗಳನ್ನೂ ಬತ್ತಲೇಶ್ವರನು ರಾಮಾಯಣ ವನ್ನೂ ರಚಿಸಿದರು. ಕುಮಾರವ್ಯಾಸನೂ ಇದೇ ರಾಜನ ಆಳಿಕೆಯಲ್ಲಿ ಭಾರತವನ್ನು ಬರೆದಂತೆ ತೋರುತ್ತದೆ. ದೇವರಾಯನ ಮಗ ಮಲ್ಲಿ ಕಾರ್ಜುನನ (೧೪೪೬-೧೪೬೭) ಆಳಿಕೆಯಲ್ಲಿ ಕಲ್ಲರಸನು ಜನವಗ್ರವನ್ನು ಬರೆದಿದ್ದಾನೆ. ಷಟ್ಟಲಜ್ಞಾನಸಾರಾಮೃತ ವನ್ನು ರಚಿಸಿದ ತೋಂಟದ ಸಿದ್ದಲಿಂಗನು ವಿರೂಪಾಕ್ಷನ (೧೪೬೭...-೧೪೭೮) ಆಳಿಕೆ ಯಲ್ಲಿ ಬಾಳಿದನು. ಕವಿಲಿಂಗನಪದ ಎಂಬ ಗ್ರಂಥವನ್ನು ರಚಿಸಿದ ಕವಿಲಿಂಗನು ಸಾಳುವ ನರಸಿಂಗರಾಯನ (೧೪೮೬-೧೪೯೩) ಆಸ್ವಾನಕವಿಯಾಗಿದ್ದನು. ಶ್ರೀಪಾದ ರಾಯರೆಂಬ ಮಾಧ್ವಗುರು ಈ ರಾಜನಿಂದ ಸನ್ಮಾನಿತರಾಗಿದ್ದಂತೆ... ಶ್ರೀಮದ್ವೀರಸಿ೦ಗರಾಜನೃಸತೇರ್ಭೂವೇನಯ ತಾವ್ಯ ಥಾ । ದೂರೀಕೃತ್ಯ ತದರ್ಪಿತೋಜ್ವಲನುಹಾಸಿ೦ಹಾಸ ನೇ ಸ೦ಸ್ಪಿ ತಃ || ಎಂಬ ಶ್ರೀಪಾದರಾಯಾಷ್ಟಕದ ಶ್ಲೋಕದಿಂದ ತಿಳಿಯುತ್ತದೆ. ಕೃಷ್ಣರಾಯನ (೧೫೦೯ -೧೨೨೯) ಆಜ್ಞಾನುಸಾರವಾಗಿ ತಿಮ್ಮಣ್ಣ ಕವಿ ಭಾರತದ ಉತ್ತರಭಾಗವನ್ನು ಒರೆದನು. ವ್ಯಾಸರಾಯರೆಂಬ ಮಾಧ್ಯಗುರು ಈ ದೊರೆಯಿಂದ ಮನ್ನಣೆಯನ್ನು ಹೊಂದಿದ೦ತೆ ತಿಳಿಯುತ್ತದೆ. ಚಾಟುವಿಟ್ಟಲನಾಥ ಎಂಬ ಬಿರುದುಳ್ಳ ಸದಾನಂದ ಯೋಗಿ ಅಚ್ಯುತರಾಯನ ಆಳಿಕೆಯಲ್ಲಿ ಭಾಗವತವನ್ನು ಬರೆದಂತೆ ತೋರುತ್ತದೆ. ಶಬ್ದಾನುಶಾಸನವನ್ನು ಬರೆದ ಭಟ್ಟಾಕಳಂಕನ ಗುರುವಾದ ಭಟ್ಟಾಕಳಂಕನು ಶ್ರೀರಂಗ ರಾಯನ (೧೭೨ ೧೨೮೪) ಆಸ್ಥಾನದಲ್ಲಿ ಆತನ ಪ್ರೇರಣೆಯಿಂದ ಸಾರತ್ರಯವನ್ನೂ ಅಲಂಕಾರತ್ರಯವನ್ನೂ ಓದಿ ಕೀರ್ತಿನಡೆದಂತೆ. ಶ್ರೀರ೦ಗರಾಜನೃಪತಿ 1 ಪ್ರೇರಣೆಯಿ೦ ವಿಜಯನುನಿಪನುಪದೇಶನದಿ೦। ಸಾ ರ ತನುವನ೪೦ | ಕಾ ರಿ ತಯನುನ ಜಸವಂ ಸದc 11 ೧೩೮