ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ರಿಕೆ1 ಅಧ್ಯಕ್ಷರ ಭಾಷಣ. (ಅಕ್ಟೋಬರ್ ೧೯೧೮. ಕನ್ನಡಿಗರ ಸಂತತಿಯವರೋ ಅಲ್ಲವೋ ಎಂದು ಸಂದೇಹಪಡಬಹುದಾದಷ್ಟು ಹೀನ ಸ್ಥಿತಿಗೆ ಬಂದಿದೆ. ಈ ಹೀನಸ್ಥಿತಿಯನ್ನು ನೋಡಿ ಯಾವ ನಿಜವಾದ ಕನ್ನಡಿಗನ ಹೃದ ಯವು ತಾನೇ ಶೋಕರಸಪೂರಿತವಾಗದು ? ಯಾವ ದೇಶಬಾಂಧವನಾದ ಕನ್ನಡಿಗನ ಮುಖವು ತಾನೇ ಕಂದದು ? ಯಾವ ಭಾಷಾಭಿಮಾನಿಯಾದ ಕನ್ನಡಿಗನ ಕಣ್ಣು ತಾನೇ ನೀರಿನಿಂದ ತುಂಬದು ? ಈ ಹೀನಸ್ಥಿತಿಯನ್ನು ನಿವಾರಣ ಮಾಡಲಿಕ್ಕೆ ಬದ್ಧ ಕಂಕಣರಾಗಿ ಸರ್ವ ಪ್ರಯತ್ನವನ್ನೂ ಮಾಡಬೇಕಾದುದು ನಮ್ಮ ಕರ್ತವ್ಯವಾಗಿದೆ. ಈ ಹೀನಸ್ಥಿತಿಗೆ ಹಲವು ಕಾರಣಗಳುಂಟು. ಅವುಗಳಲ್ಲಿ ಕೆಲವನ್ನು ತಿಳಿಸುತ್ತೇನೆ, ಕನ್ನಡಿಗರಿಗೆ ತಮ್ಮ ಭಾಷೆಯಲ್ಲಿರಬೇಕಾದ ಆದರಾತಿಶಯಕ್ಕೆ ಪ್ರತಿಯಾಗಿ ಅಸಡ್ಡೆ ನೆಲೆಗೊಂಡಿರುವುದು ಪ್ರಬಲಕಾರಣವೆಂದು ಹೇಳಬಹುದು. ಅನೇಕರು ಕನ್ನಡಭಾಷೆಯಲ್ಲಿ ಮಾತನಾಡು ವುದೂ ಪತ್ರಗಳನ್ನು ಬರೆವುದೂ ಅಪಮಾನಕರವೆಂದು ಭಾವಿಸಿದ್ದಾರೆ. ಇದಕ್ಕಿಂತಲೂ ಶೋಚನೀಯವಾದ ವಿಷಯವುಂಟೇ ? ಈಗಿನ ಶಿಕ್ಷಣಪದ್ಧತಿಯೂ ಈ ಅಸಡ್ಡೆಗೆ ಸಹ ಕಾರಿಯಾಗಿದೆ. ಪಾಠಶಾಲೆಗಳಲ್ಲಿ ಎಲ್ಲಾ ವಿಷಯಗಳನ್ನೂ ಇಂಗ್ಲಿಷ್ ಭಾಷೆಯಲ್ಲಿಯೇ ಕಲಿಸುತ್ತಾರೆ, ಬ್ರಿಟಿಷ್ ಕರ್ಣಾಟಕದ ಪ್ರಾಂತಗಳಲ್ಲಿ ಪ್ರಾಥಮಿಕ ಶಿಕ್ಷಣವು ಕನ್ನಡದಲ್ಲಿ ದೊರೆವುದಿಲ್ಲ. ಭಾಷೆಗೂ ಸಾಹಿತ್ಯಕ್ಕೂ ಪೂರ್ವದಂತೆ ರಾಜರ ಪ್ರೋತ್ಸಾಹವಿಲ್ಲ. ನಮ್ಮ ಲ್ಲಿಯೂ ಇಂಗ್ಲಿಷ್ ಬಲ್ಲವರೇ ಬುದ್ಧಿವಂತರು, ದೇಶಭಾಷಾ ಪಂಡಿತರು ಅಪ್ರ ಯೋಜಕರು ಎಂಬ ನಿಷಾರಣವಾದ ಭಾವನೆ ಹುಟ್ಟಿದೆ. ಸರಕಾರದ ಕಾಗದಪತ್ರಗಳೆಲ್ಲಾ ಇಂಗ್ಲಿಷ್ ಭಾಷೆಯಲ್ಲಿಯೇ ಇವೆ. ಮುಂಬಯಿ, ಮದರಾಸು, ಕೊಡಗು ಎಂಬ ಬ್ರಿಟಿಷ್ ಕರ್ಣಾಟಕದ ದೇಶವಿಭಾಗವು ಭಾಷೆಯ ಅನವಸ್ಥೆಗೂ ಭಿನ್ನ ರೂಪತೆಗೂ ಕಾರಣವಾಗಿದೆ. ಮೇಲೆ ಹೇಳಿದ ಕಾರಣಗಳಲ್ಲಿ ಕೆಲವು ಪ್ರಕೃತತಿಯಲ್ಲಿ ಪರಿಹಾರ: ವೆಂದು ತೋರಿದರೂ ನಮ್ಮಲ್ಲಿ ನೆಲೆಗೊಂಡಿರುವ ಅಸಡ್ಡೆಯೆಂಬ ಸಿಶಾಚವನ್ನು ದೇಶಾಭಿಮಾನ ಭಾಷಾಭಿಮಾನಗಳೆಂಬ ಮಂತ್ರಗಳ ಬಲದಿಂದ ಉಚ್ಚಾಟನ ಮಾಡಿ ದರೆ ಭಾಷೋನ್ನತಿಯ ಕೆಲಸವು ಕೂಡಿದವುಟ್ಟಿಗೆ ಫಲಕಾರಿಯಾಗಬಹುದು. ಕನ್ನಡ ನುಡಿಯ ಏಳಿಗೆಗೆ ಉಪಾಯಗಳು. ಪೂರ್ವದಂತೆ ಉದ್ದಾರಕಪಿಗಳು ಹುಟ್ಟಬೇಕೆಂದಾಗಲಿ, ಪೂರ್ವದಂತೆ ರಾಜರೂ ಮಂಡಲಿಕರೂ ಅಧಿಕಾರಿಗಳೂ ಪ್ರೋತ್ಸಾಹಕರಾಗಬೇಕೆಂದಾಗಲಿ ಹಾರೈಸುವುದರಿಂದ ಫಲವಿಲ್ಲ, ಪ್ರಕೃತಕಾಲಕ್ಕೆ ಅನುಗುಣವಾಗಿ ಕನ್ನಡಿಗರೆಲ್ಲರೂ ಅಸಡ್ಡೆಯನ್ನು ತೊಲ ಗಿಸಿ ಭಾಷಾಸೇವೆಯಲ್ಲಿ ನಿರತರಾಗಬೇಕು. ಸಂಡಿತರನ್ನು ಗೌರವಿಸಬೇಕು. ಕನ್ನಡ ನುಡಿಗಾಗಿ ಶ್ರಮಪಡುವವರಿಗೆ ಮರ್ಯಾದೆಯನ್ನು ಮಾಡಬೇಕು. ಸಾಹಿತ್ಯವನ್ನು ವೃದ್ಧಿಗೊಳಿಸುವದಕ್ಕಾಗಿ ಶಾಸ್ತ್ರೀಯಗ್ರಂಥಗಳೇ ಮೊದಲಾದುವನ್ನು ಅನ್ಯ ಭಾಷೆಗಳಿಂದ ಪರಿವರ್ತಿಸಬೇಕು. ಕೋಶಗಳನ್ನೂ ಸಾಂಕೇತಿಕಶ ಬ ಗಳ ಪಟ್ಟಿಯನ್ನೂ ಏರ್ಪಡಿಸ ಬೇಕು, ಗ್ರಂಥಸ್ಸ ಭಾಷೆಗೆ ಏಕರೂಪತೆಯನ್ನು ಉಂಟುಮಾಡಬೇಕು, ವಿದ್ಯಾವಂತನಾದ ಪ್ರತಿಯೊಬ್ಬ ಕನ್ನಡಿಗನೂ ತನಗಿಂತ ವಿದ್ಯೆಯಲ್ಲಿ ಕಡಮೆಯಾದ ಕನ್ನಡಿಗರ ಉಪ ಯೋಗಾರ್ಥವಾಗಿ ಗ್ರಂಥನಿರ್ಮಾಣವನ್ನು ಮಾಡುವುದು ತನ್ನ ಕರ್ತವ್ಯವೆಂದು ತಿಳಿಯ ೧೪?