ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಳಯುಕ್ತ ಸ!! ಆ ಸ್ವಯುಸಿ.ಉಪಸ೦ಹಾರಭಾಷಣ. | ಕರ್ಣಾಟಕ ಸಾಹಿತ್ಯ: - ... .... ದಿತ್ಯನನ್ನು ಕೊಂದನು” ಎಂದು ಆಪಾರ್ಥವನ್ನು ಮಾಡಿ ಗಂಗರಾಜನಾದ ಬೂತುಗನ ಮೇಲೆ ಇಲ್ಲದ ಕಳಂಕವನ್ನು ಆರೋಪಿಸಿದರು. ಈ ಅಪಾರ್ಥವೇ ಇಂಪೀರಿಯಲ್ ಗೆಜೆಟಿಯರಲ್ಲಿಯೂ ಪ್ರಕಟವಾಗಿದೆ. ನಮ್ಮ ಕನ್ನಡನಾಡಿನ ಪೂರ್ವರಾಜನಾದ ಬೂತುಗನಮೇಲೆ ಅಜ್ಞಾನದಿಂದ ಆರೋಪಿತವಾದ ಈ ಅಪವಾದವನ್ನು ನೋಡಿ ಮನಮರುಗಿ ನಾನು ಶೋಧನೆಮಾಡಿ ಈ ವಾಕ್ಯದ ನಿಜವಾದ ಅರ್ಥವನ್ನು ನಿರ್ಧರಿಸಿ ಈ ವಿಚಾರವನ್ನು ರಾಯಲ್ ಏಷಿಯಾಟಿಕ್ ಸೊಸೈಟಿ ಜರ್ನಲಿನಲ್ಲಿ ಪ್ರಕಟಮಾಡಿದ ಬಳಿಕ ಯೂರೋಪಿನಲ್ಲಿ ಅನೇಕ ಪಂಡಿತರು ಬೂತುಗನಿಗೆ ಅನ್ಯಾಯವಾಗಿ ಉಂಟಾ ಗಿದ್ದ ಅಪಯಶಸ್ಸನ್ನು ಹೋಗಲಾಡಿಸಿದುದಕ್ಕಾಗಿ ನನಗೆ ಶ್ಲಾಘಾಪತ್ರಗಳನ್ನು ಬರೆದರು. “ಬಿಸುಗೆ' ಯೆಂದರೆ ಆನೆಯಮೇಲಣ ಅಂಬಾರಿ, 'ಕಳ' ಎಂದರೆ ಯುದ್ಧರಂಗ. ಅಂಬಾರಿಯೇ ಯುದ್ಧರಂಗವಾಗಲು ಬೂತುಗನು ರಾಜಾದಿತ್ಯನನ್ನು ಕೊಂದನು ಎಂಬುದು ಆ ವಾಕ್ಯದ ನಿಜವಾದ ಅರ್ಥ, ಆದುದರಿಂದ ಶುದ್ದವಾದ ಬೃಹಕ್ಕೋಶ ವನ್ನು ಏರ್ಪಡಿಸಿದರೆ ಇಂತಹ ಅನರ್ಥಗಳಿಗೆ ಅವಕಾಶವಿಲ್ಲದಂತಾಗುವುದು. - ಸ್ವಾಗತಮಂಡಲಿಯವರು ಸಮ್ಮೇಳನಕ್ಕೆ ಬಂದಿರುವ ಪ್ರತಿನಿಧಿಗಳ ಮಾನ ಸಿಕಸುಖ ಮತ್ತು ಶಾರೀರಿಕಸುಖ ಇವುಗಳಿ ಗಾಗಿ ಮಾಡಿದ ಏರ್ಪಾಡುಗಳು ಬಹಳ ಶ್ಲಾಘನೀಯವಾಗಿವೆ. ನಾಟಕ, ಸಂಗೀತ, ಹರಿಕಥೆ, ಪಾಂಡಿತ್ಯ ಸೂಚಕ ವಾದ ನಿಬಂಧಗಳು, ನಾನಾಪ್ರಾಂತಗಳ ಕನ್ನಡಿಗರ ಪರಸ್ಪರದರ್ಶನಸಲ್ಲಾ ಪಾದಿಗಳಿಗೆ ಅವಕಾಶ -- ಇವೆಲ್ಲವೂ ಮನಸ್ಸಿಗೆ ಹೇರಳವಾಗಿ ಆನಂದವನ್ನುಂಟು ಮಾಡಿವೆ. ಇನ್ನು ಶರೀರಸೌಖ್ಯಕ್ಕೆ ಮಾಡಿದ ಆನುಕೂಲ್ಯವಾದರೋ ವರ್ಣನಾ ತೀತವಾಗಿದೆ. ಹಿಂದೆ ಒಬ್ಬ ಪ್ರಸಿದ್ದ ಕವಿ ಹೇಳಿದಂತೆ. ಆಸನಸ್ಥಾ ದ್ವಿಜಾಃ ಸರ್ವೆ ದೃಷ್ಟಾ ಭೋಜನಭಾಜನಂ । ಇ೦ದ್ರ ಬಾಣಾವಹೀ೦ದ್ರ೦ ಚ ಗಾಯ೦೦ ಚ ಸ್ಮರ೦ತಿ ಹಿ || ಇಲ್ಲಿ ಮಾಡಿದ್ದ ಪದಾರ್ಥಗಳನ್ನು ನೋಡಲು ಎರಡು ಕಣ್ಣುಗಳು ಸಾಲವು, ಇಂದ್ರನಿಗಿರುವಂತೆ ಸಾವಿರಕಣ್ಣುಗಳು ಬೇಕು: ಆ ಪದಾರ್ಥಗಳನ್ನು ಸ್ವೀಕರಿ ಸುವುದಕ್ಕೆ ಎರಡು ಕೈಗಳು ಸಾಲವು, ಬಾಣಾಸುರನಿಗಿರುವಂತೆ ಎರಡುಸಾವಿರ ಕೈಗಳಿರಬೇಕು; ಆ ಪದಾರ್ಥಗಳನ್ನು ರುಚಿನೋಡುವುದಕ್ಕೆ ಒಂದುನಾಲಗೆ ಸಾಲದು, ಆದಿಶೇಷನಿಗಿರುವಂತೆ ಎರಡುಸಾವಿರ ನಾಲಗೆಗಳು ಬೇಕು; ಮತ್ತು ಅವುಗಳನ್ನು ಭರಿಸುವುದಕ್ಕೆ ಒಂದು ಉದರವು ಸಾಲದು , ಗಾಯತ್ರಿದೇವಿಗಿರು ವಂತೆ ಆರು ಉದರಗಳಿರಬೇಕು. ಇವೆಲ್ಲಕ್ಕಿಂತಲೂ ಹೆಚ್ಚಾದುದು “ಭೋಜನಸ್ಕಾ ದರೋ ರಸಃ” ಎಂಬಂತೆ ತಮ್ಮಗಳ ಆದರಾತಿಶಯವು, ಕನ್ನಡಕವಿಯಾದ ಮಂಗ ರಸನು ನಮ್ಮ ಸಮ್ಮೇಳನ ಮಹೋತ್ಸವಕ್ಕಾಗಿಯೇ ಈಗ ೪೦೦ ವರ್ಷಗಳ ಕೆಳಗೆ ಈ ಪದ್ಯಗಳನ್ನು ಮಾಡಿಟ್ಟಂತೆ ತೋರುತ್ತದೆ... ೧೨೧