ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತೃತ್ರಿ ಕೆ. ಅಧ್ಯಕ್ಷರ ಭಾಷಣ ಅಕ್ಟೋಬರ್ ೧೯೧೮. ನೆತ್ತಿ ನೆತ್ತಿಯ ಬಡಿದು ಕಡೆ ಯಲಿ | ತುತ್ತನಿಡುವರು ಶಿಶುಗಳಿಗೆ ನೀ। ನತ್ತಿದೆಯಲಾ ತನುವ ಸುಡಬೇಕೆ೦ದ ನರೆದಲೆರ | ನಿರ್ದೋಷವಾಗಿಯೂ ನಿರ್ಗುಣವಾಗಿಯೂ ಇರುವ ವಸ್ತುಗಳು ಪ್ರಪಂಚದ ಇಲ್ಲ. ಆದುದರಿಂದ ಮೇಲಣಪದ್ಯಗಳಲ್ಲಿ ಹೇಳಿರುವಂತೆ ಭಿನ್ನ ಪ್ರಾಂತಗಳ ಕನ್ನಡಿಗರು ನಾನು ಹೆಚ್ಚು ತಾನು ಹೆಚ್ಚು ಎಂದು ಮತ್ಸರದಿಂದ ಹೋರಾಡಿ ಅಲ್ಪ ಸ್ವಲ್ಪವಾದ ವ್ಯತ್ಯಾ ಸಗಳನ್ನು ಹೆಚ್ಚಿಸಿ ಕನ್ನಡನುಡಿಯ ಏಳಿಗೆಗೆ ಕುಂದಕವನ್ನು ಉಂಟುಮಾಡಕೂಡದೆಂ ಬುದು ನನ್ನ ಪ್ರಾರ್ಥನೆ, ಅಲ್ಪ ಸ್ವಲ್ಪವಾದ ಅಭಿಪ್ರಾಯಭೇದಗಳಿದ್ದರೂ ಅವುಗಳನ್ನೆಲ್ಲಾ ಒತ್ತಟ್ಟಿಗಿಟ್ಟು ಎಲ್ಲರೂ ಪರಸ್ಪರಮೈತ್ರಿಯಿಂದಲೂ ಐಕಮತ್ಯದಿಂದಲೂ ಭಾಷಾಸೇವೆ ಯನ್ನು ಉತ್ಸಾಹದೊಡನೆ ಮಾಡಬೇಕಾದುದು ಅತ್ಯಾವಶ್ಯಕ. ಇದೂ ಅಲ್ಲದೆ ಕರ್ಮಕ್ಕೇವಾಧಿಕಾರಸ್ತೇ ಮಾ ಫಲೇಷು ಕದಾಚನ ಎಂದು ಕೃಷ್ಣ ಪರಮಾತ್ಮನು ಅರ್ಜುನನಿಗೆ ಮಾಡಿದ ಉಪದೇಶಕ್ಕೆ ಅನುಸಾರವಾಗಿ ಫಲಾಭಿಸಂಧಿಯಿಲ್ಲದೆ ಕರ್ತವ್ಯಬುದ್ಧಿಯಿಂದ ಕನ್ನಡಮಾತೆಯ ಮಕ್ಕಳಾದ ನಾವೆಲ್ಲರೂ ಏಕೀಭವಿಸಿ ಪ್ರಯತ್ನ ಮಾಡಿದರೆ ಕನ್ನಡ ನಾಡಿನ ಮತ್ತು ಕನ್ನಡ ನುಡಿಯ ಉನ್ನತಿ ಕ್ಷಿಪ್ರದಲ್ಲಿಯೇ ಲಭಿಸುವುದರಲ್ಲಿ ಯಾವ ಸಂದೇಹವೂ ಇಲ್ಲ. ಅನಂತರ `ವಿಷಯ ನಿಯಾಮಕ ಸಭೆ' (Subjects Committee) ನಿರ್ಮಾಣವಾಯಿತು. ರಾತ್ರಿ ೭ ಗಂಟೆಗೆ ಕರ್ಣಾಟಕ ಗತವೈಭವಪ್ರದರ್ಶಕ ಚಿತ್ರ ಗಳನ್ನು 'ಮ್ಯಾಜಿಕ್ ಲ್ಯಾಂಟರ್ರ' ಮೂಲಕ ತೋರಿಸಿ ಉಪನ್ಯಾಸವನ್ನು ಮಾಡಿದರು. ಈ ಕಾರ್ಯವನ್ನು ಬಹುಶ್ರಮದಿಂದ ನಿರ್ವಹಿಸಿದ ಶ್ರೀಯುತ ವಿ. ಬಿ. ಆಲೂರು, ಬಿ.ಎ., ಎಲ್‌ಎಲ್.ಬಿ ಯವರಿಗೆ ಸಾಮಾಜಿಕರೆಲ್ಲರೂ ಕೃತಜ್ಞರಾಗಿರಬೇಕಾಗಿದೆ. ಇಲ್ಲಿಗೆ ಮೊದಲನೆಯ ದಿನದ ಕೆಲಸಗಳೆಲ್ಲಾ ಪೂರೈಸಿದುವು. ಎರಡನೆಯ ದಿನ. ಎರಡನೆಯ ದಿನ ಬೆಳಗ್ಗೆ ಲಾವಣಿಗಳನ್ನೂ ಪದಗಳನ್ನೂ ಹಾಡಿಸಿದಮೇಲೆ ವಿಷಯನಿರ್ಧಾರಕಮಂಡಲಿಯು ಸಭೆಸೇರಿ ಸಮ್ಮೇಳನದಲ್ಲಿ ಚರ್ಚಿಸಿ ತೀರ್ಮಾನ ಮಾಡುವುದಕ್ಕೆ ಯೋಗ್ಯವಾದ ವಿಷಯಗಳನ್ನು ಕುರಿತು ನಿರ್ಧರಮಾಡಿತು. ಮಧ್ಯಾಹ್ನ ಸುಮಾರು ೨ ಗಂಟೆಗೆ ಸಮ್ಮೇಳನವು ಪ್ರಾರಂಭವಾಯಿತು. * ಪ್ರಚಲಿತವಾದ ಕನ್ನಡ ಭಾಷೆಗೆ ಅನುಕೂಲವಾದ ವ್ಯಾಕರಣರಚನೆ” ಎಂಬ ೧೪೬