ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ಾಳಯುಳ್ಯ ಸC ಆಶ್ವಯುಜ | ಅಧ್ಯಕ್ಷರ ಭಾಷಣ | ಕರ್ಣಾಟಕ ಸಾಹಿತ್ಯ ಎಂಬ ಬಿಳಿಗಿ ತಾಲ್ಲೂಕಿನಲ್ಲಿರುವ ಒಂದು ಶಾಸನದ ಪದ್ಯದಿಂದ ತಿಳಿಯುತ್ತದೆ. ಅದೇ ಶಾಸನದಿಂದ ಶಬ್ದಾನುಶಾಸನಕಾರನಾದ ಭಟ್ಟಾಕಳಂಕನು ಪೆನಗೊಂಡೆ ವೆಂಕಟ ಪತಿರಾಯನ (೧೫೮೬... ೧೬೧೫) ಆಳಿಕೆಯಲ್ಲಿ ಬಾಳಿದ೦ತೆ ತಿಳಿಯುತ್ತದೆ. - ಸಲಕರಾಜನ ಮಗನಾದ ತಿರುಮಲರಾಜನು ಕಾಲಜ್ಞಾನವನ್ನು ಬರೆದ ಎಮ್ಮೆ ಬಸವನೆಂಬ ವೀರಶೈವಗುರುವಿಗೆ ಕೊಮರಕೆರೆ ಎಂಬ ಗ್ರಾಮವನ್ನು ೧೪೩ ರಲ್ಲಿ ಕೊಟ್ಟಂತೆ ಒಂದು ಶಾಸನದಿಂದ ತಿಳಿಯುತ್ತದೆ. ಈ ಗುರುವನ್ನು ಸ್ತುತಿಸುವ ಕೆಳ ಗಣ ಪದ್ಯದಿಂದ ಹಂಪೆಯ ಬಳಿ ಬೆಟ್ಟದ ಮೇಲಿರುವ ಜಂಬುನಾಥನು ಇನಸಿಗೆ ಉಪಾಸ್ಯದೇವತೆಯೆಂದು ತಿಳಿವುದರಿಂದ ಇವನ ಸ್ಥಳವು ಹಂಸೆಯೇ ಆಗಿರ ಒಹುದು ಜಾಂಬೂನದಾದ್ರಿ ಕೋದಂಡಜಂಬುನಾಥಪ್ರಭಾವತ: 1 ಪ್ರಾಪ್ತ ಕಾಲ ತ್ರಯೋದಂತ ಪರಿಜ್ಞಾನಾಯ ಧೀಮತೇ : 3. ಮೈಸೂರರಸರು- ಇವರು ಕನ್ನಡನುಡಿಗೆ ಪ್ರೋತ್ಸಾಹವನ್ನು ಮಾಡಿರುವ ಸಂಗತಿ ಪ್ರಸಿದ್ದವಾಗಿಯೇ ಇದೆ. ರಾಜನೃಪನ (೧೭೮-೧೬೧೬) ಪ್ರಧಾನಿಯಾದ ತಿರುಮಲಾರ್ಯನು ಕರ್ಣವೃತ್ತಾಂತ ಕಥೆಯನ್ನು ಬರೆದಿದ್ದಾನೆ. ಈ ಕವಿಯ ದೌಹಿತ್ರನೇ ಚಿಕ್ಕದೇವರಾಯನಲ್ಲಿ ಮಂತ್ರಿಯಾಗಿದ್ದ ತಿರುಮಲಾರ್ಯನು, ಚಾಮರಾಜನು (೧೬೧೭-೧೬೩೭) ರಾಮಾಯಣ, ಬ್ರಷ್ಟೋತ್ತರಖಂಡ ಇವುಗಳನ್ನು ರಚಿಸಿದನು. ಇವನ ಪ್ರೋತ್ಸಾಹದಿಂದ ರಾಮಚಂದ್ರನು ಅಶ್ವಶಾಸ್ತ್ರವನ್ನೂ, ಸದ್ಯಣಪಂಡಿತನು ಹಯಸಾರಸಮುಚ್ಚಯವನ್ನೂ ಬರೆದರು. ಭಾರತಿನಂಜ, ಗೋವಿಂದ ವೈದ್ಯ ಇವರು ಕಂಠೀರವನರಸರಾಜನ (೧೬೩೮-೧೬೫೯) ಪೋಷಣೆಯಲ್ಲಿ ಕಂಠೀರವ ನರಸರಾಜ ವಿಜಯವನ್ನು ಬರೆದರು. ಭಾಸ್ಕರನು ಇದೇ ರಾಜನ ಆಶ್ರಿತನಾಗಿ ಬೇತಾರಗಣಿತ ವನ್ನು ರಚಿಸಿದನು. ಚಿಕ್ಕದೇವರಾಜನು (೧೬೭೨, ೧೬೦೪) ಸ್ವತಃ ಕವಿಯಾಗಿಯೂ, ಕವಿಪೋಷಕನಾಗಿಯೂ ಇದ್ದನು. ಇವನು ಚಿಕ್ಕದೇವರಾಜ ಬಿನ್ನಪ, ಗೀತಗೋ ಸಾಲ ಮೊದಲಾದ ಗ್ರಂಥಗಳನ್ನು ಮಾಡಿದನು. ಇವನ ಆಶ್ರಿತರಲ್ಲಿ ತಿರುವು ಲಾರ್ಯನು ಅಪ್ರತಿಮವೀರಚರಿತ ಮೊದಲಾದ ಗ್ರಂಥಗಳನ್ನೂ, ಚಿಕ್ಕುಪಾಧ್ಯಾಯನು ವಿಷ್ಣು ಪುರಾಣ, ಕಮಲಾಚಲಮಾಹಾತ್ಮ ಮುಂತಾದುವನ್ನೂ, ತಿಮ್ಮಕಏ ಯಾದವ ಗಿರಿಮಾಹಾತ್ಮ ಮೊದಲಾದ ಗ್ರಂಥಗಳನ್ನೂ, ಮಲ್ಲಿಕಾರ್ಜುನನು ಶ್ರೀರಂಗ ಮಾಹಾತ್ಮವನ್ನೂ, ಸಿಂಗರಾರ್ಯನು ಮಿತ್ರವಿಂದಾಗೋವಿಂದನೆ೦ಬ ನಾಟಕವನ್ನೂ, ವೇಣುಗೋಪಾಲವರಪ್ರಸಾದನು ಚಿಕ್ಕದೇವರಾಜವಂಶಾವಳಿಯನ್ನೂ, ಚಿದಾನಂದ ಕವಿ ಮುನಿವಂಶಾಭ್ಯುದಯವನ್ನೂ, ಮಲ್ಲರಸನು ದಶಾವತಾರಚರಿತೆಯನ್ನೂ, ಹೊನ್ನಮ್ಮನು ಹದಿಬದೆಯ ಧರ್ಮವನ್ನೂ ರಚಿಸಿದರು. ಈ ಕವಿಗಳಲ್ಲಿ ಚಿಕ್ಕು ಸಾ ಧ್ಯಾಯನು ಸುಮಾರು ೩೦ ಗ್ರಂಥಗಳಿಗೆ ಮೇಲೆ ಬರೆದಿದಾ ನೆ. ೧ ನೆಯ ಕೃಷ್ಣ ರಾಜನ (೧೭೧೩-೧೭೩೧) ಆತ್ರಿತನಾಗಿ ಬಾಲವೈದ್ಯದ ಚೆಲುವನು ಕನ್ನಡಲೀಲಾವತಿ. ೧೩೯