ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯ ] » ಪರಿಷತ್ಪತ್ರಿಕೆ | ಉಪಸ೦ಹಾರಭಾಷಣ. (ಅಕ್ಟೋಬರ್ ೧೯೧೮. - - - - - " ನನ್ನೂ ಆದರಾತಿಶಯವನ್ನೂ ನೋಡಿದರೆ ಧಾರವಾಡವನ್ನು ಬಿಟ್ಟು ಹೋಗುವುದಕ್ಕೆ ಮನಸ್ಸು ಬರುವಹಾಗಿಲ್ಲ. ಈ ಸಂದರ್ಭದಲ್ಲಿ-ಶ್ರೀರಾಮನನ್ನು ದಂಡಕಾವನದಿಂದ ಅಯೋಧ್ಯೆಗೆ ಕರೆದು ತರಬೇಕೆಂದು ಹೊರಟ ಭರತನ ಸೈನ್ಯದವರು ಮಾರ್ಗದಲ್ಲಿದ್ದ ಭರದ್ವಾಜಾಶ್ರಮದಲ್ಲಿ ದೇವತಾಯೋಗ್ಯವಾದ ಆತಿಥ್ಯವನ್ನು ಹೊಂದಿ, “ ನೈವಾಯೋಧ್ಯಾಂ ಗಮಿಷ್ಯಾಮಃ ನಗ ವಿಷ್ಯಾನು ದ೦ಡ ರ್ಕಾ |” ನಾವು ಅಯೋಧ್ಯೆಗೂ ಹೋಗುವುದಿಲ್ಲ, ದಂಡಕಾರಣ್ಯಕ್ಕೂ ಹೋಗುವು ದಿಲ್ಲ, ಇಲ್ಲಿಯೇ ನಿಲ್ಲುತ್ತೇವೆ ಎಂದು ಹೇಳಿದ ಮಾತು ನೆನಪಿಗೆ ಬರುತ್ತದೆ. - ಆರಂಭಭಾಷಣದಲ್ಲಿ ನಾನು ತಮಗೆ ತಿಳಿಸಿದ ರಾಗಿ ಬತ್ತಗಳ ಸಂವಾದಕ್ಕೆ ಕೆಲವರು ಅರ್ಥಾ೦ತರವನ್ನು ಕಲ್ಪಿಸಿಕೊಂಡಂತೆ ತೋರುತ್ತದೆ. ನನ್ನ ತಾತ್ಪರ್ಯ ವೇನೆಂದರೆ-.ಕನ್ನಡ ನಾಡಿನ ಬೇರೆಬೇರೆ ಭಾಗಗಳಲ್ಲಿರುವವರು ಒಬ್ಬರನ್ನೊಬ್ಬರು ಹೇಳನಮಾಡದೆ ಐಕಮತ್ಯದಿಂದ ಭಾಷಾಸೇವೆಯನ್ನು ಮಾಡಬೇಕೆಂಬುದೇ ಅಲ್ಲದೆ ಕಾರಿಯಾಗಲಾರದು. ಈ ವಿಚಾರದಲ್ಲಿ ಹಿಂದಣ ಒಂದು ಶ್ಲೋಕವು ಜ್ಞಾಪಕಕ್ಕೆ ಬರುತ್ತದೆ: ಏನೆಂದರೆ, ಉಷ್ಟ ಕಾಣಾ೦ ವಿವಾಹೇಷು ಗಾರ್ದಭಾಃ ಖಲು ಗಾಯಕಾಃ | ಪರಸ್ಪರಂ ಪ್ರಶ೦ಸಂತಿ ಅಹೋ ರೂಪಮಹೋ ಧ್ವನಿ | ಒಂಟೆಗಳ ಮದುವೆಯಲ್ಲಿ ಕತ್ತೆಗಳು ಗಾಯಕರಾಗಿ ಬಂದು ಒಂಟೆಗಳ ಸೌಂ ದರ್ಯವನ್ನು ಕೊಂಡಾಡಿದುವು ; ಒಂಟೆಗಳೂ ಕತ್ತೆಗಳ ಮಧುರಧ್ವನಿಯನ್ನು ಕೇಳಿ ತಲೆದೂಗಿದುವು. ಈ ಶ್ಲೋಕದಲ್ಲಿ ಉಕ್ತವಾದ ಹೀನೋಪಮೆಗೆ ದೃಷ್ಟಿಯನ್ನು ಕೊಡದೆ ಅದರ ಭಾವಕ್ಕೆ ಮಾತ್ರ ಗಮನವನ್ನು ಕೊಡಬೇಕೆಂದು ಪ್ರಾರ್ಥಿಸುತ್ತೇನೆ. ಸಮ್ಮೇಳನದಲ್ಲಿ ತೀರ್ಮಾನಿಸಿದ ನಿರ್ಣಯಗಳೆಲ್ಲವೂ ಆವಶ್ಯಕವಾದುವು, ಅವು ಗಳಲ್ಲಿ ಬೃಹಕ್ರೋಶದ ವಿಷಯವಾಗಿ ಮಾಡಿದ ನಿರ್ಣಯವು ಅತ್ಯಾವಶ್ಯಕವೆಂದು ಹೇಳಬಹುದು, ಅನ್ಯದೇಶೀಯರಾದ ಮೆ! ಕಿಟ್ಟೆಲ್ ಮುಂತಾದವರು ಈ ವಿಷಯ ದಲ್ಲಿ ಪಟ್ಟಿರುವ ಶ್ರಮವು ಸ್ತೋತ್ರಾರ್ಹವಾಗಿದೆ. ಅವರಿಗಿಂತ ಹೆಚ್ಚಿನ ಆನುಕೂಲ್ಯ ದುದು ನಮ್ಮ ಕರ್ತವ್ಯವಾಗಿದೆ. ಸರಿಯಾದ ಬೃಹಕ್ರೋಶವಿಲ್ಲದುದರಿಂದ ಉಂಟಾ ಗಿರುವ ಅನರ್ಥಕ್ಕೆ ಒಂದು ಉದಾಹರಣವನ್ನು ಕೊಡುತ್ತೇನೆ :-- ಕ್ರಿಸ್ತಶಕ ಹತ್ತನೆಯ ಶತಮಾನದ ಮಧ್ಯಭಾಗದಲ್ಲಿ ಹುಟ್ಟಿದ ಒಂದು ಶಾಸನ ದಲ್ಲಿ "ಬೆಸುಗೆಯೆ ಕಳನಾಗೆ ಬೂತುಗಂ ರಾಜಾದಿತ್ಯನಂ ಕೊಂದಂ” ಎಂಬ ವಾಕ್ಯ ಪಿದೆ. ಇದಕ್ಕೆ ಆ೦ಗ್ಲೆಯ ಪಂಡಿತರು ರೇಗಿಸಲು ಕಳ್ಳನಾಗಿ ಬೂತುಗನು ರಾಜಾ ೧೦