ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸc1 ಆಶ್ವಯುಜ | ಉಪಸಂಹಾರಭಾಷಣ. | ಕರ್ನಾಟಕ ಸಾಹಿತ್ಯ ... .. ... ..... .. ... ... ... ಭೇದವನ್ನು ಹೊಂದಿದ ಶಬ್ದಗಳನ್ನು ಸಂಸ್ಕರಿಸಿ ಅವುಗಳಿಗೆ ನಿಷ್ಕರ್ಷೆಯಾದ ಒಂದೇ ರೂಪವಿರುವಂತೆಯೂ ಅವುಗಳ ಅರ್ಥವು ಶಾಸ್ತ್ರವತ್ತಾಗಿ ಇರುವಂತೆಯೂ ನಿಶ್ಚಯಿಸಿ ದೊಡ್ಡದೊಂದು ಕೋಶವನ್ನು ಸಿದ್ದಪಡಿಸುವುದು, (೧೦) ಮರಾಟಿ, ಗುಜರಾತಿ, ಬಂಗಾಳಿ, ತೆಲುಗು ಮೊದಲಾದ ಭಾಷೆಯವರ ಸಮ್ಮೇಳನದವರಿಗೂ, ಕರ್ಣಾಟಕ ಸಾಹಿತ್ಯ ಸಮ್ಮೇಳನದವರಿಗೂ, ಸಾಮಾನ್ಯವಾಗಿರುವ ವಿಷಯಗಳಲ್ಲಿ ಪರಸ್ಪರ ಸಹಾಯವಾಗುವಂತೆ ಏರ್ಪಾಡು ಮಾಡುವುದು. ಅಧ್ಯಕ್ಷರ ಉಪಸಂಹಾರಭಾಷಣ. ಕಡೆಯಲ್ಲಿ ಅಧ್ಯಕ್ಷರು ಸಭಾಸಮಾಪ್ತಿ ಮಾಡುವ ಕಾಲಕ್ಕೆ ಬಹು ಸ್ವಾರಸ್ಯ ವಾದ ಭಾಷಣವನ್ನು ಮಾಡಿದರು. ಅದರ ಸಾರಾಂಶವೇನೆಂದರೆ :- ಮಹಾಶಯರೇ, ತಾವುಗಳು ನನ್ನನ್ನು ಬಹಳ ಆದರದೊಡನೆ ಗೌರವಿಸಿದು ದಕ್ಕಾಗಿ ನನ್ನ ಕೃತಜ್ಞತೆಯನ್ನು ಮಾತುಗಳಿಂದ ತಿಳಿಸಲು ಅಶಕ್ತನಾಗಿದ್ದೇನೆ. ತಮ್ಮಿಂದ ಆಮಂತ್ರಣವು ಬಂದಾಗ ನನಗೆ ಗೃಹಕೃತ್ಯದ ತೊಂದರೆ ಒಂದುಕಡೆ, ಮೈಯಲ್ಲಿ ಅಸ್ವಸ್ಥತೆ ಒಂದುಕಡೆ-ಹೀಗೆ ಅನಿವಾರ್ಯಗಳಿದ್ದರೂ ಕನ್ನಡ ನುಡಿಯ ಏಳಿಗೆಗಾಗಿ ತಮ್ಮೊಡನೆ ಸೇರಿ ಸ್ವಲ್ಪ ಮಟ್ಟಿಗಾದರೂ ಸೇವೆ ಮಾಡಬೇಕಾದುದು ಕರ್ತವ್ಯ ವೆಂದು ತಮ್ಮ ಆಮಂತ್ರಣವನ್ನು ಅಂಗೀಕರಿಸಿ ಇಲ್ಲಿಗೆ ಬಂದೆನು. ಆದರೆ ನನ್ನ ದುರ್ದೈವದಿಂದ ಇಲ್ಲಿಗೆ ಬರುವಾಗಲೇ ಕಿವಿಯಲ್ಲಿ ಒಂದು ಹುಣ್ಣು ಎದ್ದು ಬಾಧೆ ಯುಂಟಾದುದಲ್ಲದೆ ಸ್ವಲ್ಪ ಕಿವುಡೂ ಉಂಟಾಗಿದ್ದಿತು. " ಕಿವುಡರು ಎರಡುಸಲ ನಗು ವರು”-ಎಂಬ ನಾಣ್ಣುಡಿಯನ್ನು ತಾವು ಕೇಳಿರಬಹುದು, ಎಲ್ಲರೂ ನಗುವುದನ್ನು ನೋಡಿ ತಾವೂ ನಗದೆ ಇದ್ದರೆ ಜನರು ಏನು ತಿಳಿದುಕೊಳ್ಳುವರೋ ಎಂದು ವಿಷಯ ಜ್ಞಾನವಿಲ್ಲದೆ ನಗುವುದು ಒಂದನೆಯ ನಗೆ. ವಿಷಯವು ಇಂಥದೆಂದು ಇತರರಿಂದ ತಿಳಿದಮೇಲೆ ನಗುವುದು ಎರಡನೆಯ ನಗೆ, ಇಂತಹ ನ್ಯೂನತೆಯಿಂದ, ನನಗೆ ತಾವು ವಹಿಸಿದ ಕಾರ್ಯದಲ್ಲಿ ಏನು ಲೋಪವುಂಟಾಗುವುದೋ ಎ೦ಮ ಭಯಪಡು ತಿದ್ದೆನು, ಆದರೆ ಭಗವದನುಗ್ರಹದಿಂದಲೂ, ತಮ್ಮಗಳ ಸಹಾಯ ಬಲದಿಂದಲೂ ಕಾರ್ಯವು ಸುಲಲಿತವಾಗಿ ನೆರವೇರಿತು. ತನ್ನಗಳ ಸೌಜನ, ಸೌಶೀಲ್ಯ, ಸೌಹಾರ್ದ ಇವುಗಳು ನನ್ನ ಮನಸ್ಸನ್ನು ಸೆರೆಹಿಡಿದಿವೆ. ಇಂತಹ ಗುಣಶಾಲಿಗಳ ಮನಸ್ಸಿಗೆ ನನ್ನ ಗೃಹಕೃತ್ಯದ ತೊಂದರೆಯನ್ನು ನೆಪಮಾಡಿಕೊಂಡು ಬರುವುದಕ್ಕಾಗುವುದಿಲ್ಲ ಎಂದು ತಿಳಿಸಿ ಆಯಾಸವನ್ನುಂಟುಮಾಡಿದುದಕ್ಕಾಗಿ ವ್ಯಥೆಪಡುತ್ತೇನೆ. ತಮ್ಮಗಳ ಸೌಹಾರ್ದ ೧ರ್೨